ಮದ್ದೂರು ಗಣೇಶೋತ್ಸವ ಕೇಸ್​; ವಿಧ್ವಂಸಕ ಸಂಚು ರೂಪಿಸಿದ್ದ ಕ್ರೂರಿ.. ಕಿಡಿ ಹಿಂದಿದ್ದಾನೆ ಮಾಸ್ಟರ್​​ ಮೈಂಡ್​!

ಮದ್ದೂರು ಬೆಂಕಿಯ ಹಿಂದೆ ಮಾಸ್ಟರ್‌ಮೈಂಡ್‌ ಇದ್ದಾನೆ. ಆತನೇ ಪ್ರಚೋದಿಸಿದ್ದ, ಸಂಘಟನೆ ಮಾಡಿದ್ದ, ಕಲ್ಲು ಬಿಲ್ಡಿಂಗ್‌ ಮೇಲೆ ಸಂಗ್ರಹವಾಗುವಂತೆ ನೋಡ್ಕೊಂಡಿದ್ದ. ಹಾಗಾದ್ರೆ, ಯಾರು ಆ ಕಿಡಿಗೇಡಿ?. ಆತನ ಕುತಂತ್ರ ಹೇಗಿತ್ತು?. ಪೊಲೀಸರು ಅಲರ್ಟ್‌ ಆಗದೇ ಇದ್ರೆ ಏನಾಗ್ತಿತ್ತು?.

author-image
Bhimappa
MND_MASTER_MIND
Advertisment

ಮದ್ದೂರು ಬೆಂಕಿಯ ಹಿಂದೆ ಪಕ್ಕಾ ಪ್ರೀ ಪ್ಲ್ಯಾನ್‌ ಇತ್ತು. ಮೆರವಣಿಗೆ ಬರ್ತಾ ಇದ್ದಂತೆ ಲೈಟ್‌ ಆಫ್‌ ಮಾಡಿ ಕಲ್ಲು, ಬಾಟಲ್​ಗಳನ್ನ ಎಸೆಯಲಾಗಿತ್ತು. ಇದೀಗ 22 ಮಂದಿ ಬೆಂಕಿ ಹುಳುಗಳನ್ನ ಪೊಲೀಸ್ರು ಅರೆಸ್ಟ್‌ ಮಾಡಿದ್ದಾರೆ. ಅದರಲ್ಲೊಬ್ಬ ಮಾಸ್ಟರ್‌ಮೈಂಡ್‌ ಇದ್ದಾನೆ. ಆತನೇ ಪ್ರಚೋದಿಸಿದ್ದ, ಸಂಘಟನೆ ಮಾಡಿದ್ದ, ಕಲ್ಲು ಬಿಲ್ಡಿಂಗ್‌ ಮೇಲೆ ಸಂಗ್ರಹವಾಗುವಂತೆ ನೋಡ್ಕೊಂಡಿದ್ದ. ಹಾಗಾದ್ರೆ, ಯಾರು ಆ ಕಿಡಿಗೇಡಿ?. ಆತನ ಕುತಂತ್ರ ಹೇಗಿತ್ತು?. ಪೊಲೀಸರು ಅಲರ್ಟ್‌ ಆಗದೇ ಇದ್ರೆ ಏನಾಗ್ತಿತ್ತು?.

ಬೂದಿಮುಚ್ಚಿದ ಕೆಂಡ.. ಕೋಮು ಡಳ್ಳುರಿಯ ಅಪಾಯದಲ್ಲಿರೋ ಮದ್ದೂರು ಅಕ್ಷರಶಃ ಬೂದಿ ಮುಚ್ಚಿದ ಕೆಂಡ. ಯಾವ್‌ ಸಂದರ್ಭದಲ್ಲಿ ಅದು ಬೆಂಕಿ ರೂಪ ಪಡ್ಕೊಂಡ್‌ ಧಗಧಗಿಸುತ್ತೋ? ಅನ್ನೋ ಆತಂಕ, ಭೀತಿಯಲ್ಲಿಯೇ ಅಲ್ಲಿಯ ಜನ ಜೀವ ಕೈಯಲ್ಲಿ ಹಿಡ್ಕೊಂಡ್‌ ಕ್ಷಣ ಕ್ಷಣವನ್ನ ಕಳೀತ್ತಿದ್ದಾರೆ. ಭಾನುವಾರ ನಾಲ್ಕೈದು ಜನ ಕಿಡಿಗೇಡಿಗಳು ಮಾಡಿದ್ದ ದುಷ್ಕೃತ್ಯಕ್ಕೆ ಮದ್ದೂರಿನಲ್ಲಿ ಬೆಂಕಿ ಹತ್ತಿಕೊಂಡಿತ್ತು. ಅದನ್ನ ಖಂಡಿಸಿ ಮಂಗಳವಾರ ಹಿಂದೂ ಸಂಘಟನೆಯವ್ರು, ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಕರೆ ನೀಡಿದ್ದ ಬಂದ್‌ ಶಾಂತಿಯುತವಾಗಿದೆ. ಭಾರೀ ಪೊಲೀಸ್‌ ಬಂದೋಬಸ್ತ್‌ ಇರೋದ್ರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅಂಗಡಿ ಮುಂಗಟ್ಟಲು ಮುಚ್ಚಿರೋ ಹಿನ್ನೆಲೆಯಲ್ಲಿ ನಗರ ಭೀಕೋ ಅನ್ನುತ್ತಿತ್ತು. ಇದೆಲ್ಲದ್ದಕ್ಕೂ ಕಾರಣವಾಗಿದ್ದು ಅದೊಬ್ಬ ಕ್ರಿಮಿ.  

MND_GANESH (1)

ಕ್ರಿಮಿ ಮದ್ದೂರು ಬೆಂಕಿಯ ನಿಜವಾದ ಕ್ರಿಮಿ ಅರೆಸ್ಟ್‌ ಆಗಿದ್ದಾನೆ. ಇಡೀ ಗಲಭೆಯ ಸೂತ್ರಧಾರನೇ ಅವನು ಅನ್ನೋದ್‌ ಪಕ್ಕಾ ಆಗಿದೆ. ಹೌದು, ಭಾನುವಾರ ಮದ್ದೂರಿನ ರಾಮ್‌ರಹೀಮ್‌ ನಗರದಲ್ಲಿ ಗಣೇಶವ ವಿಸರ್ಜನೆ ನಡೀತಾ ಇರೋ ಸಂದರ್ಭದಲ್ಲಿ ಆಗಿರೋ ಕಲ್ಲು ತೂರಾಟ ನೋಡಿದವ್ರಿಗೆ ಇದೊಂದ್‌ ಪಕ್ಕಾ ಪ್ರೀ ಪ್ಯಾನ್‌ ಅನ್ನೋದ್‌ ಕನ್ಫರ್ಮ್‌ ಆಗಿತ್ತು. ಆ ಬಗ್ಗೆ ಪೊಲೀಸರಿಗೂ ಅರಿವಾಗಿತ್ತು. ಯಾಕಂದ್ರೆ, ಟ್ರ್ಯಾಕ್ಟರ್‌ನಲ್ಲಿ ಗಣೇಶನ ಕೂರಿಸ್ಕೊಂಡಿದ್ದ ಯುವಕರು ಮಸೀದಿ ದಾಟಿ ಮುಂದೆ ಹೋಗ್ತಾ ಇರ್ತಾರೆ. ಮಸೀದಿ ದಾಟಿ 50 ಮೀಟರ್‌ ಮುಂದೆ ಹೋಗ್ತಾ ಇದ್ದಂತೆ ಏಕಾಏಕಿ ಬೀದಿ ಲೈಟ್‌ಗಳು ಸಡನ್‌ ಆಗಿ ಆಫ್‌ ಆಗ್ತಾವೆ, ಬಿಲ್ಡಿಂಗ್‌ ಮೇಲಿಂದ ಕಲ್ಲುಗಳು, ಬಾಟಲ್‌ಗಳು ತೂರಿ ಬರ್ತಾವೆ. ಹಾಗಾದ್ರೆ, ಈ ಸಂಚಿನ ಮಾಸ್ಟರ್‌ಮೈಂಡ್‌ ಯಾರು ಎಂದರೆ, ಆತನೇ ಇರ್ಫಾನ್‌. 

ಮದ್ದೂರು ಬೆಂಕಿ, 22 ಕಿಡಿಗೇಡಿಗಳು ಅರೆಸ್ಟ್‌!

ಭಾನುವಾರ ಸಂಜೆ ಗಣೇಶೋತ್ಸವದ ವೇಳೆ ನಡೆದಿರೋ ಕಲ್ಲು ತೂರಾಟಕ್ಕೆ ಸಂಬಂಧ ಪಟ್ಟಂತೆ ಮದ್ದೂರು ಪೊಲೀಸ್ರು 22 ಮಂದಿಯನ್ನ ಅರೆಸ್ಟ್‌ ಮಾಡಿದ್ದಾರೆ. ಆ ಎಲ್ಲಾ ಆರೋಪಿಗಳ ಹೆಸರುಗಳು ಇಲ್ಲಿದೆ. ಮಹಮ್ಮದ್ ಆವೇಜ್, ಮಹಮದ್ ಇರ್ಫಾನ್, ನವಾಜ್ ಖಾನ್, ಇಮ್ರಾನ್ ಪಾಷಾ, ಉಮರ್ ಫಾರೂಕ್, ಸೈಯದ್ ದಸ್ತಗಿರ್, ಖಾಸಿಫ್ ಅಹಮದ್, ಅಹಮದ್ ಸಲ್ಮಾನ್, ಮುಸವೀರ್ ಪಾಷಾ, ಖಲಾಂದರ್ ಖಾನ್, ಮಹಮದ್ ಅಜೀಜ್, ಇನಾಯತ್ ಪಾಷಾ, ಸುಮೇರ್ ಪಾಷಾ, ಮಹಮದ್ ಖಲೀಂ, ಸಕ್ಲೇನ್ ಪಾಷಾ, ಸಿಕಂದರ್ ಅಲಿಖಾನ್, ಸಾದಿಕ್ ಉಲ್ಲಾ, ಹರ್ಷದ್ ಖಾನ್, ಮೆಹಬೂಬ್ ಪಾಷಾ, ಪರ್ವಿಜ್ ಪಾಷಾ, ಇರ್ಫಾನ್ ಪಾಷಾ, ಸುಹೇಬ್ ಖಾನ್ ಇವರೇ ಬಂಧಿತರಾಗಿದ್ದಾರೆ. ಇವರ ವಿರುದ್ಧ BNS ಕಾಯ್ದೆ ಸೆಕ್ಷನ್‌ 189(2), ಸೆಕ್ಷನ್‌ 189(4), ಸೆಕ್ಷನ್‌ 121(2), ಸೆಕ್ಷನ್‌ 132 ಹಾಗೂ ಸೆಕ್ಷನ್‌ 190 ಅಡಿ ಕೇಸ್‌ ದಾಖಲಾಗಿದೆ. 

ಇವರೆಲ್ಲರ ಉದ್ದೇಶ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ಬಾಟಲ್‌ಗಳನ್ನ ಎಸೀಬೇಕು. ಗಲಭೆ ಸೃಷ್ಟಿ ಮಾಡ್ಬೇಕು. ಇನ್ಮೇಲೆ ರಾಮ್‌ರಹಿಮ್‌ ನಗರದ ರಸ್ತೆಯಲ್ಲಿ ಗಣೇಶನ ಮೆರವಣಿಗೆ ಸಾಗದಂತೆ ಮಾಡ್ಬೇಕು ಅನ್ನೋದ್‌ ಆಗಿತ್ತು. ಇದ್ಕೆಲ್ಲದ್ದಕ್ಕೂ ಒಬ್ಬ ಮಾಸ್ಟರ್‌ಮೈಂಡ್‌ ಇದ್ದ. ಆತನೇ ಮದ್ದೂರು ಬೆಂಕಿಯ ಕ್ರಿಮಿ ಅನ್ನೋದ್‌ ಕನ್ಫರ್ಮ್‌ ಆಗಿದೆ. 

MND_MASTER_MIND_1

ಯಾರು ಈ ಚನ್ನಪಟ್ಟಣದ ಇರ್ಫಾನ್​? ಈತ ಮಾಡಿದ್ದೇನು? 

ಮದ್ದೂರಿನಲ್ಲಿ ನಡೆದಿರೋ ಗಲಭೆ ಖಂಡಿತವಾಗಿಯೂ ಪೂರ್ವ ನಿಯೋಜಿತ ಅನ್ನೋದ್‌ ಯಾರಿಗೆ ಆದ್ರೂ ಅರ್ಥವಾಗುವಂತೆ ಇದೆ. ಹಾಗೇ ಇದಕ್ಕೊಬ್ಬ ಕಿಂಗ್‌ಫಿನ್‌ ಇರ್ತಾನೆ ಅನ್ನೋದ್‌ ಪಕ್ಕಾ ಆಗಿತ್ತು. ಬಟ್‌, ಪೊಲೀಸರು 22 ಮಂದಿಯನ್ನ ಅರೆಸ್ಟ್‌ ಮಾಡ್ತಾ ಇದ್ದಂತೆ ಆ ಕಿಂಗ್‌ ಫಿನ್‌ ಹೆಸ್ರು ಹೊರಬಂದಿದೆ. ಕಿಂಗ್‌ಪಿನ್‌ ಈತನ ಹೆಸ್ರು ಇರ್ಫಾನ್‌. ಈಗ ಮೂಲತಹ ಮದ್ದೂರಿನವನು ಅಲ್ಲವೇ ಅಲ್ಲ. ಈತ ರಾಮನಗರ ಜಿಲ್ಲೆ ಚನ್ನಪಟ್ಟಣದ ವ್ಯಕ್ತಿ. ಕಳೆದ ಎರಡು ವರ್ಷದ ಹಿಂದೆ ಮದ್ದೂರಿಗೆ ಬಂದು ಇಲ್ಲಿ ಪಾತ್ರೆ ವ್ಯಾಪಾರ ಶುರು ಮಾಡ್ತಾನೆ. ವ್ಯಾಪಾರ ಚೆನ್ನಾಗಿ ಆಗ್ತಾ ಇದ್ದಿದ್ದರಿಂದ ಇಲ್ಲಿಯೇ ವ್ಯಾಪಾರ ಮುಂದುವರಿಸ್ತಾನೆ. ಇದೀಗ ಈತನೇ ಬೆಂಕಿ ಹುಳು ಅನ್ನೋ ಆರೋಪ ಕೇಳಿಬರ್ತಾ ಇದೆ. ಹಾಗಾದ್ರೆ, ಈತನ ಬೆಂಕಿ ಪ್ಲ್ಯಾನ್‌ ಹೇಗಿತ್ತು?. 

ಕ್ರಿಮಿನಲ್‌ ಹೆಜ್ಜೆ 01- ಜಾಫರ್‌, ಇರ್ಫಾನ್‌ ನಡುವೆ ನಡೆಯುತ್ತೆ 'ಬೆಂಕಿ' ಸಂಚು!

ಮದ್ದೂರಲ್ಲಿ ಗಣೇಶೋತ್ಸವದ ವಿಸರ್ಜನೆ ಬಹುತೇಕ ಸಾಗುವುದು ರಾಮ್‌ರಹೀಮ್‌ ನರಗದಲ್ಲಿ. ಅಂದ್ರೆ, ಎಲ್ಲಿ ಕಲ್ಲು ತೂರಾಟ, ಬಾಟಲ್‌ ತೂರಾಟವಾಗಿದೆಯೋ? ಅದೇ ಜಾಗದಲ್ಲಿ ಮೆರವಣಿಗೆ ಸಾಗುತ್ತೆ. ಆದ್ರೆ, ಪೊಲೀಸ್ರು ಮಸೀದಿ ಮುಂದೆ ಡಿಜೆ ಹಾಕಲು, ಡ್ಯಾನ್ಸ್‌ ಮಾಡಲು ಅವಕಾಶ ನೀಡೋದಿಲ್ಲ. ಕಾರಣ ಯಾವುದೇ ಗಲಭೆ ಆಗ್ಬಾರದು ಅನ್ನೋ ಮುನ್ನೆಚ್ಚರಿಕೆಯಲ್ಲಿ. ಹೀಗಾಗಿ ಮೆರವಣಿಗೆ ಮಾಡೋರು ಮಸೀದಿಗಿಂತ ಸುಮಾರು 50 ಮೀಟರ್‌ ಹಿಂದೆ ಮತ್ತು 50 ಮೀಟರ್‌ ಮುಂದೆ ಹೋಗಿ ಡಿಜೆ ಹಾಕಿಕೊಂಡು ಡ್ಯಾನ್ಸ್‌ ಮಾಡ್ತಾರೆ. ಇದು ಜಾಫರ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಆತ ಏನಾದ್ರೂ ಮಾಡ್ಬೇಕು ಅಂತ ಇರ್ಫಾನ್‌ ಬಳಿ ಅಸಾಯಕತೆ ತೋಡಿಕೊಳ್ತಾನೆ. ಅದನ್ನ ಕೇಳಿದ್ದ ಇರ್ಫಾನ್‌ ತಾನು ಏನಾದ್ರೂ ಮಾಡ್ತೀನಿ. ಗಣೇಶನ ಮೆರವಣಿಗೆ ಸಾಗದಂತೆ ಮಾಡ್ತೀನಿ ಅಂತ ಆವತ್ತೇ ಸಂಚು ರೂಪಿಸ್ತಾನೆ ಎನ್ನಲಾಗಿದೆ.

ಕ್ರಿಮಿನಲ್‌ ಹೆಜ್ಜೆ 02- ನಾಲ್ಕೈದು ಯುವಕರ ತಂಡ ಕಟ್ಟಿದ್ದ ಇರ್ಫಾನ್‌!

ಅದ್ಯಾವಾಗ ಜಾಫರ್‌ನಿಂದ ಅಸಾಯಕ ಮಾತು ಕೇಳ್ತಾನೋ ಅದೇ ಕ್ಷಣವೇ ಇರ್ಫಾನ್‌ ಫಿಕ್ಸ್‌ ಆಗಿ ಬಿಡ್ತಾನೆ. ತಾನು ಏನಾದ್ರೂ ಮಾಡ್ಬೇಕು, ಬೆಂಕಿ ಹಚ್ಬೇಕು ಅಂತ ಪಣತೊಡ್ತಾನೆ. ಆದ್ರೆ, ಇದು ತನ್ನೊಬ್ಬನಿಂದ ಆಗೋದಿಲ್ಲ ಅನ್ನೋ ತೀರ್ಮಾನಕ್ಕೆ ಬರ್ತಾನೆ. ಹೀಗಾಗಿಯೇ ಆತ ನಾಲ್ಕೈದು ಜನರ ಟೀಮ್‌ ಕಟ್ಟಿಕೊಳ್ತಾನೆ. ಆ ಯುವಕರಿಗೆ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಬೇಕು. ಬಾಟಲ್‌ಗಳನ್ನ ತೂರಬೇಕು ಅಂತ ಹೇಳಿಕೊಡ್ತಾನೆ ಎನ್ನಲಾಗಿದೆ. ಆತನ ಮಾತು ಕೇಳಿದ್ದ ಆ ಯುವಕರು ಪ್ರಚೋದನೆಗೆ ಒಳಗಾಗ್ತಾರೆ. ಎಲ್ಲರೂ ಸೇರಿ ಯಾವಾಗ ಕಲ್ಲು ಎಸೀಬೇಕು? ಹೇಗೆ ಎಸೀಬೇಕು? ಕಲ್ಲು ಎಸೆದ ಮೇಲೆ ತಾವು ಯಾವ ರೀತಿಯಲ್ಲಿ ಎಸ್ಕೇಪ್‌ ಆಗ್ಬೇಕು? ಅನ್ನೋದನ್ನೂ ಇರ್ಫಾನ್‌ ಗೈಡ್‌ ಮಾಡ್ತಾನೆ.

ಕ್ರಿಮಿನಲ್‌ ಹೆಜ್ಜೆ 03- ಲೈಟ್‌ ಆಫ್‌ ಮಾಡಿದ ಸಲ್ಮಾನ್‌, ಉಳಿದವರಿಂದ ಕಲ್ಲು ತೂರಾಟ!

ಎಲ್ಲಿ ಕಲ್ಲು ತೋರಾಟ, ಬಾಟಲ್‌ ತೂರಾಟ ಆಗಿದೆಯೋ? ಅದೇ ಸ್ಥಳದಲ್ಲಿ ಪ್ರತಿ ನಿತ್ಯವೂ ಗಣೇಶ ವಿಸರ್ಜನೆಯ ಮೆರವಣಿಗೆ ಸಾಗ್ತಾ ಇತ್ತು. ಹೀಗಾಗಿ ಇಂತಾ ಟೀಮ್‌ ವಿರುದ್ಧವೇ ಕಲ್ಲು ತೂರಬೇಕು ಅನ್ನೋದ್‌ ಕಿಡಿಗೇಡಿಗಳಿಗೆ ಟಾರ್ಗೆಟ್‌ ಆಗಿರ್ಲಿಲ್ಲ. ಆದ್ರೆ, ಮೆರವಣಿಗೆ ಮೇಲೆ ಕಲ್ಲು ತೂರಬೇಕು ಅನ್ನೋದ್‌ ಮಾತ್ರ ಪಕ್ಕಾ ಟಾರ್ಗೆಟ್‌ ಆಗಿತ್ತು. ಭಾನುವಾರ ರಾತ್ರಿ ತಮಿಲಿಯನ್‌ ಕಾಲೋನಿಯ ಯುವಕರು ಗಣೇಶ ವಿಸರ್ಜನೆಗೆ ರಸ್ತೆಯಲ್ಲಿ ಸಾಗ್ತಾ ಇದ್ರು. ಅಷ್ಟರಲ್ಲಿಯೇ ಬಿಲ್ಡಿಂಗ್‌ ಮೇಲೆ ನಾಲ್ಕೈದು ಯುವಕರು ಕಲ್ಲು, ಬಾಲಟ್‌ಗಳನ್ನ ಸಂಗ್ರಹ ಮಾಡ್ಕೊಂಡ್‌ ಇದ್ರು. ಹಾಗೇ ಸಲ್ಮಾನ್‌ ಅನ್ನೋ ವ್ಯಕ್ತಿ ಬೀದಿ ದೀಪಗಳನ್ನ ಆಫ್‌ ಮಾಡೋದಕ್ಕೆ ನಿಂತ್ಕೊಂಡಿದ್ದ. ನಿರೀಕ್ಷೆ ಅಂತೆ ಮೆರವಣಿಗೆ ಮಸೀದಿ ದಾಡ್ತಾ ಇದ್ದಂತೆ ಸಲ್ಮಾನ್‌ ದಿಢೀರ್‌ ಅಂತ ಬೀದಿ ದೀಪ ಆಫ್‌ ಮಾಡ್ತಾನೆ. ಬಿಲ್ಡಿಂಗ್‌ ಮೇಲಿದ್ದ ಯುವಕರು ಕಲ್ಲು, ಬಾಟಲ್‌ ತೂರುತ್ತಾರೆ. ಅದು ಮೆರವಣಿಗೆಯಲ್ಲಿ ಡ್ಯಾನ್ಸ್‌ ಮಾಡ್ತಿದ್ದ ಯುವಕರಿಗೆ ಬಡಿಯುತ್ತೆ, ಅವರಿಗೆ ಕಲ್ಲು ತೂರುತ್ತಿದ್ದಾರೆ ಅನ್ನೋದ್‌ ಅರಿವಾಗುತ್ತೆ.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕ ಸತೀಶ್ ಸೈಲ್​ ಅರೆಸ್ಟ್​.. ಇಡಿ ಅಧಿಕಾರಿಗಳಿಂದ ಬಂಧನ

MND_GANESH (2)

ಕ್ರಿಮಿನಲ್‌ ಹೆಜ್ಜೆ-04- ಎರಡೂ ಕಡೆ ಕಲ್ಲು ತೂರಾಟ ಜೋರಾಗ್ತಿದ್ದಂತೆ ಎಸ್ಕೇಪ್‌!

ಅದ್ಯಾವಾಗ ಮಸೀದಿಯ ಅಕ್ಕ ಪಕ್ಕ ಇರೋ ಬಿಲ್ಡಿಂಗ್‌ ಮೇಲಿಂದ ಕಲ್ಲು ತೂರಲಾಗ್ತಿದೆ ಅನ್ನೋದ್‌ ಗೊತ್ತಾಗುತ್ತೋ? ಅವಾಗ ಮೆರವಣಿಗೆಯಲ್ಲಿರೋ ಯುವಕರು ಪ್ರತಿಯಾಗಿ ಕಲ್ಲು ತೂರೋದಕ್ಕೆ ಶುರು ಮಾಡ್ತಾರೆ. ಆದ್ರೆ, ಮಸೀದಿಯಲ್ಲಿ ಇದ್ದವ್ರು ಮತ್ತು ಅಕ್ಕಪಕ್ಕದ ಮನೆಯಲ್ಲಿ ಇದ್ದವ್ರು ತಮ್ಮ ಮೇಲೆ ಕಲ್ಲು ತೂರುತ್ತಿದ್ದಾರೆ ಅಂತ ಅವರು ಕಲ್ಲು ತೂರೋದಕ್ಕೆ ಶುರು ಮಾಡ್ತಾರೆ. ಪರಿಣಾಮ ಎರಡೂ ಕಡೆಯಿಂದ ಕಲ್ಲು ತೂರಾಟ ಜೋರಾಗುತ್ತೆ. ಇದಾಗ್ತಾ ಇದ್ದಂತೆ ಇರ್ಫಾನ್‌ ಅಂಡ್‌ ಗ್ಯಾಂಗ್‌ ಅಲ್ಲಿಂದ ಎಸ್ಕೇಪ್‌ ಆಗುತ್ತೆ. ಅವರ ಉದ್ದೇಶವೂ ಅದೇ ಆಗಿತ್ತು. ಯಾವಾಗ ಗಲಭೆ ಜೋರಾಗುತ್ತೋ? ಆ ಸಂದರ್ಭದಲ್ಲಿ ತಾವು ಎಸ್ಕೇಪ್‌ ಆಗ್ಬೇಕು ಅನ್ನೋದಾಗಿತ್ತು. ಅದ್ರಲ್ಲಿ ಇರ್ಫಾನ್‌ ಅಂಡ್‌ ಗ್ಯಾಂಗ್‌ ಸಕ್ಸಸ್‌ ಆಗುತ್ತೆ. ಇನ್ನು ಕಲ್ಲು, ಬಾಟಲ್‌ ತೂರಾಟದಿಂದ ನಾಲ್ಕೈದು ಜನ ಗಾಯಗೊಳ್ತಾರೆ. ಇಬ್ಬರು ಪೊಲೀಸರಿಗೂ ಗಾಯವಾಗುತ್ತೆ.

ಬೆಂಕಿಯ ಕ್ರಿಮಿ ಇರ್ಫಾನ್‌ ವಿಧ್ವಂಸಕ ಸಂಚು ರೂಪಿಸಿದ್ದ. ಆದ್ರೆ, ಅಲ್ಲಿ ಆಗಬಹುದಾಗಿದ್ದ ಬಹುದೊಡ್ಡ ಅನಾಹುತವನ್ನ ತಪ್ಪಿಸಿದ್ದು ಮದ್ದೂರಿನ ಪೊಲೀಸ್ರು. ಅವರೇನಾದ್ರೂ ಚಾಣಾಕ್ಷ್ಯತನ ಉಪಯೋಗಿಸದೇ ಇದ್ರೆ ಮದ್ದೂರು ಕೋಮುಗಲಭೆಯಿಂದ ಗೊತ್ತು ಉರಿಯೋದು ಗ್ಯಾರಂಟಿಯಾಗಿತ್ತು. ಹಾಗೇ ಮದ್ದೂರಿನಲ್ಲಿ ಕೋಮುಗಲಭೆ ಶುರುವಾಯ್ತು ಅಂದ್ರೆ ಅದು ಅಕ್ಕಪಕ್ಕನ ನಗರಗಳಿಗೂ ವ್ಯಾಪಿಸ್ತಿತ್ತು. ಹಾಗಾದ್ರೆ, ಪೊಲೀಸ್ರು ಮಾಡಿದ್ದು ಏನು? ಅದು ನಿಜಕ್ಕೂ ಪ್ರಶಂಸನೀಯ ಕೆಲ್ಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Madduru stone pelting case Mandya news Ganesh immersion Ganesha Chaturthi
Advertisment