/newsfirstlive-kannada/media/media_files/2025/09/07/mallikarjun_kharge-1-2025-09-07-19-26-01.jpg)
ಕಲಬುರಗಿ: ಹೊಲದಲ್ಲಿ ಒಣಗಿ ಹೋದ ತೊಗರಿ ಬೆಳೆ ಕಿತ್ತು ತಂದು ತೋರಿಸಿದ ರೈತರೊಬ್ಬರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. 6 ಹಡೆದವಳ ಮುಂದೆ 3 ಹಡೆದವಳು ಬಂದು ಹೇಳಿದಂಗಾಯಿತು ಎಂದು ಖರ್ಗೆ ಗರಂ ಆಗಿದ್ದಾರೆ.
ಕಲಬುರಗಿಯ ನಿವಾಸದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ತೊಗರಿ ಬೆಳೆ ಹಿಡಿದುಕೊಂಡು ಬಂದಿದ್ದ ರೈತ ನನ್ನ ಹೊಲದಲ್ಲಿ ಬೆಳೆ ಒಣಗಿದೆ ಎಂದು ತೋರಿಸಿದ. ಇದಕ್ಕೆ ಖಾರವಾಗಿಯೇ ಉತ್ತರಿಸಿದ ಮಲ್ಲಿಕಾರ್ಜುನ್ ಖರ್ಗೆ ಅವರು ನೀನು ಎಷ್ಟು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ರೈತ, 4 ಎಕರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮತ್ತು ಬರೋ ಸ್ಪ್ರೇ ಮಾಡಿ, ಕೈ ಕಟ್ಟಿ ಹೆಂಡತಿ ತಲೆ ಬೋಳಿಸಿದ ಗಂಡ.. ಮನೆಯವ್ರು ಸಪೋರ್ಟ್​
/filters:format(webp)/newsfirstlive-kannada/media/media_files/2025/09/07/mallikarjun_kharge_klb-2025-09-07-19-26-14.jpg)
ನಿನ್ನದು ಬರೀ 4 ಎಕರೆ ಮಾತ್ರ. ನನ್ನದು 40 ಎಕರೆ ನಿನ್ನ ಬೆಳೆಗಿಂತ ಕೆಟ್ಟದಾಗಿ ಇದೆ. ನನಗೆ ನೀನು ಏನು ಹೇಳುವುದು?. ಇದು ಹೆಂಗಾಯಿತು ಎಂದರೆ 6 ಹಡೆದವಳ ಮುಂದೆ 3 ಹಡೆದವಳು ಬಂದು ಹೇಳಿದಂಗೆ ಆಯಿತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ವೇಳೆ ಅಕ್ಕಪಕ್ಕದಲ್ಲಿ ಇದ್ದವರು ನಕ್ಕಿದ್ದಾರೆ. ಪ್ರಚಾರ ಮಾಡಿಕೊಳ್ಳಲು ಇಲ್ಲಿಗೆ ಬರಬೇಡ ಎಂದು ರೈತನಿಗೆ ಹೇಳಿದ್ದಾರೆ.
ನನಗೆ ಇದರ ಬಗ್ಗೆ ಗೊತ್ತಿದೆ. 40 ಎಕರೆಯಲ್ಲಿ ತೊಗರಿ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಎಲ್ಲ ಹಾಳಾಗಿ ಹೋಗಿದೆ. ನೀನು ಸಸ್ಟೈನ್ ಮಾಡಿಕೊಳ್ಳಬಹುದು. ನನಗೆ ಮಾಡಿಕೊಳ್ಳಲು ಆಗಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಅವರು ದೇಶದಲ್ಲಿ ಬೆಳೆ ಅತಿವೃಷ್ಟಿಯಿಂದ ಹಾಳಾಗಿರುವ ಬಗ್ಗೆ ಗಂಭೀರವಾಗಿಲ್ಲ. ಕೆಲವು ಕಡೆ ಅತಿಯಾದ ಮಳೆ, ಕೆಲವು ಕಡೆ ಮಳೆನೇ ಇಲ್ಲ, ಪ್ರವಾಹದಿಂದಲೂ ದೇಶದ್ಯಾಂತ ಬೆಳೆ ಹಾನಿಯಾಗಿವೆ. ಇದರ ಬಗ್ಗೆ ಮೋದಿ, ಶಾಗೆ ಕಾಳಜಿ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us