/newsfirstlive-kannada/media/media_files/2025/10/28/kpl-suicide-2025-10-28-10-54-08.jpg)
ಕೊಪ್ಪಳ: ಕುಕನೂರ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಇಬ್ಬರು ಮಕ್ಕಳ ಜೀವ ತೆಗೆದು ತಾಯಿ ಪ್ರಾಣ ಬಿಟ್ಟ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಬಳೆಯಲ್ಲಿ ಪತ್ರವನ್ನಿಟ್ಟು ತಾಯಿ ಲಕ್ಷಮ್ಮ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಮಕ್ಕಳಾದ ರಮೇಶ್ ಹಾಗೂ ಜಾನವಿಯನ್ನು ನೇಣು ಹಾಕಿದ್ದಾಳೆ. ಈ ಸಾವಿನ ಹಿಂದೆ ಅನೈತಿಕ ಸಂಬಂಧ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆಯೇನು..?
ಜೀವ ಕಳೆದುಕೊಂಡ ಲಕ್ಷ್ಮೀಗೆ ಅದೇ ಗ್ರಾಮದಲ್ಲಿ ಬೀರಪ್ಪ ಎಂಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧವಿತ್ತು ಎಂಬ ವಿಚಾರ ಗೊತ್ತಾಗಿದೆ. ಈ ವಿಚಾರ ಲಕ್ಷ್ಮೀ ಮನೆಯವರಿಗೆ ಗೊತ್ತಾದ ಹಿನ್ನೆಲೆ ಹಲವು ಬಾರಿ ಬುದ್ಧಿ ಹೇಳಿದರೂ, ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದ್ದರು. ನಿನ್ನೆ ಕೂಡ ಈ ವಿಚಾರ ಗ್ರಾಮದಲ್ಲಿ ಗೊತ್ತಾಗಿದ್ದರಿಂದ ಹಿರಿಯರು ಬೀರಪ್ಪನನ್ನು ಕರೆದು ಬುದ್ಧಿ ಹೇಳಿದ್ದರು.
ಇನ್ನೂ ಬೀರಪ್ಪ ಮೃತ ಲಕ್ಷ್ಮೀಗೆ ಗಂಡ ಮಕ್ಕಳನ್ನು ಬಿಟ್ಟು ಬಾ ಎಂದು ಪದೇ ಪದೇ ಹಿಂಸೆ ನೀಡಿದ ಪರಿಣಾಮ ಲಕ್ಮ್ಮೀ ಮನನೊಂದಿದ್ದಾಳೆ. ಇದರಿಂದಾಗಿ ಲಕ್ಮ್ಮೀ ಮಕ್ಕಳನ್ನು ನೇಣು ಹಾಕಿ, ತಾನೂ ನೇಣಿಗೆ ಶರಣಾಗಿದ್ದಾಳೆ. ಸದ್ಯ ಈ ಸಂಬಂಧ ಬೀರಪ್ಪ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ ಮೃತಳ ತಾಯಿ ದೂರು ದಾಖಲು ಮಾಡಿದ್ದಾರೆ. 103(1), 108,351 (2) (3) ಹಾಗೂ BNS 2023 -3 (1) ಹಾಗೂ ಎಸ್​ಎಸ್ಸಿ, ಎಸ್​​ಟಿ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us