/newsfirstlive-kannada/media/media_files/2025/08/20/bmtc-2025-08-20-15-01-37.jpg)
ಬೆಂಗಳೂರು: ಬಿಎಂಟಿಸಿ ಬಸ್ ಚಕ್ರ ಹರಿದು ಪ್ರಯಾಣಿಕನೊಬ್ಬ ಸ್ಥಳದಲ್ಲೇ ಪ್ರಾಣ ಬಿಟ್ಟಿರೋ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸಂಪಂಗಿ ಮೃತ ವ್ಯಕ್ತಿ.
ಇದನ್ನೂ ಓದಿ:ದರ್ಶನ್ ಸೆಲೆಬ್ರಿಟಿಗಳಿಗೆ ಗುಡ್ನ್ಯೂಸ್.. ಡೆವಿಲ್ ಸಿನಿಮಾ ಫಸ್ಟ್ ಸಾಂಗ್ ರಿಲೀಸ್ಗೆ ಮುಹೂರ್ತ ಫಿಕ್ಸ್
/filters:format(webp)/newsfirstlive-kannada/media/media_files/2025/08/20/bmtc3-2025-08-20-15-08-55.jpg)
ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಜಯನಗರ 4th ಬ್ಲಾಕ್ನಲ್ಲಿ ವಾಸವಾಗಿದ್ದ ಸಂಪಂಗಿ ಎಂಬಾತ ಮಾರ್ಕೆಟ್ನಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಮಾರ್ಕೆಟ್ಗೆ ಹೋಗಲು ಎಂದಿನಂತೆ ಬಸ್ ನಿಲ್ದಾಣಕ್ಕೆ ಬಂದಿದ್ದ.
ಆದ್ರೆ, ಬಸ್ ಹತ್ತುವಾಗಲೇ ರೂಟ್ ನಂಬರ್ 25 A ಚಾಲಕ ಹಿಂಬದಿಯ ಡೋರ್ ಹಾಕಿದ್ದಾನಂತೆ. ಪರಿಣಾಮ ಸಂಪಂಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಸಂಪಂಗಿ ತಲೆ ಮೇಲೆ ಚಕ್ರ ಹರಿದು ಹೋಗಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಜೀವಬಿಟ್ಟಿದ್ದಾನೆ. ಪತಿಯನ್ನು ಕಳೆದುಕೊಂಡ ಪತ್ನಿ, ಹಾಗೂ ಮಗಳು ಕಣ್ಣೀರು ಹಾಕಿತ್ತಿದ್ದಾರೆ.
ಇನ್ನೂ ಕೆಲವು ದಿನಗಳ ಹಿಂದೆ ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗಮಧ್ಯೆಯಲ್ಲಿ ಚಾಲಕನ ಬೇಜಬ್ದಾರಿಯಿಂದ ಅಪಘಾತ ಸಂಭವಿಸಿತ್ತು. ಚಾಲಕ ಬಸ್ ಚಾಲನೆ ಮಾಡಲು ಹೋಗಿ ರಸ್ತೆ ಪಕ್ಕದಲ್ಲೇ ಇದ್ದ ಪೆಟ್ಟಿ ಅಂಗಡಿಗೆ ಗುದಿದ್ದ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದು ಅಷ್ಟೇ ಅಲ್ಲದೇ ಬಿಎಂಟಿಸಿ ಚಾಲಕ ಎಡವಟ್ಟಿನಿಂದ ಇನ್ನೆಷ್ಟು ಜೀವಗಳು ಬಲಿಯಾಗುತ್ತವೆಯೋ ಗೊತ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ