/newsfirstlive-kannada/media/media_files/2026/02/08/smriti-mandana-11-2026-02-08-12-19-21.jpg)
ಛಲ ಇಲ್ಲ ಅಂದ್ರೆ ಕಪ್​ ಅಲ್ಲ...ಒಂದು ಸಣ್ಣ ಕಾಂಪಿಟಿಷನ್​ ಕೂಡ ಗೆಲ್ಲೋದಕ್ಕಾಗಲ್ಲ..ಅಂತಹದ್ರಲ್ಲಿ ಆರ್​ಸಿಬಿಗೆ ಎರಡೆರಡು ಕಪ್​ ತಂದುಕೊಟ್ಟ ಸ್ಮೃತಿ ತುಂಬಾನೇ ಸಣ್ಣ ವಯಸ್ಸಿನಿಂದಲೇ ತಾವು ಪ್ರೀತಿಸೋ ಕ್ರಿಕೆಟ್​ ಆಟವನ್ನ ಕರಗತ ಮಾಡಿಕೊಳ್ಳೋದಕ್ಕೆ ಶುರುಮಾಡಿದ್ರು.. ವಿಶ್ವಕಪ್​ ಗೆಲ್ಲುತ್ತಿದ್ದಂತೆ ಜೀವನದಲ್ಲಿ ಕಲ್ಪನೆಗೂ ಮೀರಿದ ಪೆಟ್ಟು ಕೊಟ್ಟುಬಿಟ್ಟಿದ್ದ ತುಂಬಾನೇ ಪ್ರೀತಿಸಿದ ಹುಡುಗ..ಅಷ್ಟಕ್ಕೂ, ಸ್ಮೃತಿ ಮಂಧಾನ ಹಾಗೂ ಪಲಾಶ್​ ಮುಚ್ಚಲ್​ ಮದುವೆ ಮುರಿದು ಬೀಳಲು ಕಾರಣವಾದ್ರೂ ಏನು?
6 ವರ್ಷಗಳು...ಬರೋಬ್ಬರಿ 6 ವರ್ಷಗಳ ಪ್ರೀತಿ...ಆರ್​​ಸಿಬಿ ನಾಯಕಿ ಸ್ಮೃತಿ ಮಂಧಾನ ತಾವು ಮದುವೆಯಾಗಬೇಕಿದ್ದ ಹುಡುಗನನ್ನ 6 ವರ್ಷಗಳ ಪ್ರೀತಿ ಮಾಡಿದ್ದರು...ಇಬ್ಬರ ಪ್ರೀತಿಯನ್ನ ನೋಡಿದವ್ರು ಇವ್ರು ಮದುವೆಯಾದ ತುಂಬಾನೇ ಸುಖಕರವಾಗಿರ್ತಾರೆ ಅಂತಾನೇ ಭಾವಿಸಿದ್ದರು..ಆದ್ರೆ, ಅದು ಸಾಧ್ಯವಾಗಲಿಲ್ಲ..ಇನ್ನೇನು, ತಾಳಿ ಕಟ್ಟೋಕೆ ಕೆಲವೇ ಗಂಟೆಗಳಿರೋವಾಗ ಸ್ಮೃತಿಯ ತಂದೆ ಆಸ್ಪತ್ರೆಗೆ ಅಡ್ಮಿಟ್ ಆಗ್ತಾರೆ...ಅವರ ಬೆನ್ನಲ್ಲೇ ಸ್ಮೃತಿಯ ಪತಿಯಾಗಬೇಕಿದ್ದ ಪಲಾಶ್ ಕೂಡ ಅಸ್ವಸ್ಥವಾಗಿ ಆಸ್ಪತ್ರೆ ಸೇರಿಕೊಳ್ತಾನೆ..ಅಷ್ಟೇ, ಅಲ್ಲಿಗೆ ಇಬ್ಬರ ಮದುವೆಗಷ್ಟೇ ಅಲ್ಲ..6 ವರ್ಷಗಳ ಪ್ರೀತಿಗೂ ಎಳ್ಳು ನೀರು ಬಿಟ್ಟಂಗಾಗಿತ್ತು..
ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುವಂತೆ ಅತ್ತೆ ಟಾರ್ಚರ್​.. 11 ತಿಂಗಳ ಮಗುವನ್ನ ಅನಾಥ ಮಾಡಿ ಜೀವಬಿಟ್ಟ ಸೊಸೆ..!
/filters:format(webp)/newsfirstlive-kannada/media/media_files/2026/02/08/smriti-mandana-7-2026-02-08-12-16-20.jpg)
ಮದುವೆ ಮುರಿದುಬಿದ್ರೂ ಬೆಂಕಿ ಚೆಂಡಿನಂತೆ ಎದ್ದು ಬಂದ್ರು!
ನಿಜಕ್ಕೂ ಶಾಕಿಂಗ್​...ಇವತ್ತಿಗೂ ಸ್ಮೃತಿ ಮಂಧಾನಾರ ಬದುಕಿನಲ್ಲಿ ಏನ್​ ನಡೀತು ಅನ್ನೋದನ್ನ ಯಾರಿಗೂ ಕಲ್ಪನೆಯನ್ನೇ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ..ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮವೆಲ್ಲಾ ಆಗೋಗಿತ್ತು..ಇನ್ನೇನು ಮದುವೆ ಆಗ್ಬೇಕು ಅನ್ನೋವಷ್ಟರಲ್ಲಿ ಮದುವೆ ನಿಂತಿದ್ದಾದ್ರೂ ಯಾಕೆ ಅನ್ನೋವಾಗ ಕೇಳಿ ಬಂದ ಉತ್ತರವೇ ಮೋಸ..ನಂಬಿಕೆ ದ್ರೋಹ
ಸ್ಮೃತಿ ಮಂಧಾನರ ಮದುವೆ ಕೊನೆ ಕ್ಷಣದಲ್ಲಿ ಯಾಕ್​ ನಿಂತ್​ ಹೋಯ್ತು ಅನ್ನೋ ಚರ್ಚೆಗಳು ನಡೀತಿರೋವಾಗಲೇ, ಸ್ಮೃತಿಯ ಪ್ರೇಮಿಯಾಗಿದ್ದ ಪಲಾಶ್​ ಮುಚ್ಚಲ್​ ಮೇಲೆ ಸ್ಫೋಟಕ ಆರೋಪಗಳು ಕೇಳಿಬರೋದಕ್ಕೆ ಶುರುವಾಗುತ್ವೆ..ಆ ಆರೋಪಗಳಿಗೆ ಪುಷ್ಠಿ ನೀಡುವಂತಹ ಕೆಲವೊಂದು ಚಾಟ್​​ಗಳು ಸ್ಕ್ರೀನ್​ಶಾಟ್​ಗಳೂ ಕೂಡ ಸಿಕ್ಕಾಪಟ್ಟೆ ವೈರಲ್​ ಆಗುತ್ವೆ...ಸ್ಮೃತಿಯ ಪ್ರಿಯಕರನಾಗಿದ್ದ ಪಲಾಶ್​, ಸ್ಮೃತಿ ಜೊತೆಗೆ ರಿಲೇಷನ್​​​ಶಿಪ್​ನಲ್ಲಿ ಇರೋವಾಗಲೇ ಮತ್ತೊಂದು ಹೆಣ್ಣಿನ ಜೊತೆಗೆ ಪಲಾಶ್​ ಸಂಬಂಧ ಹೊಂದಿದ್ದನಂತೆ..ಆದ್ರೆ, ಮದುವೆ ಮನೆಗೆ ಬರೋವರೆಗೂ ಸ್ಮೃತಿಗೆ ಈತನಿಂದ ತಾನು ಮೋಸ ಹೋಗ್ತಿದ್ದೀನಿ ಅನ್ನೋ ವಿಚಾರ ಕಿಂಚಿತ್ತೂ ಅರಿವಿಗೆ ಬಂದಿರಲಿಲ್ಲ..ಯಾರೋ ಸ್ನೇಹಿತರು ಹೇಳಿದ್ಮೇಲೇನೇ ಗೊತ್ತಾಗಿದ್ದು..ಅಷ್ಟೇ ಅಲ್ಲ, ಪಲಾಶ್​ ಮದುವೆ ಮನೆಯಲ್ಲಿಯೇ ಮತ್ತೊಂದು ಹುಡುಗಿಯ ಜೊತೆಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ...ಅಲ್ಲೇ ಇದ್ದ ಮಹಿಳಾ ಕ್ರಿಕೆಟರ್​ಗಳಿಗೆ ಅದು ಗೊತ್ತಾಗಿ, ಪಲಾಶ್​ಗೆ ಮನಬಂದಂತೆ ಥಳಿಸಿದ್ದರಂತೆ..ಅದಾದ್ಮೇಲೆಯೇ ಪಲಾಶ್​ ಆಸ್ಪತ್ರೆಗೆ ಹೋಗಿದ್ದು ಅನ್ನೋದು ಸ್ಮೃತಿಯ ಬಾಲ್ಯ ಸ್ನೇಹಿತ ಬಿಟ್ಟಿಟ್ಟ ಸ್ಫೋಟಕ ವಿಚಾರ..
/filters:format(webp)/newsfirstlive-kannada/media/media_files/2026/02/08/smriti-mandana-9-2026-02-08-12-16-20.jpg)
"ಅವನಿಂದ ಸ್ಮೃತಿಗೆ ಮೋಸ"
ನಾನು ಸ್ಮೃತಿ ಹಾಗೂ ಪಲಾಶ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿದೆ..ಪಲಾಶ್ ಮದುವೆ ಮನೆಯಲ್ಲಿಯೇ ಮತ್ತೊಂದು ಹೆಣ್ಣಿನ ಜೊತೆಗೆ ಬೆಡ್ ಮೇಲೆ ರೆಡ್ ಹ್ಯಾಂಡಾಗಿ ಸಿಕ್ಕಿಬದ್ದಿದ್ದ..ಆ ದೃಶ್ಯ ತುಂಬಾನೇ ಭಯಾನಕವಾಗಿತ್ತು..ಅದಾದ್ಮೇಲೆ ಅಲ್ಲೇ ಇದ್ದ ಮಹಿಳಾ ಕ್ರಿಕೆಟರ್ಗಳು ಪಲಾಶ್ನನ್ನು ಮನಬಂದಂತೆ ಥಳಿಸಿದ್ರು..ಅವರ ಇಡೀ ಕುಟುಂಬವೇ ಮೋಸದ ಕುಟುಂಬ..ನಾನು ಆತ ಸ್ಮೃತಿಯನ್ನು ಮದುವೆಯಾಗಿ, ಸಾಂಗ್ಲಿಯಲ್ಲಿ ಸೆಟಲ್ ಆಗ್ತಾನೆ ಅಂತಾ ಅಂದುಕೊಂಡಿದ್ದೆ..ಆದ್ರೆ, ನನ್ನೆಲ್ಲಾ ಊಹೆಗಳೂ ಸುಳ್ಳಾಗಿತ್ತು..
-ವಿದ್ನ್ಯಾನ್, ಸ್ಮೃತಿಯ ಸ್ನೇಹಿತ
ಇಷ್ಟೆಲ್ಲಾ ನಡೆದಿದ್ರೂ, ತನ್ನ ಜೀವನದಲ್ಲಿ ಇಷ್ಟೆಲ್ಲಾ ಮೋಸವಾದ್ರೂ ಸ್ಮೃತಿ ಮಂಧಾನ ತಮ್ಮ ವೈಯಕ್ತಿಕ ಬದುಕಲ್ಲಾದ ನೋವಿನ ಬಗ್ಗೆ ಎಲ್ಲಿಯೂ ಶೇರ್​ ಮಾಡಿಲ್ಲ..ಆದ್ರೆ, ಪಲಾಶ್​ ಮಾತ್ರ ತನ್ನ ವಿರುದ್ಧ ಕೇಳಿಬಂದ ಆರೋಪಗಳೆಲ್ಲಾ ಸುಳ್ಳು ಅಂತಾ ಇಂದಿಗೂ ಬಡ್ಕೊತ್ತಿದ್ದಾನೆ..ಆದ್ರೆ, ಸ್ಮೃತಿ ಮಾತ್ರ ತನಗಾದ ನೋವನ್ನ ಒಳಗೇ ನುಂಗಿಕೊಂಡು ತನ್ನ ಕೆಲಸದಲ್ಲಿ ತೊಡಗಿದ್ದಾರೆ...ಇದಕ್ಕೆ ಕಾರಣ ಬೇರೇನೂ ಅಲ್ಲ...ಸ್ಮೃತಿಗೆ ತಾನು ತನ್ನ, ಜೀವನವನ್ನೇ ಸಂಪೂರ್ಣ ಅರ್ಪಣೆ ಮಾಡಿಕೊಂಡಿರೋ ಅದೊಂದು ಆಟ...ಆ ಆಟ ಬೇಱವುದೂ ಅಲ್ಲ..ಕ್ರಿಕೆಟ್​...
9ನೇ ವಯಸ್ಸಿನಿಂದಲೇ ಕ್ರಿಕೆಟ್​ ಅಂದ್ರೆ ಪ್ರಾಣ.. ನುರಿತ ತರಬೇತಿ!
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮನೆಯೊಂದರಲ್ಲಿ ಜನಿಸಿದ ಸ್ಮೃತಿ ಮಂದಾನಾಗೆ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್​ ಅಂದ್ರೆ ಎಲ್ಲಿಲ್ಲದ ಕ್ರೇಜ್​..ಸ್ಮೃತಿಯ ತಂದೆ ಶ್ರೀನಿವಾಸ ಮಂಧಾನ ಒಬ್ಬ ಕೆಮಿಕಲ್​ ಡಿಸ್ಟ್ರಿಬ್ಯೂಟರ್​ ಆಗಿದ್ರು..ಸ್ಮೃತಿ ಮನೆಯಲ್ಲಿ ಕ್ರಿಕೆಟ್​ ಕ್ರೇಜ್​ ಹೆಚ್ಚಿದ್ದ ಕಾರಣ ಸ್ಮೃತಿಗೂ ಕ್ರಿಕೆಟ್​ ಕಲೀಬೇಕು ಅನ್ನೋ ಆಸೆ ಹುಟ್ಟುತ್ತೆ ..ಈ ಕಾರಣಕ್ಕೇನೇ ತಮ್ಮ 9ನೇ ವಯಸ್ಸಿಗೇ ಕ್ರಿಕೆಟ್​ ಕೋಚಿಂಗ್​ ಕ್ಲಾಸ್ ಸೇರಿಕೊಳ್ತಾರೆ..ಆ ವಯಸ್ಸನಲ್ಲಿ ಬೇರೆ ಮಕ್ಕಳು ಐಸ್​ಪೈಸೋ, ಕಣ್ಣಾಮುಚ್ಚಾಲೇನೋ ಆಡ್ತಾ ಇದ್ರು..ಅಂತಹ ಸ್ಮೃತಿ ಬೆಳಗಿನ ಜಾವ ಐದು ಗಂಟೆಗೇ ಎದ್ದು ಕ್ರಿಕೆಟ್ ಪ್ರಾಕ್ಟೀಸ್​ ಶುರುಮಾಡ್ತಾರೆ..ಇನ್ನು ಸ್ಮೃತಿ ಕ್ರಿಕೆಟ್​ ಕಲಿಯೋದಕ್ಕಾಗಿ, ತಮ್ಮ ಮನೆಯಿಂದ ಸಾಕಷ್ಟು ಕಿಲೋಮೀಟರ್​ಗಳ ದೂರ ಕ್ರಮಿಸ್ತಿದ್ರು ಎನ್ನುವ ಮಾತಿದೆ...ಅಂತಹ ಸ್ಮೃತಿ ಇವತ್ತು ಆರ್​ಸಿಬಿ ಅಷ್ಟೇ ಅಲ್ಲ, ಇಡೀ ಭಾರತಕ್ಕೇನೇ ಹೆಮ್ಮೆಯ ಮಗಳಾಗಿದ್ದಾಳೆ ಅಂದ್ರೆ ತಪ್ಪಿಲ್ಲ..
/filters:format(webp)/newsfirstlive-kannada/media/media_files/2026/02/08/smriti-mandana-10-2026-02-08-12-16-20.jpg)
ಸ್ಮೃತಿ ಮಂಧಾನಾಗೆ ಈಗ 29 ವರ್ಷ ವಯಸ್ಸು..ಈಗಾಗಲೇ ಕ್ರಿಕೆಟ್​ನಲ್ಲಿ ಬೆಟ್ಟದಷ್ಟು ಸಾಧನೆ ಮಾಡಿರೋ ಸ್ಮೃತಿ ಇನ್ನೂ ಅಪಾರ ಸಾಧಿಸುವ ಗುರಿ ಇಟ್ಕೊಂಡಿದ್ದಾರೆ..ಇಂತಹ ಸ್ಮೃತಿ ಏನಾದ್ರೂ ಸರಿ, ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಾತ್ರ ಕಾಂಪ್ರಮೈಸ್ ಆಗ್ತಿಲ್ಲ..ಅದೆಷ್ಟೇ ಕಷ್ಟ ಇದ್ರೂ ಸರಿ, ಬೆಳಗ್ಗೆ 5 ಗಂಟೆಗೆ ಇವತ್ತಿಗೂ ಏಳುವ ಸ್ಮೃತಿ ತಮ್ಮನ್ನ ತಾವು ವರ್ಕೌಟ್​ನಲ್ಲಿ ತೊಡಗಿಸಿಕೊಳ್ತಾರೆ..ಸಾಕಷ್ಟು ಕಸರತ್ತು ಮಾಡ್ತಾರೆ..ಜೊತೆಗೆ ಯೋಗ, ಧ್ಯಾನ ಮಾಡೋದನ್ನೂ ಕೂಡ ಸ್ಮೃತಿ ಮಿಸ್​ ಮಾಡೋದಿಲ್ಲ..ಇಂತಹ ಶಿಸ್ತಿನ ಜೀವನ ಇರೋ ಕಾರಣಕ್ಕೇನೇ ಸ್ಫೋಟಕ ಲೆಫ್ಟ್ ಹ್ಯಾಂಡರ್ ಇವತ್ತು ಆರ್​​ಸಿಬಿ ಮಹಿಳಾ ತಂಡದ ಗ್ರೇಟ್​ ಲೀಡರ್​ ಆಗಿ ಹೊರಹೊಮ್ಮಿರೋದು...ಅಷ್ಟೇ ಅಲ್ಲ, ನೀವು ಗ್ರೌಂಡಲ್ಲಿ ಯಾವಾಗ್​ ಬೇಕಾದ್ರೂ ನೋಡಿ, ಯಾವಾಗಲೂ ಸಖತ್​ ಕಾಮ್​ ಌಂಡ್ ಕಂಪೋಸ್ಡ್​​ ಆಗಿರೋ ಸ್ಮೃತಿ ಮಂಧಾನ ಯಾವತ್ತೂ ಕೂಡ ಆಟ ಆಡೋವಾಗ ಗೊಂದಲಕ್ಕೆ ಒಳಗಾದವರೇ ಅಲ್ಲ...
ಇದನ್ನೂ ಓದಿ: ಗಣಿ ನಾಡಿನ ಒಡಲಲ್ಲಿ ಅಡಗಿದ ಸಾವಿರಾರು ವರ್ಷಗಳ ಇತಿಹಾಸ.. 5000 ವರ್ಷಗಳ ಹಿಂದಿನ ಮಾನವರ ಪಳೆಯುಳಿಕೆ ಪತ್ತೆ
ಸ್ಮೃತಿಗೆ ಕ್ರಿಕೆಟ್​ ಮೇಲೆ ಅದೆಷ್ಟು ಪ್ರೀತಿ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಕೊಡ್ತೀವಿ ನೋಡಿ..ಸ್ಮೃತಿ ಮಂಧಾನಾಗೆ ತಾವು ದುಡಿದ ದುಡ್ಡಿನಲ್ಲಿ ಒಂದೊಳ್ಳೆ ಫಾರ್ಮ್​ಹೌಸ್​ ಕಟ್ಬೇಕು ಅಂತಾ ಆಸೆ ಇತ್ತು..ಆ ಆಸೆಯಂತೆಯೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸ್ಮೃತಿ ಅರಮನೆಯಂತಹ ಫಾರ್ಮ್​ ಹೌಸ್​ ಒಂದನ್ನ ಕಟ್ಕೊಂಡಿದ್ದಾರೆ..ಬಟ್​, ಈ ಫಾರ್ಮ್​ಹೌಸ್​ನಲ್ಲಿ ವಿಶೇಷ ಅಂದ್ರೆ, ಈಕೆ ಮನೆಯಲ್ಲಿದ್ರೂ ತಮ್ಮ ಕ್ರಿಕೆಟ್​ ಪ್ರ್ಯಾಕ್ಟೀಸ್​ಗಾಗಿ ಅಂತಲೇ ಮಾಡಿಕೊಂಡಿರೋ ಜಾಗ..ಹೌದು, ಸ್ಮೃತಿ ಕ್ರಿಕೆಟ್​​ ಪ್ರ್ಯಾಕ್ಟೀಸ್ ಮಾಡೋದಕ್ಕೆ ಈ ಮನೆಯ ಕಾಂಪೌಂಡ್​ ಒಳಗೆ ಒಂದು ಪರ್ಸನಲ್​ ಪ್ರ್ಯಾಕ್ಟೀಸ್​ ಪಿಚ್​ ಇದೆ..ನೆಟ್​ ಸೆಟಪ್​ ಕೂಡ ಇದೆ..ಅಷ್ಟೇ ಅಲ್ಲ ಬಾಲ್​ ಎಸೆಯೋದಕ್ಕೆ ಬೌಲಿಂಗ್​ ಮಷಿನ್​ ಕೂಡ ಇದ್ದು, ಯಾವುದೇ ಸ್ಟೇಡಿಯಂ ಅಥವಾ ಮೈದಾನವನ್ನ ಡಿಪೆಂಡ್ ಆಗದೇ ತನ್ನದೇ ಮನೆಯಲ್ಲಿ ಪ್ರ್ಯಾಕ್ಟೀಸ್ ಮಾಡಬಹುದಾಗಿದೆ..
/filters:format(webp)/newsfirstlive-kannada/media/media_files/2026/02/08/smriti-mandana-7-2026-02-08-12-16-20.jpg)
ಶ್ರದ್ಧೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಸ್ಮೃತಿ ಮಂಧಾನಾ ಕೂಡ ಒಬ್ಬರು ಸ್ಪಷ್ಟ ಉದಾಹರಣೆ..ಯಾವುದೇ ಸೆಲೆಬ್ರಿಟಿ ಆದರೂ ಅಷ್ಟೇ ಅವರು ಕೆಲಸ ಮಾಡೋ ಕ್ಷೇತ್ರದಲ್ಲಿ ಸಕ್ಸಸ್​ ಕಂಡ್ರು ಅಂತಾದ್ರೆ, ಅಂತಹ ಸೆಲೆಬ್ರಿಟಿಗಳ ಬ್ರ್ಯಾಂಡ್​ ವ್ಯಾಲ್ಯೂ ರಾತ್ರೋ ರಾತ್ರಿ ರಾಕೆಟ್​ ವೇಗದಲ್ಲಿ ರೈಸ್ ಆಗೋದ್ರಲ್ಲಿ ಸಂಶಯವಿಲ್ಲ..ಅದೇ ರೀತಿ ವಿಶ್ವಕಪ್​ ಗೆಲುವಿನ ಬಳಿಕ ಸ್ಮೃತಿಯ ಬ್ರ್ಯಾಂಡ್​ ವ್ಯಾಲ್ಯೂ ಕೂಡ ಸಿಕ್ಕಾಪಟ್ಟೆ ರೈಸ್​ ಆಗಿದೆ..ವಿಶ್ವಕಪ್​ ಗೆಲುವಿನ ಬಳಿಕ ಸ್ಮೃತಿಯ ಬ್ರ್ಯಾಂಡ್​ ವ್ಯಾಲ್ಯೂ ಬರೋಬ್ಬರಿ ಶೇಕಡಾ 30ರಿಂದ 50 ಪರ್ಸೆಂಟ್​ನಷ್ಟು ಜಂಪ್​ ಆಗಿದೆ..ಅಷ್ಟೆ ಅಲ್ಲ..ಯಾವುದೇ ಜಾಹೀರಾತಿಗೆ ಸ್ಮೃತಿ ಸಹಿ ಮಾಡಿದ್ರೆ ಆ ಜಾಹೀರಾತು ಕಂಪೆನಿಯವರು ಮಿನಿಮಮ್ ಒಂದು ಕೋಟಿ ರೂಪಾಯಿ ಕೊಡಲೇಬೇಕು...ಬಿಸಿಸಿಐ ಕಾಂಟ್ರ್ಯಾಕ್ಟ್​ ಪ್ರಕಾರ ಗ್ರೇಡ್​ ಎ ಪ್ಲೇಯರ್ ಆಗಿರೋ ಸ್ಮೃತಿ ಮಂಧಾನ ಪ್ರತೀ ವರ್ಷ ಬಿಸಿಸಿಐನಿಂದ 50 ಲಕ್ಷ ರೂಪಾಯಿ ಪಡೆದುಕೊಳ್ತಾರೆ..ಇನ್ನು, ಒಂದು ಟೆಸ್ಟ್​ ಮ್ಯಾಚ್​ಗೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ20ಗೆ 3 ಲಕ್ಷ ರೂಪಾಯಿಯನ್ನ ಪ್ರತೀ ಪಂದ್ಯಕ್ಕೂ ಪಡೆದುಕೊಳ್ತಾರೆ ಸ್ಮೃತಿ ಮಂಧಾನ..ಇದನ್ನ ಹೊರತುಪಡಿಸಿ ಫ್ರ್ಯಾಂಚೈಸಿ ಕ್ರಿಕೆಟ್ ಅಂತಾ ಬಂದ್ರೆ,, ಆರ್​​ಸಿಬಿ ಕ್ಯಾಪ್ಟನ್​ ಆಗಿರೋ ಸ್ಮೃತಿಗೆ ಪ್ರತೀ ಸೀಸನ್​ಗೆ 3.5 ಕೋಟಿ ರೂಪಾಯಿ ಸಿಗಲಿದ್ದು, ಡಬ್ಲ್ಯೂಪಿಎಲ್​ನಲ್ಲಿ ಸ್ಮೃತಿಯೇ ಅತೀ ಹೆಚ್ಚು ಹಣ ಪಡೆದುಕೊಳ್ಳುವ ಕ್ರಿಕೆಟರ್​ ಆಗಿದ್ದರೆ..ಇದನ್ನೆಲ್ಲಾ ಸೇರಿಸಿದ್ರೆ, ಸ್ಮೃತಿ ಮಂಧಾನಾರ ವಾರ್ಷಿಕ ಆದಾಯವೇ ಬರೋಬ್ಬರಿ 32ರಿಂದ 34 ಕೋಟಿ ರೂಪಾಯಿ ಇದೆದೆ..
ಇಷ್ಟೆಲ್ಲಾ ಸ್ಮೃತಿ ಮಂಧಾನಾರ ಪ್ರತಿಭೆಗೆ ಹಾಗೂ ಆಕೆಯ ಆಟ ಆಡೋ ಸ್ಟೈಲ್​ಗೆ ಸಂದಿರೋ ಪ್ರತಿಫಲ ಅಂತಾನೇ ಹೇಳಬಹುದು..ಇಂತಹ ಮಹಿಳಾ ಕ್ರಿಕೆಟರ್​ ಬಗ್ಗೆ ಇಡೀ ದೇಶವೇ ಕೊಂಡಾಡ್ತಿದ್ದು, ಆರ್​ಸಿಬಿಗೆ ಈಕೆ ನಿಜವಾದ ಆಪತ್ಭಾಂಧವೆ ಅಂದ್ರೆ ತಪ್ಪಾಗಲ್ಲ
ಇದನ್ನೂ ಓದಿ:ಪ್ರೀತಿಸಿದವಳು ಮದುವೆ ಪತ್ರಿಕೆ, ಸ್ಯಾರಿ ತೋರಿಸಿದ್ಲು.. ವ್ಯಾಲೆಂಟೈನ್ಸ್ ಡೇ ಖುಷಿಯಲ್ಲಿದ್ದ ಪ್ರೇಮಿ ಜೀವ ಬಿಟ್ಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us