/newsfirstlive-kannada/media/media_files/2025/11/24/rajnath-singh-2025-11-24-10-06-42.jpg)
ಸಿಂಧೂ ನದಿ.. ಸಿಂಧೂ ಬಯಲಿನ ನಾಗರಿಕತೆಯ ಸಂಪರ್ಕ ಕೊಂಡಿಗಳು ಈಗಲೂ ಭಾರತದ ಜೊತೆ ಬಂಧ ಬೆಸೆದಿವೆ. ಹಿಂದೂ ಎನ್ನುವ ಹೆಸರು ಸಿಂಧೂ ಹೆಸರಿನಿಂದ ಬಂದಿದೆ ಎಂಬ ಅಭಿಪ್ರಾಯ ಇದೆ.. ದೇಶ ವಿಭಜನೆ ವೇಳೆ ಪಾಕಿಸ್ತಾನದ ಪಾಲಾಗಿದ್ದ ಹಿಂದೂ ಬಾಹುಳ್ಯ ಸಿಂಧ್ ಪ್ರಾಂತ್ಯ ಮತ್ತೆ ಭಾರತದ ಭಾಗವಾಗುವ ಭರವಸೆ ಮೂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ಪಾಕಿಸ್ತಾನ ಕಂಗಾಲಾಗುವಂತೆ ಮಾಡಿದೆ..
ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕಿಗಳು ಕಂಗಾಲು!
ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಪತರಗುಟ್ಟುವಂತೆ ಮಾಡಿದ್ದ ಭಾರತ ಇದೀಗ ನೆರೆ ರಾಷ್ಟ್ರ ಪಾಕ್ ಶೇಕ್ ಆಗುವಂತಹ ಮತ್ತೊಂದು ಎಚ್ಚರಿಕೆಯ ಸಂದೇಶ ನೀಡಿದೆ. ಗಡಿ ವಿಷಯಗಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆಯಿಂದ ಪಾಕಿಸ್ತಾನಕ್ಕೆ ನಡುಕ ಉಂಟಾಗಿದೆ. ನವದೆಹಲಿಯಲ್ಲಿ ಸಿಂಧಿ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, 1947ರ ದೇಶ ವಿಭಜನೆಯ ವೇಳೆ ಹಲವು ನಾಯಕರ ವಿರೋಧದ ನಡುವೆಯೂ ಸಿಂಧ್ ಪ್ರಾಂತ್ಯ ಪಾಕಿಸ್ತಾನದ ಕೈವಶವಾಗಿತ್ತು. ಹೀಗಾಗಿ ಸಿಂಧ್ ಪ್ರಾಂತ್ಯ ಶೀಘ್ರವೇ ಭಾರತದ ವಶ ಆಗಲಿದೆ.. ಗಡಿಗಳು ಬದಲಾಗಲಿವೆ ಅಂತ ಹೇಳಿಕೆ ನೀಡಿದ್ದು ಪಾಕಿಸ್ತಾನವನ್ನು ವಿಚಲಿತಗೊಳ್ಳುವಂತೆ ಮಾಡಿದೆ.
ಇಂದು ಸಿಂಧ್ ಭಾರತದ ಭಾಗವಾಗಿಲ್ಲ. ಆದ್ರೆ, ನಾಗರಿಕತೆ, ಪರಂಪರೆ ದೃಷ್ಟಿಯಿಂದ ಸಿಂಧ್ ಯಾವತ್ತಿಗೂ ಭಾರತದ ಭಾಗ ಆಗಿದೆ.. ನಾಳೆ ಏನಾಗುತ್ತೆ ಯಾರಿಗೆ ಗೊತ್ತು, ಗಡಿ ಬದಲಾಗಬಹುದು, ಭೂಪಟ ಹೊಸದಾಗಬಹುದು. ನಾಳೆ ಸಿಂಧ್ ಕೂಡ ಭಾರತದ ಭಾಗವಾಗಬಹುದು
ನಾನು ಇಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರ ಹೇಳಿಕೆಯನ್ನು ಉಲ್ಲೇಖಿಸಲು ಬಯಸುತ್ತೇನೆ, ಅಡ್ವಾಣಿಯವರು ತಮ್ಮ ಪುಸ್ತಕದಲ್ಲಿ ಬರೆದಿರುವಂತೆ ಸಿಂಧಿ ಹಿಂದೂಗಳು, ವಿಶೇಷವಾಗಿ ಅವರ ಪೀಳಿಗೆಯವರು ಎಂದಿಗೂ ಭಾರತದಿಂದ ಸಿಂಧ್ ಅನ್ನು ಬೇರ್ಪಡಿಸುವುದನ್ನು ಒಪ್ಪಿಕೊಂಡಿಲ್ಲ, ಸಿಂಧ್‌ನಲ್ಲಿ ಮಾತ್ರವಲ್ಲ, ಭಾರತದಾದ್ಯಂತ, ಹಿಂದೂಗಳು ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಸಿಂಧ್‌ನ ಅನೇಕ ಮುಸ್ಲಿಮರು ಸಿಂಧ್‌ನ ನೀರು ಮೆಕ್ಕಾದ ಆಬ್-ಎ-ಜಮ್ಜಾಮ್‌ಗಿಂತ ಕಡಿಮೆ ಪವಿತ್ರವಲ್ಲ ಅಂತ ನಂಬಿದ್ದರು
ರಾಜನಾಥ್ ಸಿಂಗ್, ರಕ್ಷಣಾ ಸಚಿವ
ಒಟ್ಟಾರೆ, ರಾಜನಾಥ್ ಸಿಂಗ್ ತಮ್ಮ ಹೇಳಿಕೆಯಿಂದ ಸಿಂಧ್ ಪ್ರಾಂತ್ಯ ಮತ್ತೆ ಭಾರತಕ್ಕೆ ಮರಳುವ ಬಗ್ಗೆ ಭರವಸೆ ಮೂಡಿಸಿದ್ದಾರೆ. ಗಡಿ ಸಂಘರ್ಷ, ಅಭಿವೃದ್ಧಿಯಲ್ಲಿ ತೀವ್ರ ಹಿಂದುಳಿದಿರುವಿಕೆ, ಪಾಕಿಸ್ತಾನ ಸರ್ಕಾರದ ಆಡಳಿತ ವೈಫಲ್ಯ ಇವೆಲ್ಲಾ ಕಾರಣಗಳಿಂದ ಪಿಓಕೆ ಸೇರಿದಂತೆ ಭಾರತ ಗಡಿ ಭಾಗದಲ್ಲಿರುವ ಜನರು ಭಾರತಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಇದಕ್ಕೆಲ್ಲಾ ಪುಷ್ಠಿ ನೀಡಿದಂತಿದೆ.
ಇದನ್ನೂ ಓದಿ: ಅಮೃತವಲ್ಲ.. ಅಮ್ಮಂದಿರ ಎದೆಹಾಲಿನಲ್ಲಿ ವಿಷಕಾರಿ ಅಂಶ ಪತ್ತೆ..! ಬಿಹಾರದಲ್ಲಿ ಶಾಂಕಿಗ್ ನ್ಯೂಸ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us