ಗಣಿ ನಾಡಿನ ಒಡಲಲ್ಲಿ ಅಡಗಿದ ಸಾವಿರಾರು ವರ್ಷಗಳ ಇತಿಹಾಸ.. 5000 ವರ್ಷಗಳ ಹಿಂದಿನ ಮಾನವರ ಪಳೆಯುಳಿಕೆ ಪತ್ತೆ

ಬಳ್ಳಾರಿಯ ಒಡಲಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ ಎನ್ನುವುದಕ್ಕೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಸುಮಾರು 3,000 ದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆಗಳು ಪತ್ತೆಯಾಗಿವೆ.

author-image
Ganesh Kerekuli
Human Skeleton Found (4)
Advertisment
  • ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಐತಿಹಾಸಿಕ ಪವಾಡ
  • ಗೌಡ್ರ ಮೂಲೆ ಬೆಟ್ಟದಲ್ಲಿ 3,000-5,000 ವರ್ಷಗಳ ಹಳೆಯ ಪಳೆಯುಳಿಕೆ ಲಭ್ಯ
  • ಒಂದೇ ಸ್ಥಳದಲ್ಲಿ ಅಕ್ಕಪಕ್ಕ 2 ಅಸ್ಥಿಪಂಜರಗಳು; 5.5 ಅಡಿ ಎತ್ತರದ ದೇಹ

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯ ಒಡಲಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ ಎನ್ನುವುದಕ್ಕೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಸುಮಾರು 3,000 ದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆಗಳು (ಅಸ್ಥಿಪಂಜರ) ಪತ್ತೆಯಾಗಿವೆ.

ಇದನ್ನೂ ಓದಿ: Rashibhavishya: ಹಣದ ವಿಚಾರದಲ್ಲಿ ಕಷ್ಟ, ಮೋಸ ಹೋಗ್ತೀರಿ -ಈ ರಾಶಿಯವರು ಎಚ್ಚರದಿಂದ ಇರಿ! 

Human Skeleton Found (3)

ಒಂದಲ್ಲ, ಎರಡು ಅಸ್ಥಿಪಂಜರ ಪತ್ತೆ!

ಕಳೆದ ಒಂದು ವಾರದಿಂದ ಇಲ್ಲಿ ಉತ್ಖನನ ನಡೆಯುತ್ತಿದ್ದು, ಆರಂಭದಲ್ಲಿ ಮಾನವನ ಮೂಳೆಯೊಂದು ಪತ್ತೆಯಾಗಿತ್ತು. ಕುತೂಹಲಗೊಂಡು ಮಣ್ಣನ್ನು ಮತ್ತಷ್ಟು ಆಳವಾಗಿ ಅಗೆದಾಗ ಬರೋಬ್ಬರಿ 5.5 ಅಡಿ ಉದ್ದದ ಪೂರ್ಣ ಪ್ರಮಾಣದ ಮಾನವ ಅಸ್ಥಿಪಂಜರ ಕಂಡುಬಂದಿದೆ. ಅಚ್ಚರಿ ಎಂಬಂತೆ, ಇದರ ಪಕ್ಕದಲ್ಲೇ ಮತ್ತೊಂದು ಅಸ್ಥಿಪಂಜರ ಕೂಡ ಪತ್ತೆಯಾಗಿದ್ದು, ಇತಿಹಾಸ ತಜ್ಞರ ಹುಬ್ಬೇರಿಸಿದೆ.

5000 ವರ್ಷಗಳ ಹಿಂದಿನ ಇತಿಹಾಸ

ಈ ಪಳೆಯುಳಿಕೆಗಳು ನವಶಿಲಾಯುಗ (Neolithic) ಹಾಗೂ ಸೂಕ್ಷ್ಮ ಶಿಲಾಯುಗಕ್ಕೆ (Microlithic) ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಅಮೆರಿಕದ ಹಾರ್ಟ್‌ವಿಕ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್‌ ಸುಗಂಧಿ ಅವರ ಪ್ರಕಾರ, "ಇವು ಸುಮಾರು 3000 ದಿಂದ 5000 ವರ್ಷಗಳಷ್ಟು ಹಳೆಯದಾಗಿರುವ ಸಾಧ್ಯತೆಯಿದೆ. ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿರುವುದು ಇಲ್ಲಿನ ವಿಶೇಷವಾಗಿದೆ," ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ವೇಶ್ಯಾವಾಟಿಕೆ ನಡೆಸುವಂತೆ ಅತ್ತೆ ಟಾರ್ಚರ್​.. 11 ತಿಂಗಳ ಮಗುವನ್ನ ಅನಾಥ ಮಾಡಿ ಜೀವಬಿಟ್ಟ ಸೊಸೆ..!

Human Skeleton Found (1)

ಮಡಿಕೆ ಚೂರುಗಳು, ಆಯುಧ ಬಳಕೆ ಸಾಕ್ಷ್ಯ

ಕೇವಲ ಅಸ್ಥಿಪಂಜರ ಮಾತ್ರವಲ್ಲದೆ, ಶವದ ಅಕ್ಕಪಕ್ಕದಲ್ಲಿ ಮಡಿಕೆ ಚೂರುಗಳು ಕೂಡ ಪತ್ತೆಯಾಗಿವೆ. ಅಲ್ಲದೆ ಈ ಭಾಗದಲ್ಲಿ ಮಾನವರು ಆಯುಧಗಳನ್ನು ಬಳಕೆ ಮಾಡುತ್ತಿದ್ದರು ಎನ್ನುವುದಕ್ಕೆ ಪೂರಕ ಸಾಕ್ಷ್ಯಗಳು ಲಭ್ಯವಾಗಿವೆ. ಇದನ್ನು ಗಮನಿಸಿದರೆ ತೆಕ್ಕಲಕೋಟೆಯು ಪ್ರಾಗೈತಿಹಾಸಿಕ ಕಾಲದಲ್ಲಿ ಒಂದು ಬಹುದೊಡ್ಡ ಮಾನವ ನೆಲೆಯಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಬನ್ ಡೇಟಿಂಗ್‌ಗೆ ನಿರ್ಧಾರ

ಘಟನಾ ಸ್ಥಳಕ್ಕೆ ಪರಂಪರೆ ಇಲಾಖೆಯ ಉಪ ನಿರ್ದೇಶಕ ಹಾಗೂ ಉತ್ಖನನ ಕಾರ್ಯದ ನಿರ್ದೇಶಕ ಆರ್. ಶೇಜೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಕ್ಕಿರುವ ಪಳೆಯುಳಿಕೆಗಳ ನಿಖರವಾದ ಕಾಲಘಟ್ಟವನ್ನು ತಿಳಿಯಲು ಇವುಗಳನ್ನು 'ಕಾರ್ಬನ್ ಡೇಟಿಂಗ್' (Carbon Dating) ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಸದ್ಯ ಸ್ಥಳದಲ್ಲಿ ಸಂಶೋಧನೆ ಮತ್ತು ತನಿಖೆ ಮುಂದುವರಿದಿದೆ.

ಇದನ್ನೂ ಓದಿ:ಪ್ರೀತಿಸಿದವಳು ಮದುವೆ ಪತ್ರಿಕೆ, ಸ್ಯಾರಿ ತೋರಿಸಿದ್ಲು.. ವ್ಯಾಲೆಂಟೈನ್ಸ್ ಡೇ ಖುಷಿಯಲ್ಲಿದ್ದ ಪ್ರೇಮಿ ಜೀವ ಬಿಟ್ಟ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Human Skeleton Found Ancient History Tekkalakote Ballari news
Advertisment