/newsfirstlive-kannada/media/post_attachments/wp-content/uploads/2023/09/BDA.jpg)
ನಕಲಿ GPA ಸೃಷ್ಟಿಸಿ ಬಿಡಿಎ ಜಾಗ ಮಾರಾಟ ಪ್ರಕರಣ ಮೇಜರ್​ ಟ್ವಿಸ್ಟ್​​ ಪಡೆದುಕೊಂಡಿದೆ. ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ಭೂಗಳ್ಳರ ಹೆಡೆಮುರಿಕಟ್ಟೋಕೆ ಬಿಡಿಎ ಮುಖ್ಯ ಆಯುಕ್ತ ಮಣಿವಣ್ಣನ್ ಅವರೇ ಫೀಲ್ಡಿಗೆ ಇಳಿದಿದ್ದು ತನಿಖೆಗೆ ಆದೇಶ ನೀಡಿದ್ದಾರೆ. ಒಂದಲ್ಲ, ಎರಡಲ್ಲ 5 ಕೋಟಿ ಬೆಲೆ ಬಾಳುವ ಬಿಡಿಎ ಜಾಗ ಒಂದು. ಮತ್ತೊಂದು ಲಕ್ಷಗಟ್ಟಲೇ ಪರಿಹಾರಕೊಟ್ರು ಮತ್ತೆ ಪರಿಹಾರದ ಆಸೆಗೆ ನಕಲಿ ದಾಖಲೆ ಸೃಷ್ಟಿ.
/filters:format(webp)/newsfirstlive-kannada/media/media_files/2025/08/23/bda-case-2025-08-23-21-46-31.jpg)
ಎರಡು ಪ್ರಕರಣ ಇದೀಗ ನಿಮ್ಮ ನ್ಯೂಸ್​ಫಸ್ಟ್​ ವರದಿಯಿಂದ ಮೇಜರ್​ ಟ್ವಿಸ್ಟ್​ ಪಡೆದುಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬೃಹತ್ ಹಗರಣದ ಅಸಲಿಯತ್ತನ್ನ ಭೇದಿಸಲು ಬಿಡಿಎ ಮುಖ್ಯ ಆಯುಕ್ತ ಮಣಿವಣ್ಣನ್ ಫೀಲ್ಡಿಗಿಳಿದಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿಯೇ ನಡೆದ ಬೃಹತ್​ ಹಗರಣದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಕ್ಟ್​​ ಮಾಡಿ ನಾವು ವಿಸ್ತೃತ ವರದಿ ಮಾಡಿದ್ವಿ. ಸುದ್ದಿ ಬೆನ್ನಲ್ಲೇ ಬಿಡಿಎ ಮುಖ್ಯ ಆಯುಕ್ತ ಮಣಿವಣ್ಣನ್ ಈ ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ. ಬಿಡಿಎ ಸ್ಪೆಷಲ್ ಟಾಸ್ಕ್ ಫೋರ್ಸ್ SP ಗಣೇಶ್​ಗೆ ತನಿಖೆ ನಡೆಸಿ 30 ದಿನದೊಳಗೆ ವರದಿ ಕೊಡುವಂತೆ ಆದೇಶ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/08/23/bda-case1-2025-08-23-21-47-27.jpg)
ಏನಿದು ಪ್ರಕರಣ?
ಬೆಂಗಳೂರು ದಕ್ಷಿಣ ಉತ್ತರಹಳ್ಳಿಯ ಕೊತ್ತನೂರಲ್ಲಿ ಇರುವ ಬಿಡಿಎ ಪ್ರಾಪರ್ಟಿ, ಸರ್ವೇ ನಂ. 177/1 ಮತ್ತು 176/1 ಬಿಡಿಎ ಸ್ವತ್ತನ್ನ ನಕಲಿ ಮಾಲೀಕರು ಮಾರಿದ್ದಾರೆ. ಸರ್ವೇ ನಂ. 177/1ರಲ್ಲಿ 10 ಗುಂಟೆ ಜಾಗವನ್ನ 1999ರಲ್ಲಿ ಬಿಡಿಎ ತನ್ನ ಸ್ವಾಧೀನಕ್ಕೆ ಪಡೆದಿತ್ತು. ಸ್ವಾಧೀನ ಪಡೆದ ನಂತರ ಅಭಿಯಂತರ ವಿಭಾಗಕ್ಕೆ ಇದನ್ನ ಹಸ್ತಾಂತರಿಸಲಾಗಿತ್ತು. ಆದ್ರೆ, ಇದೇ ಬಿಡಿಎ ಜಾಗಕ್ಕೆ ಆರ್. ರಮೇಶ್​ ಅಂಜಿನಪ್ಪ, ಸೋಮಶೇಖರ್, ಮಾರುತಿ, ಮೋಹನ್ ನಕಲಿ ಜಿಪಿಎ ಸೃಷ್ಟಿಸಿದ್ದು, ಬಳಿಕ ಲಕ್ಷ್ಮಿನಾರಾಯಣ್​ಗೆ ಕ್ರಯ ಪತ್ರ ಮಾಡಿಕೊಟ್ಟ ಗಂಭೀರ ಆರೋಪ ಕೇಳಿಬಂದಿದೆ. ಇದಾದ ನಂತರ 5 ಕೋಟಿ 76 ಲಕ್ಷ 34 ಸಾವಿರ ರೂಪಾಯಿಗೆ ಬಿಡಿಎ ಜಾಗವನ್ನ 2020ರ ಆಗಸ್ಟ್ ಮತ್ತು 2022ರ ಜೂನ್ ತಿಂಗಳಲ್ಲಿ ಶೋಭಾಗೆ ಮಾರಾಟ ಮಾಡಿದ್ದಾರೆ. ಇನ್ನೂ ಇದೇ ರೀತಿ ಕೊತ್ತನೂರು ಡಿಪೋ ಸಂಪರ್ಕ ರಸ್ತೆಗೆ ಭೂಮಿ ಸ್ವಾಧೀನಕ್ಕೆ ಆದೇಶ ನೀಡಲಾಗಿತ್ತು. ಮೂಲ ಮಾಲೀಕ ERR ಪಾಲ್ಕಾನ್​ರರಿಗೆ ಹೈಕೋರ್ಟ್​​ನಲ್ಲೂ 2023ರಲ್ಲಿ ಇದು ಬಿಡಿಎ ಸ್ವತ್ತು ಅಂತ ಆದೇಶ ನೀಡಿ ಪರಿಹಾರ ಕೂಡ ನೀಡಿದೆ. ಆದ್ರೀಗ ಈ ಸ್ವತ್ತನ್ನ ತಮ್ಮದು ಅಂತ ಹೇಳಿ ಪರಿಹಾರ ಪಡೆಯಲು ನಕಲಿ ದಾಖಲೆಯನ್ನ ಭೂಗಳ್ಳರು ಸೃಷ್ಟಿ ಮಾಡಿದ್ದಾರೆ.
ಒಂದಲ್ಲ, ಎರಡಲ್ಲ ₹5 ಕೋಟಿಗೆ ಬಿಡಿಎ ಸ್ವತ್ತು ಮಾರಾಟ. ಮತ್ತೊಂದು ಪರಿಹಾರದ ಆಸೆಯ ಷಡ್ಯಂತ್ರ. ಈ ಎರಡು ಬಿಡಿಎ ಸ್ವತ್ತಿನ ಜೊತೆ ಚೆಲ್ಲಾಟ ಆಡಿದ ಭೂಗಳ್ಳರಿಗೆ ಢವಢವ ಶುರುವಾಗಿದೆ. ಇದ್ರಲ್ಲಿ ಅಧಿಕಾರಿಗಳು ಪಾಲುದಾರರು ಅನ್ನೋ ಆರೋಪ ಕೂಡ ಇದೆ. ಸದ್ಯ ತನಿಖೆಗೆ ಆಯುಕ್ತರು ಆದೇಶ ನೀಡಿದ್ದು, ಅಸಲಿ ಸತ್ಯ ಇನ್ನಷ್ಟೇ ಹೊರಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us