‘ಆತನ ಜೊತೆ 7 ವರ್ಷ ಸಂಸಾರ ಮಾಡಿದ್ದೇನೆ ಆದರೆ’.. ಅನಾಮಿಕ ದೂರುದಾರನ ಮೊದಲ ಪತ್ನಿ ಹೇಳಿದ್ದೇನು?

ದಿನದಿಂದ ದಿನಕ್ಕೆ ಧರ್ಮಸ್ಥಳ ಬುರುಡೆ ಕೇಸ್​ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿದ ಅನಾಮಿಕ ದೂರುದಾರ ಬಗ್ಗೆ ಪತ್ನಿ ಶಾಕಿಂಗ್​ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

author-image
Veenashree Gangani
dharmasthala case(9)
Advertisment

ಮಂಡ್ಯ: ದಿನದಿಂದ ದಿನಕ್ಕೆ ಧರ್ಮಸ್ಥಳ ಬುರುಡೆ ಕೇಸ್​ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿದ ಅನಾಮಿಕ ದೂರುದಾರ ಬಗ್ಗೆ ಪತ್ನಿ ಶಾಕಿಂಗ್​ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು

dharmasthala case(3)

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅನಾಮಿಕನ ಮೊದಲ ಪತ್ನಿ, 1999ರಲ್ಲಿ ಮದುವೆ, 7 ವರ್ಷ ಸಂಸಾರ ಮಾಡಿದ್ದೆವು‌. ನಮಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಅವನ ಬಳಿ ಒಳ್ಳೆತನ ಇರಲಿಲ್ಲ. ಬರೀ ಸುಳ್ಳು ಹೇಳ್ತಾ ಇದ್ದರು. ನನಗೆ ಹೊಡೆಯುವುದು, ಬಡಿಯುವುದು ಮಾಡ್ತಾ ಇದ್ದರು. ವಿಚ್ಚೇದನ ವೇಳೆ ಜೀವನಾಂಶ ಕೊಡಲು ಸುಳ್ಳು ಹೇಳಿದ್ದ. ಜೀವನಾಂಶ‌ ಕೊಡಲು ಕೆಲಸ ಮಾಡ್ತಿಲ್ಲ ಎಂದು ಕೋರ್ಟ್‌ಗೆ ಸುಳ್ಳು ಹೇಳಿದ್ದ. ಅಲ್ಲೂ ನನಗೆ ನ್ಯಾಯ ಸಿಗಲಿಲ್ಲ. ನನ್ನ ತಾಯಿಯೇ ನನ್ನ ಮಕ್ಕಳನ್ನ ಸಾಕಿದ್ರು. ಒಂದು ದಿನವೂ ಫೋನ್​ ಮಾಡಿ ಮಕ್ಕಳ ಬಗ್ಗೆ ಕೇಳಿಲ್ಲ ಎಂದರು.

ಇದಾದ ಬಳಿಕ ಮಾತನ್ನು ಮುಂದುವರೆಸಿದ ಅವರು, ಮದುವೆ ಬಳಿಕ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಅವರ ಜೊತೆಗಿದ್ದೆ. ಧರ್ಮಸ್ಥಳದಲ್ಲಿ ಕಸಗುಡಿಸೋದು, ಬಾತ್‌ರೂಂ ತೊಳೆಯುವುದು ಮಾಡ್ತಿದ್ರು. ಆತ ಹೇಳ್ತಿರುವುದು ಸುಳ್ಳು ಅನ್ಸುತ್ತೆ. ದುಡ್ಡಿನ ಆಮಿಷಕ್ಕೆ ಹೀಗೆ ಮಾಡ್ತಾ ಇರಬಹುದು. ಧರ್ಮಸ್ಥಳ ಎಂದರೆ ನಮ್ಮ ಮನೆಯವರಿಗೆಲ್ಲಾ ಪ್ರೀತಿ. ಗುಂಡಿ ತೋಡಿದ್ರು ಏನು ಸಿಕ್ಕಿಲ್ಲ ಅಂದ್ರೆ, ಏನೋ‌ ಕಿತಾಪತಿ ಮಾಡ್ತಿದ್ದಾನೆ ಎನಿಸುತ್ತದೆ. ಅ*ತ್ಯಾಚಾರ, ಕೊ*ಲೆಯಾದ ಶವಗಳನ್ನು ಹೂತ ಬಗ್ಗೆ ಯಾವತ್ತು ಹೇಳಿಲ್ಲ. ಯಾವಾಗಲೂ ಅಹಂಕಾರದಲ್ಲೇ ಮರೆಯುತ್ತಿದ್ದ. ಅಣ್ಣ ತಮ್ಮಂದಿರಿಗೂ ಬಾಯಿಗೆ ಬಂದಹಾಗೇ ಬೈಯ್ಯುತ್ತಿದ್ದ. ಹೆಗ್ಗಡೆಯವರು ತುಂಬಾ ಒಳ್ಳೆಯವರು. ಅವನು ಮೋಸಗಾರ, ಸುಳ್ಳುಗಾರ. ಅವನನ್ನು ಬಿಟ್ಟು ಬಂದದ್ದು ಒಳ್ಳೆಯದಾಯಿತು. ಇನ್ನೊಬ್ಬಳ ಜೊತೆ ಮದುವೆ ಮಾಡಿಕೊಳ್ಳಲು ನನಗೆ ಚಿತ್ರಹಿಂಸೆ ಕೊಟ್ಟು ಓಡಿಸಿದ. ಕೆಲಸ‌ ಕೊಟ್ಟ, ಅನ್ನ ಕೊಟ್ಟ ಜಾಗಕ್ಕೆ ಅನ್ಯಾಯ ಮಾಡಬಾರದು. ಮದುವೆ ಮಾಡಿಕೊಂಡು ನಮಗೆ ಏನ್ ಮಾಡಿದಿಯಾ ಎಂದು 2ನೇ ಹೆಂಡ್ತಿ ಬೈತ್ತಿದ್ದಳಂತೆ. ಅವಳ ಒತ್ತಡಕ್ಕೆ, ಆಮಿಷಕಕ್ಕೆ ಒಳಗಾಗಿ ಹೀಗೆ ಮಾಡ್ತಿದ್ದಾನೆ. ದೇವಸ್ಥಾನದ ಹೆಸರು ಕೆಡಿಸುತ್ತಿರುವ ಅವನು ಹಾಳಾಗಬೇಕು ಅಂತ ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case
Advertisment