/newsfirstlive-kannada/media/media_files/2025/09/06/mandya-kavya-2025-09-06-15-16-39.jpg)
ಮಂಡ್ಯ: ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮನನೊಂದು ಕಚೇರಿಯಲ್ಲೇ ಯುವತಿ ಜೀವ ತೆಗೆದುಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ನಡೆದಿದೆ.
ಕಾವ್ಯ ಮೃತ ಯುವತಿ. ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ನಿವಾಸಿ ಆಗಿದ್ದಳು. ಕಾವ್ಯಗೆ ಕಳೆದ 15 ದಿನಗಳ ಹಿಂದೆ ಹಾಸನದ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿತ್ತು. ಆದರೆ ಹುಡುಗನ ಮನೆಯವರು ಇತ್ತೀಚೆಗೆ ಮದುವೆ ಬೇಡ ಎಂದು ಏಕಾಏಕಿ ಕ್ಯಾನ್ಸಲ್ ಮಾಡಿದ್ದರು.
ಇದರಿಂದ ಮನನೊಂದು ಯುವತಿ ಕಚೇರಿಯಲ್ಲಿ ನಿದ್ರೆ ಮಾತ್ರೆ ಸೇವಿಸಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೀವಬಿಟ್ಟಿದ್ದಾಳೆ. ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಖಗ್ರಾಸ ಚಂದ್ರ ಗ್ರಹಣ; ಬೆಂಗಳೂರು ಸೇರಿ ರಾಜ್ಯದ ಈ ದೇವಾಲಯಗಳು ಬಂದ್.. ತಿಮ್ಮಪ್ಪನ ಗುಡಿಯೂ ಕ್ಲೋಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ