/newsfirstlive-kannada/media/media_files/2025/10/14/lokayukta-2025-10-14-22-13-07.jpg)
ಬೆಂಗಳೂರು: ಬೀದರ್, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಕಾರವಾರ ಹೀಗೆ ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಬೇಟೆಯಾಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಫೀಲ್ಡಿಗಿಳಿದ ಅಧಿಕಾರಿಗಳು ಭ್ರಷ್ಟರ ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಮಾಡಿದ್ದಾರೆ ಎಂದು ವಿವರ ಕಲೆ ಹಾಕಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಹೆಕ್ಕಿ ತೆಗೆದಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲದಂತಾಗಿದೆ. ಲೋಕಾಯುಕ್ತರು, ಐಟಿ, ಸಿಬಿಐ ಅಧಿಕಾರಿಗಳು ರೇಡ್ ಮಾಡುತ್ತಿದ್ದರೂ ಸರ್ಕಾರಿ ಅಧಿಕಾರಿಗಳು ಭಯವಿಲ್ಲದಂತೆ ಅಕ್ರಮ ಆಸ್ತಿಗಳನ್ನು ಹೆಗ್ಗಿಲ್ಲದೇ ಸಂಪಾದನೆ ಮಾಡುತ್ತಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ, ನಗದು, ಆಸ್ತಿ ಪತ್ತೆಯಾಗಿದೆ. ಬೆಂಗಳೂರಿನ 3 ಅಧಿಕಾರಿಗಳು ಸೇರಿ ರಾಜ್ಯಾದ್ಯಂತ 12 ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದ್ದು ಬೆಂಗಳೂರು ಸೇರಿ ಒಟ್ಟು 48 ಸ್ಥಳಗಳಲ್ಲಿ ರೇಡ್ ಮಾಡಲಾಗಿದೆ.
ಮಂಜುನಾಥ ಜಿ. ವೈದ್ಯಾಧಿಕಾರಿ, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು
- ಮಂಜುನಾಥ್ ಸರ್ಕಾರಿ ನೌಕರನಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ರೇಡ್
- ದಾಳಿ ವೇಳೆ 3 ಕೋಟಿ 24 ಲಕ್ಷದ 13 ಸಾವಿರದ 240 ಸ್ಥಿರ ಹಾಗೂ ಚರ ಆಸ್ತಿ ಪತ್ತೆ
- 1 ಸೈಟ್, 1 ವಾಸದ ಮನೆ, 1 ಪ್ಲಾಟ್ ಸೇರಿ 1 ಕೋಟಿ 85 ಲಕ್ಷ ಸ್ಥಿತ ಆಸ್ತಿ ಪತ್ತೆ
- 10 ಲಕ್ಷ ನಗದು, ವಾಹನ, ಗೃಹೋಪಯೋಗಿ ವಸ್ತು ಸೇರಿ 1 ಕೋಟಿ 39 ಲಕ್ಷ ಚರ ಆಸ್ತಿ ಪತ್ತೆ
ಇದನ್ನೂ ಓದಿ: ಘೋರ ದುರಂತ; ಬೆಂಕಿಯಲ್ಲಿ ಧಗಧಗಿಸಿ ಚಲಿಸುತ್ತಿದ್ದ ಬಸ್​.. ಉಸಿರು ಚೆಲ್ಲಿದ 15 ಪ್ರಯಾಣಿಕರು
ವಿ ಸುಮಂಗಳ, ನಿರ್ದೇಶಕರು, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ, ಬೆಂಗಳೂರು
- ಸುಮಂಗಳಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ
- ಸುಮಂಗಳ ಬಳಿ 7 ಕೋಟಿ 32 ಲಕ್ಷದ 50 ಸಾವಿರ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ
- 4 ಸೈಟ್, 5 ಮನೆಗಳು, 19 ಎಕರೆ ಕೃಷಿ ಜಮೀನು ಸೇರಿ 5 ಕೋಟಿ 8 ಲಕ್ಷದ 42 ಸಾವಿರ ಮೌಲ್ಯದ ಸ್ಥಿರ ಆಸ್ತಿ ಪತ್ತೆ
- 1 ಕೋಟಿ ಮೌಲ್ಯದ ಚಿನ್ನಾಭರಣಗಳು, ವಾಹನ ಸೇರಿ 2 ಕೋಟಿ 24 ಲಕ್ಷದ 8 ಸಾವಿರ ಚರ ಆಸ್ತಿ ಪತ್ತೆ
ಎನ್. ಕೆ ಗಂಗಮರಿಗೌಡ, ಸರ್ವೆಯರ್, ಕೆಐಎಡಿಬಿ ಬೆಂಗಳೂರು
- ಗಂಗಮರಿಗೌಡಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಗಂಗಮರಿಗೌಡ ಬಳಿ 4 ಕೋಟಿ 66 ಲಕ್ಷ 55 ಸಾವಿರ 512 ರೂಪಾಯಿ ಮೌಲ್ಯದ ಆಸ್ತಿ ಪತ್ತೆ
- 2 ನಿವೇಶನಗಳು, 2 ಮನೆ, 2 ಎಕರೆ ಕೃಷಿ ಜಮೀನು ಸೇರಿ 3 ಕೋಟಿ 58 ಲಕ್ಷ ಸ್ಥಿರ ಆಸ್ತಿ ಪತ್ತೆ
- 1 ಕೋಟಿ 8 ಲಕ್ಷದ 40 ಸಾವಿರ ಮೌಲ್ಯದ ಚರ ಆಸ್ತಿ ಪತ್ತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ