/newsfirstlive-kannada/media/media_files/2026/01/23/new-born-babies-2026-01-23-07-18-36.jpg)
ಸಾಂಧರ್ಬಿಕ ಫೋಟೋ Photograph: (AI)
ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ಒಂದೇ ಬಾರಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ದಂಪತಿಯಲ್ಲಿ ಮನೆ ಮಾಡಿದ ಹರ್ಷ
ಅಕ್ಕಿಹೆಬ್ಬಾಳು ಗ್ರಾಮದ ನಿವಾಸಿಗಳಾದ ಅಫ್ತಾಬ್ ಮತ್ತು ಆರೀಫಾ ಭಾನು ದಂಪತಿಗೆ ಈ ತ್ರಿವಳಿ ಮಕ್ಕಳ ಭಾಗ್ಯ ಲಭಿಸಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಆರೀಫಾ ಭಾನು ಅವರು ಮೂವರು ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ್ದಾರೆ.
/filters:format(webp)/newsfirstlive-kannada/media/media_files/2026/02/23/mandya-babies-2026-02-23-16-06-53.jpg)
ತಾಯಿ-ಮಕ್ಕಳು ಆರೋಗ್ಯ
ಸಾಮಾನ್ಯವಾಗಿ ತ್ರಿವಳಿ ಮಕ್ಕಳ ಹೆರಿಗೆಯ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಆತಂಕವಿರುತ್ತದೆ. ಆದರೆ, ಅದೃಷ್ಟವಶಾತ್ ತಾಯಿ ಆರೀಫಾ ಭಾನು ಮತ್ತು ಮೂವರೂ ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದೇ ಬಾರಿಗೆ ಮನೆಗೆ ಮೂವರು ಅತಿಥಿಗಳ ಆಗಮನವಾಗಿರುವುದು ಅಫ್ತಾಬ್ ಕುಟುಂಬದಲ್ಲಿ ಹೊಸ ಕಳೆ ತಂದಿದೆ.
/filters:format(webp)/newsfirstlive-kannada/media/media_files/2026/02/23/mandya-babies-1-2026-02-23-16-07-14.jpg)
ಗ್ರಾಮದ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ವಿಷಯ ತಿಳಿಯುತ್ತಿದ್ದಂತೆಯೇ ಅಕ್ಕಿಹೆಬ್ಬಾಳು ಗ್ರಾಮದ ಜನತೆ ದಂಪತಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮೈಸೂರಿನ ಆಸ್ಪತ್ರೆಯಲ್ಲಿ ಸದ್ಯ ತಾಯಿ ಮತ್ತು ಮಕ್ಕಳು ವೈದ್ಯರ ಆರೈಕೆಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us