ಈ ಸ್ಟಾರ್​ ಆಟಗಾರನ ಮೇಲೆ ಫ್ಯಾನ್ಸ್ ಬೇಸರ.. ಅಷ್ಟಕ್ಕೂ ಆಗಿದ್ದೇನು..?

ಸೌತ್ ಆಫ್ರಿಕಾ ಟಿ-20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಫುಲ್ ಸೈಲೆಂಟ್ ಆಗ್ಬಿಟ್ಟಿದ್ದಾರೆ. ಪವರ್​ ಪ್ಲೇನಲ್ಲಿ ಪವರ್​ಫುಲ್ ಬ್ಯಾಟಿಂಗ್ ನಡೆಸ್ತಿದ್ದ ಅವರು ಆಫ್ರಿಕನ್ ಬೌಲರ್​ಗಳ ಎದುರು ಮಂಕಾಗಿದ್ದಾರೆ. ಅಭಿಷೇಕ್ ಬ್ಯಾಟ್​ನಿಂದ ಬೌಂಡರಿ, ಸಿಕ್ಸರ್​​ ಮಾಯವಾಗಿರೋದು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿದೆ.

author-image
Ganesh Kerekuli
Updated On
Abhishekh Sharma
Advertisment

ಬೌಂಡರಿ, ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡ್ತಿದ್ದ ಅಭಿಷೇಕ್ ಶರ್ಮಾ, ಅದ್ಯಾಕೋ ಡಲ್ ಆಗ್ಬಿಟ್ಟಿದ್ದಾರೆ. ಟೆರರ್, ಡಿಸ್ಟ್ರಕ್ಟೀವ್, ಪವರ್​​ ಹಿಟ್ಟರ್ ಅಂತಾನೇ ಕರೆಸಿಕೊಳ್ತಿದ್ದ ಪಂಜಾಬ್ ಬಾಯ್, ರನ್​ಗಳಿಸೋಕೇ ಪರದಾಡ್ತಿದ್ದಾರೆ. ಅಭಿಷೇಕ್​ಗೆ ಏನಾಗಿದೆ? ಅಭಿಷೇಕ್ ಅಬ್ಬರಕ್ಕೆ ಆಫ್ರಿಕನ್ನರು ಬ್ರೇಕ್ ಹಾಕಿದ್ದೇಗೆ..? ಅಭಿಷೇಕ್ ಬ್ಯಾಟಿಂಗ್ ರಿದಮ್ ಕಳೆದುಕೊಂಡ್ರಾ..?  

ಅಭಿಷೇಕ್ ಫುಲ್ ಸೈಲೆಂಟ್..!

ಸರಣಿಯಲ್ಲಿ ಅಭಿಷೇಕ್ 3 ಪಂದ್ಯಗಳನ್ನ ಆಡಿದ್ದಾರೆ. ಆದ್ರೆ ಅಭಿಷೇಕ್ ಗಳಿಸಿರೋದು ಕೇವಲ 69 ರನ್ ಮಾತ್ರ. 23ರ ಬ್ಯಾಟಿಂಗ್ ಸರಾಸರಿಯಲ್ಲಿ 69 ರನ್​ಗಳಿಸಿರೋ ಎಡಗೈ ಬ್ಯಾಟರ್​​​​ ಹೈಯೆಸ್ಟ್ ಸ್ಕೋರ್, ಜಸ್ಟ್ 35 ರನ್. ಅಭಿಷೇಕ್ ಕರಿಯರ್​ನಲ್ಲೇ ಇದು ಅತ್ಯಂತ ಕಳಪೆ ಟಿ-20 ಸರಣಿಯಾಗಿದೆ. 

ಇದನ್ನೂ ಓದಿ: 28 ಕೋಟಿ ನೀರಿನಲ್ಲಿ ಹೋಮ..! ಯಾವ ಫ್ರಾಂಚೈಸಿ ಹೇಗೆಲ್ಲ ಕೈಸುಟ್ಟುಕೊಂಡಿವೆ?

Abhishek Sharma
ಅಭಿಷೇಕ್ ಶರ್ಮಾ Photograph: (ಬಿಸಿಸಿಐ)

ಕ್ಲೀನ್ ಹಿಟ್ಟರ್, ಅಗ್ರೆಸಿವ್ ಮೈಂಡ್​ಸೆಟ್ ಇರುವ ಅಭಿಷೇಕ್​, ಸರಣಿಯಲ್ಲಿ ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. ಇದು ಅಭಿಷೇಕ್ ಬ್ಯಾಟಿಂಗ್​​​ನ ಲೋ ಪಾಯಿಂಟ್ ಆಗಿದೆ. ಧರ್ಮಶಾಲಾ ಟಿ-20 ಪಂದ್ಯದಲ್ಲಿ ಅಭಿಷೇಕ್ 35 ರನ್​ಗಳಿಸಿದ್ದು ಬಿಟ್ರೆ ಉಳಿದೆರಡು ಪಂದ್ಯಗಳಲ್ಲಿ 20 ರನ್ ಸಹ​​​ ದಾಟಲಿಲ್ಲ. 

ಟಿ-20 ಕಿಂಗ್, ಸಿಕ್ಸರ್​​​ಗಳ ಸರದಾರ ಎನಿಸಿಕೊಂಡಿದ್ದ ಅಭಿಷೇಕ್ ಪಂದ್ಯವೊಂದರಲ್ಲಿ ಬೌಂಡರಿಗಿಂತ ಸಿಕ್ಸರ್​ಗಳನ್ನೇ ಹೆಚ್ಚು ಸಿಡಿಸ್ತಾರೆ. ಆದ್ರೆ ಸೌತ್ ಆಫ್ರಿಕಾ ಟಿ-20 ಸೀರಿಸ್​ನಲ್ಲಿ ಆರಂಭಿಕ ಬ್ಯಾಟ್ಸ್​ಮನ್​ ಸಿಡಿಸಿದ್ದು, ಕೇವಲ 6 ಸಿಕ್ಸರ್​​ ಮಾತ್ರ. ತನ್ನ ಪವರ್​ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್​ಗಳನ್ನ ಷೇಕ್ ಮಾಡುತ್ತಿದ್ದ ಅಭಿಷೇಕ್, ಇದೀಗ ಬ್ಯಾಟಿಂಗ್ ರಿದಮ್ ಕಳೆದುಕೊಂಡು ಅವರೇ ಷೇಕ್ ಆಗ್ಬಿಟ್ಟಿದ್ದಾರೆ.

ಇದನ್ನೂ ಓದಿ: ಈ ಐದು ಆಟಗಾರರಿಗೆ ಮತ್ತೆ ಮರುಜೀವ ಕೊಟ್ಟ IPL; ಇದೇ ಲಾಸ್ಟ್ ಚಾನ್ಸ್..!

ABHISHEK_SHARMA (1)

ಅಭಿಷೇಕ್ ಶರ್ಮಾ ಔಟ್ ಆದ್ರೆ ತಂಡ ಢಮಾರ್..?

ಟಿ-20 ಕ್ರಿಕೆಟ್​​ನಲ್ಲಿ ಅಭಿಷೇಕ್ ಮೋಸ್ಟ್ ಇಂಪಾರ್ಟೆಂಟ್ ಬ್ಯಾಟರ್. ಅಭಿಷೇಕ್ ಒಳ್ಳೆ ಸ್ಟಾರ್ಟ್ ಕೊಟ್ರೆ ತಂಡ ಗುಡ್ ಪೊಸಿಷನ್​​​ನಲ್ಲಿರುತ್ತದೆ. ಒಂದು ವೇಳೆ ಅಭಿಷೇಕ್ ಕೈಕೊಟ್ರೆ, ತಂಡ ರನ್​ಗಳಿಸೋಕೂ ಪರದಾಡುತ್ತಿದೆ. ಇದು ಪದೇ ಪದೇ ಪ್ರೂವ್ ಕೂಡ ಆಗಿದೆ. ಆರಂಭಿಕ ಅಭಿಷೇಕ್ ಸ್ವಲ್ಪ ಜವಾಬ್ದಾರಿ ಮರೆತ್ರೂ ತಂಡಕ್ಕೆ ಹಿನ್ನಡೆ ಖಚಿತ. ಅಭಿಷೇಕ್ ಬ್ಯಾಟಿಂಗ್​ನಲ್ಲಿ ಮಿಂಚಿದ್ರೆ ತಂಡದ ಗೆಲುವನ್ನ ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ. 

ಸುನಾಮಿ ಎಬ್ಬಿಸ್ತಾರಾ ಅಭಿ?

ಕಟಕ್, ನ್ಯೂ ಚಂಡೀಗಢ್ ಮತ್ತು ಧರ್ಮಶಾಲಾದಲ್ಲಿ ಸೈಲೆಂಟ್​ ಆಗಿದ್ದ ಅಭಿಷೇಕ್, ಅಹ್ಮದಾಬಾದ್​ನಲ್ಲಿ ಸುನಾಮಿ ಎಬ್ಬಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮಹತ್ವದ ಪಂದ್ಯದಲ್ಲಿ ಸಿಡಿದೇಳಲು ಹೊರಟಿರುವ ಅಭಿಷೇಕ್​, ತಂಡಕ್ಕೆ ಸರಣಿ ಗೆಲ್ಲಿಸಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಲಕ್ಷಾಂತರ ಮಂದಿ ಸೇರಲಿರುವ ನಮೋ ಮೈದಾನದಲ್ಲಿ ಅಭಿಷೇಕ್ ಒಂದೇ ಒಂದು ಪಂದ್ಯದಲ್ಲಿ ಧೂಳೆಬ್ಬಿಸಲು ಹೊರಟಿದ್ದಾರೆ.  ಅಭಿಷೇಕ್​ಗೆ ಯಾವುದು ಅಸಾಧ್ಯವಿಲ್ಲ. ಹೊಡಿಬಡಿ ಆಟದಲ್ಲಿ ಅಭಿಷೇಕ್​ರನ್ನ ಮೀರಿಸೋರೇ ಇಲ್ಲ.

ಇದನ್ನೂ ಓದಿ: IND vs SA ಫೈನಲ್.. ಟೀಂ ಇಂಡಿಯಾಗೆ ಸ್ಟಾರ್​ ಬೌಲರ್​ ಕಂಬ್ಯಾಕ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Surya kumar Yadav Abhishek Sharma Team India T20I India vs South Africa
Advertisment