Advertisment

ಪ್ರೀತಿಸಿದವಳು ಮದುವೆ ಪತ್ರಿಕೆ, ಸ್ಯಾರಿ ತೋರಿಸಿದ್ಲು.. ವ್ಯಾಲೆಂಟೈನ್ಸ್ ಡೇ ಖುಷಿಯಲ್ಲಿದ್ದ ಪ್ರೇಮಿ ಜೀವ ಬಿಟ್ಟ..!

ಪ್ರೇಮಿಗಳ ದಿನಾಚರಣೆ ಹತ್ತಿರ ಬರುತ್ತಿದ್ದಂತೆ ಪ್ರೇಮ ವೈಫಲ್ಯದ ಕರಾಳ ಘಟನೆ ನಡೆದಿದೆ. ಪ್ರೀತಿಸಿದ ಯುವತಿ ಕೈಕೊಟ್ಟು ಬೇರೊಬ್ಬನ ಜೊತೆ ಮದುವೆಗೆ ಸಿದ್ಧಳಾಗಿದ್ದನ್ನು ತಾಳಲಾರದೆ ಜಿಮ್ ಟ್ರೈನರ್ ಓರ್ವ ದಾರುಣ ಅಂತ್ಯ ಕಂಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

author-image
Ganesh Kerekuli
gym trainer
Advertisment

ಬೆಂಗಳೂರು: ಪ್ರೇಮಿಗಳ ದಿನಾಚರಣೆ (Valentine's Day) ಹತ್ತಿರ ಬರುತ್ತಿದ್ದಂತೆ ಪ್ರೇಮ ವೈಫಲ್ಯದ ಕರಾಳ ಘಟನೆಯೊಂದು ರಾಜಧಾನಿಯಲ್ಲಿ ನಡೆದಿದೆ. ಪ್ರೀತಿಸಿದ ಯುವತಿ ಕೈಕೊಟ್ಟು ಬೇರೊಬ್ಬನ ಜೊತೆ ಮದುವೆಗೆ ಸಿದ್ಧಳಾಗಿದ್ದನ್ನು ತಾಳಲಾರದೆ ಜಿಮ್ ಟ್ರೈನರ್ ಓರ್ವ ದಾರುಣ ಅಂತ್ಯ ಕಂಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisment

ಮೃತನನ್ನು ಕಿರಣ್ (26) ಎಂದು ಗುರುತಿಸಲಾಗಿದೆ. ಈತ ಕಳೆದ ಹಲವು ವರ್ಷಗಳಿಂದ ಬಾಡಿ ಬಿಲ್ಡರ್ ಹಾಗೂ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. 

ಘಟನೆಯ ವಿವರ

ಕಿರಣ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಆ ಯುವತಿಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಇದೇ ವಿಷಯವನ್ನು ಕಿರಣ್ ಬಳಿ ಹೇಳಿಕೊಂಡಿದ್ದ ಯುವತಿ, ತನ್ನ ಮದುವೆಯ ಆಮಂತ್ರಣ ಪತ್ರಿಕೆ ಮತ್ತು ಮದುವೆಗೆಂದು ತಂದಿದ್ದ ಹೊಸ ಸೀರೆ ತೋರಿಸಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಶುಭಾರಂಭ; ಸೆಲೆಕ್ಟರ್ಸ್​​ಗೆ ಉತ್ತರ ಕೊಟ್ಟ ಸಿರಾಜ್..!

Advertisment

ಪ್ರೀತಿಸಿದವಳು ಕಣ್ಣೆದುರೇ ಮತ್ತೊಬ್ಬನ ಮದುವೆಯಾಗುತ್ತಿರುವುದನ್ನು ಕಂಡು ಕಿರಣ್ ತೀವ್ರವಾಗಿ ಮನನೊಂದಿದ್ದ. ಮನೆಗೆ ಬಂದು ರೂಮ್ ಲಾಕ್ ಮಾಡಿ ಪ್ರಾಣ ಬಿಟ್ಟಿದ್ದಾನೆ. ಮನೆಯವರು ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.

ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ರೆಡಿ ಇತ್ತು!

ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಇದ್ದಿದ್ದರಿಂದ, ತನ್ನ ಪ್ರಿಯತಮೆಗೆ ನೀಡಲು ಕಿರಣ್ ವಿಶೇಷ ಉಡುಗೊರೆಯನ್ನು ಸಿದ್ಧಮಾಡಿಕೊಂಡಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಪ್ರೇಮಿಗಳ ದಿನ ಆಚರಿಸುವ ಮುನ್ನವೇ ಕಿರಣ್ ಸಾವಿನ ಮನೆ ಸೇರಿದ್ದಾರೆ.
ಕಿರಣ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ನಿರ್ಧಾರಕ್ಕೆ ಪ್ರಿಯತಮೆ ಮತ್ತು ಆಕೆಯ ತಾಯಿಯೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಪೊಲೀಸರಿಗೆ ಅಥವಾ ಪೋಷಕರಿಗೆ ಮೊಬೈಲ್ ಅನ್ಲಾಕ್ ಮಾಡಲು ಸುಲಭವಾಗಲಿ ಎಂದು ತಮ್ಮ ಮೊಬೈಲ್ ಪಾಸ್‌ವರ್ಡ್ ‘99999’ ಎಂದು ಬರೆದಿಟ್ಟು ಪ್ರಾಣಬಿಟ್ಟಿದ್ದಾನೆ

50 ಲಕ್ಷ ಸಾಲದ ಸುಳಿ ಮತ್ತು ಮೋಸದ ಆರೋಪ

ಮೃತ ಕಿರಣ್ ಪೋಷಕರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. "ನನ್ನ ಮಗನಿಗಿಂತ ಆ ಯುವತಿ 2 ವರ್ಷ ದೊಡ್ಡವಳಾಗಿದ್ದಳು. ಎಂಟು ತಿಂಗಳ ಹಿಂದೆ ನಮ್ಮ ಮನೆಗೆ ಬಂದು ಮದುವೆ ಮಾಡಿಕೊಡಿ ಎಂದು ಕೇಳಿದ್ದಳು. ಆಕೆಯ ಪೋಷಕರು 50 ಲಕ್ಷ ಸಾಲ ಮಾಡಿಕೊಂಡಿದ್ದರು. ಆ ಸಾಲವನ್ನೆಲ್ಲಾ ನಾನೇ ತೀರಿಸುತ್ತೇನೆ ಎಂದು ಕಿರಣ್ ಭರವಸೆ ನೀಡಿದ್ದ. ಇದೀಗ ಹಣ ಪಡೆದು, ನನ್ನ ಮಗನಿಗೆ ಮೋಸ ಮಾಡಿ ಆಕೆ ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. 

Advertisment

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುವಂತೆ ಅತ್ತೆ ಟಾರ್ಚರ್​.. 11 ತಿಂಗಳ ಮಗುವನ್ನ ಅನಾಥ ಮಾಡಿ ಜೀವಬಿಟ್ಟ ಸೊಸೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

love failure Valentine's Day
Advertisment
Advertisment
Advertisment