/newsfirstlive-kannada/media/media_files/2026/02/08/koppal-boys-2026-02-08-12-39-50.jpg)
ಕೊಪ್ಪಳ: ಮೋಜು-ಮಸ್ತಿಗಾಗಿ ಸ್ನೇಹಿತರೆಲ್ಲಾ ಸೇರಿ ಪಾರ್ಟಿ ಮಾಡಲು ಹೋಗಿದ್ದ ಯುವಕರ ಬಾಳಲ್ಲಿ ವಿಧಿ ಆಟವಾಡಿದೆ. ಸಾರಾಯಿ ಎಂದು ಭಾವಿಸಿ ಸ್ಪಿರಿಟ್ (Spirit) ಸೇವಿಸಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ.
ಕೂಕನಪಳ್ಳಿಯ ರಮೇಶ ಹೊಸಳ್ಳಿ ಮತ್ತು ಅಮರಯ್ಯ ಹಿರೇಮಠ ಮೃತ ದುರ್ದೈವಿಗಳು.
ಘಟನೆಯ ವಿವರ
ಫೆಬ್ರವರಿ 4 ರಂದು ಕೂಕನಪಳ್ಳಿ ಗ್ರಾಮದ ಜಮೀನೊಂದರಲ್ಲಿ ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಮಾರುತಿ ಹಾಗೂ ಶರಣಪ್ಪ ಗುರಿಕಾರ ಎಂಬುವವರು ಸಾರಾಯಿ ಎಂದು ಹೇಳಿ ಸ್ಪಿರಿಟ್ ನೀಡಿದ್ದಾರೆ ಎನ್ನಲಾಗಿದೆ. ಇದು ಸ್ಪಿರಿಟ್ ಎಂದು ತಿಳಿಯದ ರಮೇಶ ಹೊಸಳ್ಳಿ, ಶರಣಪ್ಪ ಹಂಚಿನಾಳ ಹಾಗೂ ಅಮರಯ್ಯ ಹಿರೇಮಠ ಅದನ್ನು ಸೇವಿಸಿದ್ದಾರೆ.
ನಾಲ್ವರು ಆಸ್ಪತ್ರೆಗೆ, ಇಬ್ಬರ ಬಲಿ
ಸ್ಪಿರಿಟ್ ಕುಡಿದ ತಕ್ಷಣ ನಾಲ್ವರು ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಮೇಶ ಹೊಸಳ್ಳಿ ನಿನ್ನೆ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅಮರಯ್ಯ ಹಿರೇಮಠ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿತ್ತಾದರೂ, ಅವರು ಚಿಕಿತ್ಸೆ ಫಲಿಸದೆ ಇಂದು (ಭಾನುವಾರ) ಕೊನೆಯುಸಿರೆಳೆದಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು
ಈ ಸಂಬಂಧ ಮೃತ ರಮೇಶ ಅವರ ತಂದೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೋಜಿನ ಪಾರ್ಟಿ ಇದೀಗ ಎರಡು ಕುಟುಂಬಗಳಲ್ಲಿ ಸೂತಕದ ಛಾಯೆ ಮೂಡಿಸಿದೆ.
ಇದನ್ನೂ ಓದಿ: ನಂಬಿಕೆ ದ್ರೋಹ, ಮುರಿದು ಬಿದ್ದ ಮದುವೆ..! ಬೆಂಕಿ ಚೆಂಡಿನಂತೆ ಎದ್ದು ಬಂದ ಮಂಧಾನರ ರೋಚಕ ಸ್ಟೋರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us