/newsfirstlive-kannada/media/media_files/2025/09/08/mnd_ganesh-2-2025-09-08-11-05-02.jpg)
ಮಂಡ್ಯ: ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಫ್ರೀ ಪ್ಲಾನ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ 21ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21ಕ್ಕೂ ಅಧಿಕ ಯುವಕರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಅನ್ಯಧರ್ಮಿಯ ಯುವಕರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣ ಅಲರ್ಟ್ ಅದ ಮದ್ದೂರು ಪೊಲೀಸರು ಮಧ್ಯರಾತ್ರಿಯೇ ಕಲ್ಲು ತೂರಿದ 21ಕ್ಕೂ ಅಧಿಕ ಯುವಕರನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಕುಡಿದು ಬಂದು ದಿನ ಮನೆಯಲ್ಲಿ ಜಗಳ.. ಸ್ವಂತ ಮಗನ ಜೀವ ತೆಗೆದು ಬೆಂಕಿ ಹಚ್ಚಿದ ತಂದೆ, ತಾಯಿ, ಅಣ್ಣ
ಫ್ರೀ ಪ್ಲಾನ್ ಮಾಡಿ ಕಲ್ಲು ತೂರಾಟ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಬೀದಿ ದೀಪ ಆರಿಸಿ ಕಲ್ಲು ತೂರಾಟ ಮಾಡಲಾಗಿದೆ. ಈದ್ ಮಿಲಾದ್ ಆಚರಣೆ ವೇಳೆ ಗಣೇಶನ ಮುಂದೆ ಅವರು ಕುಣಿದಿದ್ದಾರೆ. ಡಿಜೆ ಹಾಕಿಕೊಂಡು ಅವರ ಬಾವುಟ ಹಿಡಿದು ಕುಣಿದಿದ್ದರು. ನಾವು ಅಂದು ಏನು ಮಾತಾಡಿಲ್ಲ. ಆದ್ರೀಗ ನಾವು ಗಣೇಶ ವಿಸರ್ಜನೆ ಮಾಡುವ ವೇಳೆ ಕಲ್ಲು ಹೊಡೆದಿದ್ದಾರೆ. ಕಲ್ಲುಗಳು ಗಣೇಶ ಮೂರ್ತಿ ಮೇಲೆ ಬಿದ್ದಿವೆ ಎಂದು ಹೇಳಿದ್ದಾರೆ.
ಪರಿಶೀಲನೆ ಬಳಿಕ ಮಾತನಾಡಿದ ಮಂಡ್ಯದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು, ತಮಿಳು ಕಾಲೋನಿಯ ಯುವಕರು ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ನಿನ್ನೆ ವಿಸರ್ಜನೆ ಮಾಡಲು ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಗಣೇಶ ಮೆರವಣಿಗೆ ಮೇಲೆ ಕಲ್ಲು ಬಿದ್ದಿದೆ. ಆಗ ಎರಡು ಕಡೆಯಿಂದ ಕಲ್ಲು ತೂರಾಟ ಆಗಿದೆ. ಈ ಸಂಬಂಧ 2 ಪ್ರಕರಣ ದಾಖಲು ಮಾಡಿದ್ದೇವೆ. ಒಂದು ಸುಮೋಟೋ ಪ್ರಕರಣ ಕೂಡ ದಾಖಲಾಗಿದೆ. ಅಜಯ್ ಎಂಬ ಗಾಯಾಳು ದೂರಿನ ಅನ್ವಯ 21 ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ