/newsfirstlive-kannada/media/media_files/2025/08/21/maheshshettythimarodi-2025-08-21-23-22-32.jpg)
ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಜೈಲು ಸೇರಿದ್ದಾರೆ. ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದಲ್ಲಿ ತಿಮರೋಡಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಬಂಧನ ಆಗಿದೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಧರ್ಮಸ್ಥಳದ ಸೌಜನ್ಯ ಪರ ಹೋರಾಟಗಾರ ತಿಮರೋಡಿ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಕೇಸ್ಗಳು ಹಾಗೂ ದ್ವೇಷ ಭಾಷಣ, ಬೆದರಿಕೆ ಪ್ರಕರಣಗಳು ಸುತ್ತಿಕೊಂಡಿದ್ದು, ಸದ್ಯ ಬಿ.ಎಲ್.ಸಂತೋಷ್ ವಿರುದ್ದದ ಬಳಸಿ ಅವಾಚ್ಯ ಶಬ್ಧ ಉರುಳಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಉಡುಪಿಯ ಬ್ರಹ್ಮಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಿನ್ನೆ ಭಾರಿ ಬಿಗಿಭದ್ರತೆಯೊಂದಿಗೆ ಉಜಿರೆ ಸಮೀಪದ ಮನೆಗೆ ಆಗಮಿಸಿದ ಪೊಲೀಸರು ತಿಮರೋಡಿಯವನ್ನು ವಶಕ್ಕೆ ಪಡೆದ್ರು. ತಿಮರೋಡಿ ವಶಕ್ಕೆ ಪಡೆಯಲು ಹೋದ ವೇಳೆ ಭಾರಿ ಹೈಡ್ರಾಮಾ ಕೂಡ ನಡೀತು. ವೇಳೆ ಬೆಂಬಲಿಗರು ತಿಮರೋಡಿ ಪರ ಘೋಷಣೆ ಕೂಗಿದ್ರು.
ಇದನ್ನೂ ಓದಿ: BREAKING: ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್
ವಶಕ್ಕೆ ಪಡೆಯುವಾಗ ನಾನು ಪೊಲೀಸ್ ವಾಹನದಲ್ಲಿ ಬರಲ್ಲ ಅಂತ ತಿಮರೋಡಿ ಪಟ್ಟು ಹಿಡಿದಿದ್ದರು. ಬಳಿಕ ಗಿರೀಶ್ ಮಟ್ಟೆಣ್ಣವರ್ ಜೊತೆ ತಿಮರೋಡಿಯ ಸ್ವಂತ ವಾಹನದಲ್ಲೇ ಬ್ರಹ್ಮಾವರ ಠಾಣೆಗೆ ಕರೆದೊಯ್ಯಲಾಯ್ತು. ಈ ವೇಳೆ ಸೌಜನ್ಯ ಸಾವಿಗೆ ನ್ಯಾಯ ಸಿಗಲೇಬೇಕು ಅಂತ ಗುಡುಗಿದ್ದರು. ಬಳಿಕ ಬ್ರಹ್ಮಾವರ ಠಾಣೆಗೆ ಕರೆದೊಯ್ದ ಪೊಲೀಸರು ತಿಮರೋಡಿಯನ್ನು ವಿಚಾರಣೆಗೊಳಪಡಿಸಿ ಬಳಿಕ ಬಂಧಿಸಿದ್ದಾರೆ. ಬ್ರಹ್ಮಾವರ ಠಾಣೆಗೆ ಪೊಲೀಸ್ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು.
ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು
ಧರ್ಮ, ಸಮುದಾಯಗಳ ನಡುವೆ ವೈಮನಸ್ಸು ಸೃಷ್ಟಿಸಿದ ಆರೋಪದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ದೂರು ನೀಡಿದ್ದರು.. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ US 196(1), 352, 353(2), BNS ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ತಿಮರೋಡಿ ಬಂಧನ ಕುರಿತು ಮಾತನಾಡಿರೋ ಬಿಜೆಪಿ ಶಾಸಕ ಭರತ್ ಶೆಟ್ಟಿ ಈ ಕೇಸ್ನಲ್ಲಿ ಪೊಲೀಸರು ಆ್ಯಕ್ಷನ್ ತೆಗೆದುಕೊಳ್ಳೋದು ಸಹಜ ಎಂದಿದ್ದಾರೆ. ಕೊಲೆ ಆರೋಪ ಸಂಬಂಧವೂ ತನಿಖೆ ನಡೀಲಿ ಎಂದಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಕಾನೂನು ಪ್ರಕಾರ ಕ್ರಮ ಆಗಲಿ. ನಾವು ಮಧ್ಯಪ್ರವೇಶ ಮಾಡಲ್ಲ ಎಂದಿದ್ದಾರೆ. ಧರ್ಮಸ್ಥಳ ಪ್ರಕರಣದ ವಿರುದ್ಧ ಹೋರಾಡುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಆಗಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ