/newsfirstlive-kannada/media/media_files/2025/09/10/police-securities-1-2025-09-10-09-08-05.jpg)
ಮಂಡ್ಯ: ಮದ್ದೂರಿನಲ್ಲಿ ಇಂದು ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮವಿದೆ. ಒಟ್ಟು 28 ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮವಿದ್ದು, ಹಿಂದೂ ಸಂಘಟನೆ, BJP-JDS ನೇತೃತ್ವದಲ್ಲಿ ಮೆರವಣಿಗೆ ಕೂಡ ನಡೆಯಲಿದೆ.
ಒಂದು ಅಂದಾಜಿನ ಪ್ರಕಾರ, ಸುಮಾರು 20,000ಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದ್ದು, ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆಗೆ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣ ವಲಯ IGP ಬೋರಲಿಂಗಯ್ಯ ನೇತೃತ್ವದ ಭದ್ರತೆ ನೀಡಲಾಗಿದೆ.
ಹೇಗಿದೆ ಭದ್ರತೆ..?
- ದ.ವಲಯದ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ
- 5 ಮಂದಿ ಎಸ್​ಪಿ, 4 ಜನ ಎಎಸ್​ಪಿ ಸೇರಿ ಪೊಲೀಸರ ಭದ್ರತೆ
- ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ,ಚಾಮರಾಜನಗರ
- ಹಾಸನ ಸೇರಿದಂತೆ ಹಲವು ಜಿಲ್ಲೆಗಳ ಪೊಲೀಸರ ನಿಯೋಜನೆ
- ಕೆಎಸ್ಆರ್‌ಪಿ, ಡಿಎಆರ್ ತುಕಡಿ, ಱಪಿಡ್ ಆ್ಯಕ್ಷನ್ ಫೋರ್ಸ್
- ಮದ್ದೂರಿನಲ್ಲಿ ಒಟ್ಟು 2,000 ಪೊಲೀಸ್ ಸಿಬ್ಬಂದಿ ನಿಯೋಜನೆ
ಸೆಪ್ಟೆಂಬರ್ 7 ರಂದು ನಡೆದ ಘಟನೆ ಮರುಕಳಿಸದಂತೆ ಸರ್ಪಗಾವಲು ವಿಧಿಸಲಾಗಿದೆ. ಪಟ್ಟಣದಾದ್ಯಂತ ಹದ್ದಿನ ಪೊಲೀಸ್ ಇಲಾಖೆ ಹಿದ್ದಿನ ಕಣ್ಣಿಟ್ಟಿದ್ದು, ಮೆರವಣಿಗೆಯ ಮಾರ್ಗವನ್ನೂ ಸೂಚಿಸಿದೆ. BJP ಕಚೇರಿ ಮುಂದೆ ಪ್ರತಿಷ್ಠಾಪಿಸಿದ ಮೂರ್ತಿಗಳು ಅಸೆಂಬಲ್ ಆಗಲಿವೆ. ನಂತರ IB ವೃತ್ತದಿಂದ ಪೇಟೆ ಬೀದಿ ಮಾರ್ಗವಾಗಿ ಮೆರವಣಿಗೆ ಸಾಗಲಿದೆ. ಬಳಿಕ, ಕೊಲ್ಲಿ ಸರ್ಕಲ್ ತಲುಪಲಿದೆ. ಒಟ್ಟು 3 ಕಿಲೋ ಮೀಟರ್ ಉದ್ದ ಗಣಪತಿ ಮೆರವಣಿಗೆ ಸಾಗಲಿದೆ. ಬಳಿಕ ಶಿಂಷಾ ನದಿಯಲ್ಲಿ ಸಾಮೂಹಿಕ ವಿಸರ್ಜನೆ ಮಾಡಲಾಗ್ತಿದೆ.
ಇದನ್ನೂ ಓದಿ:ಮದ್ದೂರಿನಲ್ಲಿ ಇವತ್ತು 28 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ.. ಸದ್ಯದ ಪರಿಸ್ಥಿತಿ ಹೇಗಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us