/newsfirstlive-kannada/media/media_files/2025/09/07/lunar_eclipse-1-2025-09-07-22-54-59.jpg)
ಬೆಂಗಳೂರು: ಬಾಹ್ಯಾಕಾಶದಲ್ಲಿ 2025ರ ವರ್ಷದ ಕೊನೆಯ ಪೂರ್ಣ ಚಂದ್ರ ಗ್ರಹಣ ರಾತ್ರಿ 9. 57 ರಿಂದ ಪ್ರಾರಂಭವಾಗಿದೆ. ರೆಡ್ ಮೂನ್ ಅಥವಾ ಬ್ಲಡ್‌ಮೂನ್‌ನನ್ನು ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ಹಾಸನ, ಬೆಂಗಳೂರು, ಉಡುಪಿ, ದಾವಣಗೆರೆ ಜನರು ನೋಡುತ್ತಿದ್ದಾರೆ. ಈ ಖಗ್ರಾಸ ಚಂದ್ರಗ್ರಹಣವನ್ನು ಬೆಂಗಳೂರು, ಹೈದರಾಬಾದ್, ದೆಹಲಿ, ಮುಂಬೈ, ಕೋಲ್ಕತ್ತಾ, ಜೈಪುರ ಸೇರಿದಂತೆ ದೇಶದ ಇತರೆ ಪ್ರಮುಖ ನಗರಗಳಲ್ಲೂ ವೀಕ್ಷಿಸುತ್ತಿದ್ದಾರೆ.
ನಭೋ ಮಂಡಲದಲ್ಲಿ ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ ಎರಡನೇ ಬ್ಲಡ್ ಮೂನ್ ಗೋಚರವಾಗಿದೆ. ರಾತ್ರಿ ಅಪರೂಪದ ರಕ್ತ ಚಂದ್ರ ಕಾಣಿಸಿಕೊಂಡಿದ್ದು, ಜನರು ಪೂರ್ಣ ಚಂದ್ರ ಗ್ರಹಣವನ್ನು ನೋಡಿ ಖುಷಿ ಪಟ್ಟಿದ್ದಾರೆ. ಇನ್ನು ಭಾರತದಲ್ಲಿ ಪೂರ್ಣ ಚಂದ್ರಗ್ರಹಣ ರಾತ್ರಿ 11:42 ರಿಂದ ಗೋಚರವಾಗಲಿದೆ. ಸದ್ಯ ಬಾಹ್ಯಾಕಾಶದಲ್ಲಿ ನಡೆಯುತ್ತಿರುವ ಪೂರ್ಣ ಚಂದ್ರ ಗ್ರಹಣವನ್ನು ಜನರು ಬರಿ ಗಣ್ಣಿನಿಂದ ನೋಡಿ ಸಂತಸ ಪಟ್ಟಿದ್ದಾರೆ.
ಇದನ್ನೂ ಓದಿ:ಏಷ್ಯಾ ಕಪ್ 2025; ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ, ವರ್ಲ್ಡ್ಕಪ್ಗೆ ಎಂಟ್ರಿ
ಇಂದು ರಾತ್ರಿ 9 ಗಂಟೆ 58 ನಿಮಿಷಕ್ಕೆ ಪೂರ್ಣ ಚಂದ್ರಗ್ರಹಣ ಆರಂಭವಾಯಿತು. ಇದು 3 ಗಂಟೆ 29 ನಿಮಿಷಗಳ ಕಾಲ ಸುದೀರ್ಘವಾಗಿ ನಡೆಯಲಿದೆ. ಚಂದ್ರಗ್ರಹಣ ಸಮಯದಲ್ಲಿ ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಬರುತ್ತದೆ. ಈ ವೇಳೆ ಭೂಮಿಯ ಮೇಲ್ಮೈನಲ್ಲಿರುವ ವಾತಾವರಣದಲ್ಲಿನ ಕೆಂಪು ಬಣ್ಣವು ಚಂದ್ರನ ಮೇಲೆ ಬಿದ್ದಿದೆ. ಹೀಗಾಗಿ ಯಾವಾಗಲೂ ಬಿಳಿ ಬಣ್ಣದಲ್ಲಿ ಕಾಣಿಸುವ ಚಂದ್ರನು ಇಂದು ತಾಮ್ರ ಮಿಶ್ರಿತ ಕೆಂಪು ಅಥವಾ ಕಿತ್ತಳೆ ಬಣ್ಣ ಮಿಶ್ರಿತವಾಗಿ ಕಾಣಿಸುತ್ತಾನೆ.
ನೆಹರು ತಾರಾಲಯ
ಪೂರ್ಣ ಚಂದ್ರ ಗ್ರಹಣವು ಜೈಪುರ್, ಮೈಸೂರು, ಮುಂಬೈ, ಕೊಚ್ಚಿನ್, ಕೋಲ್ಕತ್ತಾ, ಹೈದರಾಬಾದ್ ಸೇರಿ ದೇಶದ ಇತರೆ ನಗರಗಳಲ್ಲಿ ಇಂದು ರಾತ್ರಿ9:57ರಿಂದಲೇ ಗೋಚರವಾಗುತ್ತಿದೆ. ಬಿಳಿ ಬಣ್ಣದಲ್ಲಿ ಇರುತ್ತಿದ್ದ ಚಂದ್ರನ ಬಣ್ಣವೂ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು ಕೆಂಪು ಬಣ್ಣದತ್ತ ವಾಲುತ್ತಿದೆ. ಈ ಮಹಾ ಅದ್ಭುತವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ನೆಹರು ತಾರಾಲಯದಲ್ಲಿ ಜನರು ಸೇರಿದ್ದಾರೆ. ಟೆಲಿಸ್ಕೋಪ್ನಲ್ಲಿ ಚಂದ್ರಗ್ರಹಣ ವೀಕ್ಷಣೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ