/newsfirstlive-kannada/media/media_files/2025/09/07/bgk_husband-2025-09-07-18-52-58.jpg)
ಸ್ತ್ರೀಯನ್ನ ಅತ್ಯಂತ ಗೌರವದಿಂದ ಕಾಣುವ ನೆಲ ನಮ್ಮದು, ಇಂತಹ ನಾಡಿನಲ್ಲಿ ಮಹಿಳೆಯ ಅರ್ಧ ತಲೆ ಬೋಳಿಸಿ ಹೇಯಕೃತ್ಯ ನಡೆಸಲಾಗಿದೆ. ಗಂಡ ಹೆಂಡಿರ ಜಗಳದ ಮಧ್ಯೆ ಗಂಡನ ಮನೆಯವರು ಸೇರಿ ಈ ಕೃತ್ಯ ನಡೆಸಿದ್ದು, ಇದೀಗ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಗಂಡನ ಮನೆಯವರ ಕಿರಿಕಿರಿ ಮಧ್ಯೆ ಮಹಿಳೆ ಬದುಕಿ ಬಂದದ್ದೇ ಅಚ್ಚರಿ. ಹಾಗಾದ್ರೆ ಈ ಕೃತ್ಯ ನಡೆದಿದ್ದು ಎಲ್ಲಿ, ಹೇಗೆ?.
ಗಂಡನ ಮನೆಯವರು ಅರ್ಧ ತಲೆ ಬೋಳಿಸಿದ್ದರಿಂದ ಮಹಿಳೆ ಕಣ್ಣೀರಿಡುತ್ತಿದ್ದಾರೆ. ಮಗಳ ಸ್ಥಿತಿ ಕಂಡು ನೊಂದಿರೋ ತಂದೆ ತಾಯಿಗಳು, ಇವುಗಳ ಮಧ್ಯೆ ಮಹಿಳೆಯ ಗೋಳು ಕೇಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂದಹಾಗೆ ಇಂತಹವೊಂದು ಘಟನೆ ನಡೆದಿದ್ದು ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ. ಗೃಹಿಣಿ ಹೆಸರು ಶ್ರೀದೇವಿ. ಮೂಲತಃ ಜಿಲ್ಲೆಯ ಸಿಂದಗಿ ಪುನರ್ವಸತಿ ಕೇಂದ್ರವರು. ಕಳೆದ 5 ವರ್ಷದ ಹಿಂದೆ ಮಹಿಳೆಯನ್ನ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದ ಬಸವರಾಜ್ಗೆ ಮದುವೆ ಮಾಡಿಕೊಡಲಾಗಿತ್ತು.
ಸರ್ಕಾರದ ಕೆಲಸ ಎಂದು ಸುಳ್ಳು ಹೇಳಿದ್ದ ಪತಿ
ಆದ್ರೆ ಸರ್ಕಾರಿ ನೌಕರಿ ಅಂತ ಸುಳ್ಳು ಹೇಳಿ ಮದುವೆಯಾಗಿದ್ದ. ಈ ನಡುವೆ ಮಹಿಳೆಗೆ ಯಾರಾದರೂ ತವರು ಮನೆಯಿಂದ ಸೇರಿದಂತೆ ಯಾರೇ ಪೋನ ಮಾಡಿದರೂ ಸಂಶಯದಿಂದ ಕಾಣುತ್ತಿದ್ದ. ಇದ್ರಿಂದ ಆಗಾಗ ಜಗಳವಾಗುತ್ತಿತ್ತು. ಇವುಗಳ ಮಧ್ಯೆ ಜಗಳ ತಾರಕಕ್ಕೇರಿ ಮಹಿಳೆ ಮೇಲೆ ಹಲ್ಲೆಯಾಗಿದ್ರಿಂದ ಮಾತುಕತೆ ನಡೆಸಿ ಆಕೆಯನ್ನ ಸಖಿ ಕೇಂದ್ರದಲ್ಲಿ ಇರಿಸಲಾಗಿತ್ತು. ಆದ್ರೆ ಮತ್ತೊಮ್ಮೆ ಮಾತುಕತೆ ನಡೆದು ಇಬ್ಬರನ್ನು ಒಪ್ಪಿಸಿ ಕಳಿಸಿಕೊಡಲಾಗಿತ್ತು. ಆದ್ರೆ ಮತ್ತೇ ಜಗಳವಾದಾಗ ರಾತ್ರಿ ಗಂಡ ಬಸವರಾಜ್ ಸೇರಿದಂತೆ ಕೆಲವರು ತನ್ನನ್ನು ಕಟ್ಟಿ ಹಾಕಿ ಹಲ್ಲೆ ಮಾಡಿದ್ದಲ್ಲದೆ ಅರ್ಧ ತಲೆ ಬೋಳಿಸಿದ್ದು, ತನಗೆ ನ್ಯಾಯ ಕೊಡಿಸುವಂತೆ ಮಹಿಳೆ ಮನವಿ ಮಾಡಿದ್ದಾಳೆ.
ಇದನ್ನೂ ಓದಿ: ಸಂಸದ ಡಾ.ಕೆ ಸುಧಾಕರ್ಗೆ ಸೇರಿದ ಕಾಲೇಜ್ ಹಾಸ್ಟೆಲ್ನಲ್ಲಿ ಜೀವ ಬಿಟ್ಟ ವಿದ್ಯಾರ್ಥಿ
/filters:format(webp)/newsfirstlive-kannada/media/media_files/2025/09/07/bgk_husband_1-2025-09-07-18-56-07.jpg)
ತವರುಮನೆಗೆ ಸುದ್ದಿ ಮುಟ್ಟಿಸಿದ ಸ್ಥಳೀಯರು
ಇನ್ನು ಎರಡು ಕುಟುಂಬಗಳ ಮಧ್ಯೆ ಆಗಾಗ ಜಗಳವಾಗಿದೆ. ಈ ನಡುವೆ ಬಸವರಾಜ್ ಮತ್ತು ಹೆಂಡತಿಗೆ ಒಂದು ಹೆಣ್ಣು ಮಗು ಇದೆ. ಈ ನಡುವೆ ಶೆಡ್ವೊಂದರಲ್ಲಿ ಜೀವನ ನಡೆಸುತ್ತಿರುವಾಗ ರಾತ್ರಿ ಸಮಯದಲ್ಲಿ ಬಂದು ಮಹಿಳೆಗೆ ಮತ್ತು ಬರುವಂತಹ ಸ್ಪ್ರೇ ಸಿಂಪಡಣೆ ಮಾಡಿ ತಲೆಬೋಳಿಸಿ ಈ ಕೃತ್ಯ ಎಸಗಿದ್ದಾರೆ. ಇನ್ನು ಮಹಿಳೆಯನ್ನ ಯಥಾಸ್ಥಿತಿಯಲ್ಲಿ ಬಿಟ್ಟು ಹೋದಾಗ ಆಕೆಗೆ ಎಚ್ಚರವಾಗಿ ಕೈ ಕಟ್ಟಿದ ಸ್ಥಿತಿಯಲ್ಲಿ ಆಕೆ ಬಂದು ತಗಡಿನ ಬಾಗಿಲು ಬಡಿದಾಗ ಅಕ್ಕಪಕ್ಕದವರು ನೋಡಿ ಆಕೆಯ ತವರುಮನೆಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಮಹಿಳೆನ ದಾಖಲಿಸಿ ಚಿಕಿತ್ಸೆ ನೀಡಿಸಿದ್ದಾರೆ. ಇನ್ನು ಈ ಪ್ರಕರಣದ ಬೆನ್ನಲ್ಲೆ ಆರೋಪಿ ಪತಿ ಬಸವರಾಜನನ್ನ ಪೋಲಿಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಹೇಳುವುದಾದರೆ ಪ್ರತಿ ಹಂತದಲ್ಲೂ ಹೆಣ್ಣನ್ನ ಪೂಜಿಸುವ ನೆಲದಲ್ಲಿ ಮಹಿಳೆಯೊಬ್ಬಳ ಅರ್ಧ ತಲೆ ಬೋಳಿಸಿರೋದು ಹೇಯ ಕೃತ್ಯವಾಗಿದ್ದು, ಇನ್ನೊಮ್ಮೆ ಇಂತಹ ಪ್ರಕರಣಗಳು ಮರುಕಳಿಸದಿರಲಿ ಅನ್ನೋದೆ ಸಾರ್ವಜನಿಕರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ