/newsfirstlive-kannada/media/media_files/2026/01/06/koppal-gavi-siddeshwara-jaatre-12-2026-01-06-10-59-43.jpg)
ಜನವರಿ 5, 2026 ರಂದು ಜರುಗಿದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವಕ್ಕೆ ಸುಮಾರು 6 ಲಕ್ಷಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾದ್ರೆ, ಕಳೆದ ನಾಲ್ಕು ದಿನಗಳಿಂದ ಗವಿಮಠಕ್ಕೆ ಗವಿಸಿದ್ದೇಶ್ವರ ಗದ್ದುಗೆ ದರ್ಶನ ಹಾಗೂ ಶ್ರೀಗಳ ಆಶೀರ್ವಾದಿಂದ ಪಡೆದ ಭಕ್ತರ ಸಂಖ್ಯೆ ಸುಮಾರು 16 ರಿಂದ 17ಲಕ್ಷ ಎಂದು ಅಂದಾಜಿಸಲಾಗಿದೆ.
ಇನ್ನೊಂದಡೆ ಈ ಬಾರಿ ಮಹಾದಾಸೋಹಕ್ಕೆ ಪ್ರಸಾದಕ್ಕೆ ಭಕ್ತರಿಗಾಗಿ ವಿಶೇಷವಾಗಿ ಸಿಹಿ ತಿನಿಸಿಗಳು ಅರ್ಪಿಸಿದ್ದಾರೆ. ಅದರಲ್ಲೂ ಅಜ್ಜನ ಜಾತ್ರೆಗೆ ರೊಟ್ಟಿ, ಪಲ್ಯ, ಪುಡಿಗಳು, ಚಟ್ನಿ ಹಾಗೂ ವಿವಿಧ ಉಪ್ಪಿನಕಾಯಿಗಳು ವಿಶೇಷವಾಗಿ ಭಕ್ತರಿಗೆ ಸವಿಯಲು ಸಿಗುತ್ತವೆ. ಈ ಬಾರಿಯೂ ಜಾತ್ರೆಗೆ ಭಕ್ತಿಪೂರ್ವಕವಾಗಿ ಮಾಹಾದಾಸೋಹಕ್ಕೆ ತಿನಿಸುಗಳನ್ನು ಭಕ್ತರು ಅರ್ಪಿಸಿದ್ದು ದಾಖಲೆ ನಿರ್ಮಾಣವಾಗಿದೆ.
/filters:format(webp)/newsfirstlive-kannada/media/media_files/2026/01/06/koppal-gavi-siddeshwara-jaatre-13-2026-01-06-10-59-21.jpg)
47 ಕ್ವಿಂಟಲ್ ರವೆ ಉಂಡಿ
ಜಾತ್ರೆ ಮಹಾದಾಸೋಹಕ್ಕಾಗಿ 19 ಲಕ್ಷ ರೊಟ್ಟಿ, 25 ಕ್ವಿಂಟಲ್ ಬುಂದಿ, 175 ಕ್ವಿಂಟಲ್ ಮೈಸೂರು ಪಾಕ್ 62 ಕ್ಚಿಂಟಲ್ ಶೇಂಗಾ ಹೋಳಿಗೆ, 647 ಕ್ವಿಂಟಲ್ ಮಾದಲಿ, 5 ಕ್ವಿಂಟಲ್ ಜಿಲೇಬಿ, 7 ಕ್ವಿಂಟಲ್ ಖರ್ಚಿಕಾಯಿ, 5 ಕ್ವಿಂಟಲ್ ಶಂಕ್ರಪೋಳಿ 155 ಕ್ವಿಂಟಲ್ ಸೋನ್ ಪಾಪಡಿ, 8 ಕ್ವಿಂಟಲ್ ಕರದಂಟು, 1 ಕ್ವಿಂಟಲ್ ಬದಾಮಿ ಪುರಿ, 47 ಕ್ವಿಂಟಲ್ ರವೆ ಉಂಡಿ, 6 ಕ್ವಿಂಟಲ್ ಮಿರ್ಚಿ, 5 ಕ್ವಿಂಟಲ್ ಅಪ್ಪಳ ಹೀಗೆ ಮಹಾದಾಸೋಹಕ್ಕೆ ಭಕ್ತರು ತಿನಿಸುಗಳನ್ನು ಅರ್ಪಿಸಿ ಭಕ್ತಿ ಮೆರೆದಿದ್ದು ದಾಖಲೆ ನಿರ್ಮಿಸಿದ್ದಾರೆ.
ಮಹಾಪ್ರಸಾದವೂ ಜನವರಿ 18ರವರೆಗೆ ನಡೆಯಲಿದ್ದೂ ಲೆಕ್ಕಕ್ಕೆ ಸಿಗದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿಗಳನ್ನು ಭಕ್ತರು ಗವಿಸಿದ್ದಪ್ಪ ಅಜ್ಜನ ಜಾತ್ರೆ ಅರ್ಪಿಸಿ ದಾಖಲೇ ಸೃಷ್ಟಿಸಿದ್ದಾರೆ. ವಿಶೇಷವಾಗಿ ಹೆಸರು ಹೇಳದೆ ಬೀದಿಬದಿ ವ್ಯಾಪಾರಿ ಅಜ್ಜಿಯೊಬ್ಬರು ಕೊತಂಬರಿ ಸೂಡುಗಳನ್ನು ನೀಡಿದ್ದು ಹಾಗೂ ಕೊಪ್ಪಳದ ಜೈಲಿನ ಖೈದಿಗಳು ಒಂದೊತ್ತು ಊಟದ ದವಸ ಧಾನ್ಯಗಳನ್ನು ಮಠಕ್ಕೆ ಅರ್ಪಿಸಿದ್ದು, ಅಭಿನವ ಗವಿಸಿದ್ದೇಶ್ವರ ಶ್ರೀಗಳ ಕಣ್ಣಲ್ಲಿ ಆನಂದ ಭಾಷ್ಪ ಹಾಗೂ ಭಾವುಕತೆ ಒಳಗಾಗಿದ್ದಂತೂ ನಿಜ! ಕೊಪ್ಪಳ ಜಾತ್ರೆ ಅಂದ್ರೆ ಭಕ್ತರ ಜಾತ್ರೆ, ಭಕ್ತರೆ ನಡೆಸುವ ಜಾತ್ರೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us