/newsfirstlive-kannada/media/media_files/2026/02/23/england-and-srilanka-2026-02-23-15-43-25.jpg)
ಪಲ್ಲೆಕೆಲೆ ಸ್ಟೇಡಿಯಂನಲ್ಲಿ ನಿನ್ನೆ ನಡೆದಿದ್ದು ಬೌಲರ್​ಗಳ ದರ್ಬಾರ್​. ಸ್ಪಿನ್​​ ಫ್ರೆಂಡ್ಲಿ ಪಿಚ್​ನಲ್ಲಿ ರನ್​ಗಳಿಕೆಗೆ ಬ್ಯಾಟರ್ಸ್​ ಪರದಾಡಿದ್ರೆ ಬೌಲರ್ಸ್​ ಮೆರೆದಾಡಿದ್ರು. ಇಂಗ್ಲೆಂಡ್​ ಲಯನ್ಸ್​ ಘರ್ಜನೆಗೆ ಥಂಡಾ ಹೊಡೆದ​ ಶ್ರೀಲಂಕಾ ಹೀನಾಯ ಸೋಲಿಗೆ ಶರಣಾಯ್ತು. ಹೇಗಿತ್ತು ಇಂಗ್ಲೆಂಡ್​-ಶ್ರೀಲಂಕಾ ಹಣಾಹಣಿ?
ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಇಂಗ್ಲೆಂಡ್​ ತಂಡಕ್ಕೆ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ಆರಂಭಿಕ ಆಟಗಾರ ಜೋಸ್​ ಬಟ್ಲರ್​​, ಜೇಕಬ್​ ಬೆತೆಲ್​, ಟಾಮ್​ ಬ್ಯಾಂಟನ್​ ಪೆವಿಲಿಯನ್​ ಪರೇಡ್​ ನಡೆಸಿದ್ರು. ​5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಕ್ಯಾಪ್ಟನ್​ ಹ್ಯಾರಿ ಬ್ರೂಕ್​​ 14 ರನ್​ಗಳಿಸಿ ನಿರ್ಗಮಿಸಿದ್ರು.
ಫಿಲ್​ ಸಾಲ್ಟ್​ ಮಿಂಚು
ಒಂದೆಡೆ ರನ್​ಗಳಿಕೆಗೆ ಬ್ಯಾಟರ್ಸ್​ ಪೆವಿಲಿಯನ್​ ಪರೇಡ್​ ನಡೆಸಿದ್ರೆ ಇನ್ನೊಂದು ತುದಿಯಲ್ಲಿ ಫಿಲ್​ ಸಾಲ್ಟ್​ ಅಬ್ಬರದ ಬ್ಯಾಟಿಂಗ್​ ನಡೆಸಿದ್ರು. ಬ್ಯಾಟರ್ಸ್​ ಮೇಲೆ ಸವಾರಿ ಮಾಡಿದ ಫಿಲ್​ ಸಾಲ್ಟ್​​​ ಕೇವಲ 36 ಎಸೆತಗಳಲ್ಲಿ ಹಾಫ್​​ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಆಲ್​​ರೌಂಡರ್​ ಸ್ಯಾಮ್​ ಕರನ್​ 11 ರನ್​ಗಳಿಗೆ ಸುಸ್ತಾದ್ರೆ, ಹಾಫ್​ ಸೆಂಚುರಿ ಸಿಡಿಸಿ ಲಂಕಾಗೆ ತಲೆನೋವಾಗಿದ್ದ ಫಿಲ್​ ಸಾಲ್ಟ್, ದುನಿಲ್​ ವೆಲ್ಲಲೆಗೆ ಸ್ಪಿನ್ ಬಲೆಗೆ ಬಿದ್ರು. 6 ಬೌಂಡರಿ, 2 ಸಿಕ್ಸರ್​ ಸಿಡಿಸಿ ಸಾಲ್ಟ್​ ಆಟ 62 ರನ್​ಗಳಿಗೆ ಅಂತ್ಯವಾಯ್ತು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಸ್ನೇಹಿತನಿಗೆ ಬ್ಯಾಂಕ್ ಖಾತೆ ಡೀಟೈಲ್ಸ್ ಕೊಟ್ಟ ಯಾಮಾರಿದ ಸ್ನೇಹಿತ: 7 ಕೋಟಿ ರೂ. ಸೈಬರ್ ವಂಚನೆ ಪತ್ತೆ!
20 ಓವರ್​ ಅಂತ್ಯಕ್ಕೆ ಇಂಗ್ಲೆಂಡ್​ 9 ವಿಕೆಟ್​ ನಷ್ಟಕ್ಕೆ 146
ಡೆತ್​ ಓವರ್​ಗಳಲ್ಲಿ ಆಂಗ್ಲರು ಅಬ್ಬರಿಸದಂತೆ ಲಂಕನ್​ ಬೌಲರ್ಸ್​ ಕಟ್ಟಿ ಹಾಕಿದ್ರು. ಅಂತಿಮ ಹಂತದಲ್ಲಿ 4 ಬೌಂಡರಿ ಬಾರಿಸಿದ ವಿಲ್​ ಜಾಕ್ಸ್​ 21 ರನ್​​ಗಳಿಸಿದ್ದು ಬಿಟ್ರೆ, ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪರಿಣಾಮ 20 ಓವರ್​ಗಳ ಅಂತ್ಯಕ್ಕೆ ಇಂಗ್ಲೆಂಡ್​ 9 ವಿಕೆಟ್​ ಕಳೆದುಕೊಂಡು 146 ರನ್​ಗಳಿಸಿತು.
ಚೇಸಿಂಗ್​ಗಿಳಿದ ಆರಂಭದಲ್ಲೇ ಶ್ರೀಲಂಕಾಗೆ ಶಾಕ್​
147 ರನ್​ಗಳ ಸಾಧಾರಣ ಟಾರ್ಗೆಟ್​ ಬೆನ್ನತ್ತಿದ್ದ ಶ್ರೀಲಂಕಾ ತಂಡಕ್ಕೆ ಆಘಾತ ಕಾದಿತ್ತು. ಜೋಫ್ರಾ ಆರ್ಚರ್​, ವಿಲ್​ ಜಾಕ್ಸ್​​ ದಾಳಿಗೆ ಲಂಕಾ ನಲುಗಿ ಹೋಯ್ತು. ಹೋದ ಪುಟ್ಟ ಬಂದ ಪುಟ್ಟ ಅನ್ನೋ ಮಾತಿನಂತೆ ಲಂಕಾ ಬ್ಯಾಟರ್ಸ್​ ಪೆವಿಲಿಯನ್ ಪರೇಡ್​ ನಡೆಸಿದ್ರು. ಪವರ್​ ಪ್ಲೇನಲ್ಲೇ ಪಾತುಮ್​ ನಿಂಸ್ಸಾಂಕ, ಕುಸಾಲ್ ಮೆಂಡೀಸ್​, ಪವನ್​ ರತ್ನನಾಯಕೆ, ಕಮಿಲ್ ಮಿಶರಾ, ದುನಿತ್ ವೆಲ್ಲಲಗೆ ವಿಕೆಟ್​ ಕಳೆದುಕೊಂಡ ಲಂಕಾ ಪವರ್​ಲೆಸ್​ ಆಯ್ತು. ಮೊದಲ 6 ಓವರ್​ಗಳಲ್ಲಿ ಪ್ರಮುಖ 5 ವಿಕೆಟ್​ ಕಳೆದುಕೊಂಡ ಲಂಕಾ ಕೇವಲ 34 ರನ್​ಗಳಿಸಿತು.
ಇದನ್ನೂ ಓದಿ: ಏಪ್ರಿಲ್ 1 ರಿಂದ ಎಚ್‌ಆರ್‌ಎ, ಶಿಕ್ಷಣ ಭತ್ಯೆ, ಹಾಸ್ಟೆಲ್ ಭತ್ಯೆ, ಸಾರಿಗೆ ಭತ್ಯೆ ಹೆಚ್ಚಳ : ಹೊಸ ನಿಯಮ ಜಾರಿ
ಪವರ್​​ ಪ್ಲೇ ಬಳಿಕವೂ ಇಂಗ್ಲೆಂಡ್​ ಬೌಲರ್ಸ್​ ಆರ್ಭಟ ಮುಂದುವರೆಯಿತು. ಕಮಿಂಡು ಮೆಂಡೀಸ್​, ದಶುನ್​ ಹೇಮಂತ ಬಿಗ್​ ಶಾಟ್​ ಹೊಡೆಯಲು ಹೋಗಿ ಕೈ ಸುಟ್ಟುಕೊಂಡ್ರು. ಲಂಕಾ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ದಶುನ್​ ಶನಕ ಕೂಡ 30 ರನ್​ಗಳಿಗೆ ಸುಸ್ತಾದ್ರು.
95 ರನ್​ಗೆ ಲಂಕಾ ಆಲೌಟ್​​
ದುಷ್ಮಂತ ಚಮೀರಾ 6 ರನ್​ಗಳಿಸಿ ನಿರ್ಗಮಿಸಿದ್ರೆ, ದಿಲ್ಶಾನ್ ಮಧುಶಂಕ ಡಕೌಟ್​ ಆದ್ರು. ಆಂಗ್ಲರ ಸ್ಪಿನ್​ಗೆ ಸ್ಟನ್ ಆದ ಲಂಕಾ ಕೇವಲ 95 ರನ್​ಗಳಿಗೆ ಆಲೌಟ್​ ಆಯ್ತು. ಇಂಗ್ಲೆಂಡ್​ ಪರ ವಿಲ್​ ಜಾಕ್ಸ್​ 3, ಜೋಫ್ರಾ ಆರ್ಚರ್​, ಲಯಾಮ್​ ಡಾಸನ್​, ಆದಿಲ್ ರಶೀದ್​ ತಲಾ 2 ವಿಕೆಟ್​ ಕಬಳಿಸಿದ್ರು. 51 ರನ್​ಗಳ ಗೆಲುವಿನೊಂದಿಗೆ ಇಂಗ್ಲೆಂಡ್​ ಸೂಪರ್​-8 ಹಂತದಲ್ಲಿ ಶುಭಾರಂಭ ಮಾಡಿತು.
ಇದನ್ನೂ ಓದಿ:ನಿರೀಕ್ಷಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರುದ್ರ ಮಾಸ್ಟರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us