/newsfirstlive-kannada/media/media_files/2025/09/08/bgk_son_1-2025-09-08-10-44-58.jpg)
ಬಾಗಲಕೋಟೆ: ಮದ್ಯಪಾನ ಮಾಡಿ ಮನೆಗೆ ಬಂದು ಜಗಳ ಮಾಡುತ್ತಿದ್ದ ಸ್ವಂತ ಮಗನ ಜೀವ ತೆಗೆದು ತಂದೆ, ತಾಯಿ, ಅಣ್ಣ ಸೇರಿ ಸುಟ್ಟು ಹಾಕಿದ್ದಾರೆ. ಈ ಘಟನೆ ಬಾಗಲಕೋಟೆಯ ಬಿದರಿ ತೋಟದ ಮನೆಯೊಂದರಲ್ಲಿ ನಡೆದಿದೆ.
ಬಿದರಿ ತೋಟದ ಮನೆಯ ಅನಿಲ್ ಪರಪ್ಪ ಕಾನಟ್ಟಿ (32) ಮೃತ ವ್ಯಕ್ತಿ. ಈತನ ಕಾಟ ತಾಳಲಾರದೇ ಅಣ್ಣ ಬಸವರಾಜ, ತಂದೆ ಪರಪ್ಪ, ತಾಯಿ ಶಾಂತಾ ಸೇರಿ ಜೀವ ತೆಗೆದಿದ್ದಾರೆ. ಬಳಿಕ ಸುಟ್ಟು ಹಾಕಿದ್ದಾರೆ. ಸದ್ಯ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಸೆಪ್ಟೆಂಬರ್ 5 ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಚಂದ್ರಗ್ರಹಣ; ಬೆಳಗ್ಗೆಯಿಂದ ದೇವಾಲಯಗಳಲ್ಲಿ ಶುದ್ಧಿಕಾರ್ಯ.. ಭಕ್ತರಿಗೆ ದರ್ಶನಕ್ಕೆ ಅವಕಾಶ
ಅನಿಲ್ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ತಂದೆ, ತಾಯಿ ಜೊತೆ ಜಗಳ ತೆಗೆಯುತ್ತಿದ್ದನು. ಇದರಿಂದ ಅವರು ಬಳಲಿ ಹೋಗಿದ್ದರು. ಈತನ ಅಣ್ಣ ಬಸವರಾಜ ಭಾರತ ಸೇನೆಯಲ್ಲಿ ಯೋಧನಾಗಿದ್ದಾನೆ. ಇತ್ತೀಚೆಗಷ್ಟೇ ರಜೆ ತೆಗೆದುಕೊಂಡು ಮನೆಗೆ ಬಂದಿದ್ದನು. ಆದರೆ ಅನಿಲ್ನ ವರಸೆ ಮುಂದುವರೆದಿತ್ತು. ಇದರಿಂದ ಕೋಪಿತಗೊಂಡ ಮನೆಯವರು ಮಗನ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾರೆ. ಬಳಿಕ ಡೀಸೆಲ್ ಹಾಕಿ ಸುಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ