/newsfirstlive-kannada/media/media_files/2025/08/17/ksrtc-bus-accident-2025-08-17-11-21-03.jpg)
ಬಳ್ಳಾರಿ: ರಸ್ತೆ ಬದಿ ನಿಂತಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ಸಿರುಗುಪ್ಪ ತಾಲೂಕಿನ ಬೈರಾಪುರ ಕ್ರಾಸ್ ಬಳಿ ನಡೆದಿದೆ. ಪರಿಣಾಮ ಇಬ್ಬರು ಜೀವಬಿಟ್ಟಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಇದನ್ನೂ ಓದಿ:ಡಿವೋರ್ಸ್ ಬಗ್ಗೆ ಪತ್ರ ಬರೆದು ಅಜಯ್ ರಾವ್ ಮನವಿ.. ಏನು ಹೇಳಿದರು?
ಮಂಡ್ಯ ಮೂಲದ ಶ್ವೇತಾ (38), ಕನಕಪುರ ಮೂಲದ ಬಾಲನಾಯಕ (42) ಮೃತ ದುರ್ದೈವಿಗಳು. ಮಂತ್ರಾಲಯದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸಿರುಗುಪ್ಪ ತಾಲೂಕು ಆಸ್ಪತ್ರೆಗೆ ಹಾಗೂ ಬಳ್ಳಾರಿಗೆ ವಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಡಾ. ಶೋಭಾರಾಣಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿರಿಗೇರಿ ಪೊಲೀಸ್ ಠಾಣಾಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಈ ಬಾರಿಯ ಬಿಗ್ಬಾಸ್ಗೆ ಅನಯಾ ಬಂಗಾರ್ ಎಂಟ್ರಿ..?
ಇನ್ನೂ, ಶಿವಮೊಗ್ಗದಲ್ಲಿ ಕೂಡ ಓಮ್ನಿ ಕಾರು ಹಾಗೂ ಪಿಕಪ್ ವಾಹನ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಮ್ನಿಯಲ್ಲಿದ್ದ ಶೇಖರ್ (56), ಸಂಚಿತ್ ರಾಜ್(30) ಮೃತ ದುರ್ದೈವಿಗಳು.
ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಬಾಳೆಗಾರು ಸಮೀಪ ಈ ಅಪಘಾತ ಸಂಭವಿಸಿದೆ. ಎನ್ಆರ್ ಪುರ ವಾಸಿಗಳು ಜೋಗ ಜಲಪಾತ ವೀಕ್ಷಿಸಿ ಆಮ್ನಿಯಲ್ಲಿ ಸಾಗರದ ಕಡೆಗೆ ಬರುತ್ತಿದ್ದರು. ಮಧುರ (35), ಕಮಲ(57), ಮಾನಸ(32), ಸಿರಿಜ(49), ಭಾವನಾ(26) ಹಾಗೂಎರಡು ವರ್ಷದ ಪುಟ್ಟ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸಾಗರದ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಗಲ್ನಿಂದ ಕಾರ್ಯಕ್ರಮ ಮುಗಿಸಿಕೊಂಡು ಇದೇ ಮಾರ್ಗದಲ್ಲಿ ಬರುತ್ತಿದ್ದರು. ಇದೇ ವೇಳೆ ಅಪಘಾತದ ವಿಚಾರ ತಿಳಿದು ಜಿರೋ ಟ್ರಾಫಿಕ್ ಮೂಲಕ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗಾಯಾಳುಗಳಿಗೆ ಸ್ಥಳಾಂತರಕ್ಕೆ ನೆರವಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ