/newsfirstlive-kannada/media/media_files/2025/12/19/mandya-yashwanth-2025-12-19-12-51-18.jpg)
ಮಂಡ್ಯ: ರಸ್ತೆ ಅಪಘಾತದಲ್ಲಿ ಮೆದಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿ ನೋವಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಡಿಸೆಂಬರ್ 13 ರಂದು ಕೆಆರ್​ಎಸ್ ರಸ್ತೆಯ ಮಂಟಿ ಬಳಿ ಬೈಕ್​​ಗಳ ನಡುವೆ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಯಶ್ವಂತ್ (21) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ:ಈ ಸ್ಟಾರ್​ ಆಟಗಾರನ ಮೇಲೆ ಫ್ಯಾನ್ಸ್ ಬೇಸರ.. ಅಷ್ಟಕ್ಕೂ ಆಗಿದ್ದೇನು..?
/filters:format(webp)/newsfirstlive-kannada/media/media_files/2025/12/19/mandya-yashwanth-1-2025-12-19-12-54-03.jpg)
ಆಸ್ಪತ್ರೆಯಲ್ಲಿ ವೈದ್ಯರಿಂದ ಮಗಳ ಮೆದಳು ನಿಷ್ಕ್ರಿಯ ಬಗ್ಗೆ ತಿಳಿಸಿದ್ದಾರೆ. ಮಗನ ಅಂಗಾಂಗದಿಂದ ಹಲವರಿಗೆ ಜೀವದಾನದ ಬಗ್ಗೆ ವೈದ್ಯರಿಂದ ಮಾಹಿತಿ ನೀಡಿದ್ದಾರೆ. ಮಗನ ಅಂಗಾಂಗ ದಾನದಿಂದ ಹಲವರ ಜೀವನಕ್ಕೆ ಬೆಳಕಾಗಲು ಪೋಷಕರ ನಿರ್ಧಾರ ಮಾಡಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಮೃತ ಮಗನ ಹಲವು ಅಂಗಾಂಗಗಳನ್ನ ದಾನ ಮಾಡಿದ್ದಾರೆ.
ಮಗನ ಅಂಗಾಂಗದಿಂದ ಹಲವರ ಬಾಳು ಬೆಳಕಾಗಲೆಂದು ಮೃತ ಯಶ್ವಂತ್ ಪೋಷಕರ ಹಾರೈಸಿದ್ದಾರೆ. ಇಂದು ದೇಹದ ಅಂಗಾಂಗ ಪಡೆದ ಬಳಿಕ ನಾಳೆ ಪೋಷಕರಿಗೆ ಯಶ್ವಂತ್ ಮೃತ ದೇಹ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಈ ಸ್ಟಾರ್​ ಆಟಗಾರನ ಮೇಲೆ ಫ್ಯಾನ್ಸ್ ಬೇಸರ.. ಅಷ್ಟಕ್ಕೂ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us