/newsfirstlive-kannada/media/media_files/2025/09/08/mnd_ganesha_lady-2025-09-08-11-34-01.jpg)
ಸಕ್ಕರೆನಾಡಿನ ಮದ್ದೂರು ಪಟ್ಟಣ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ಮಧ್ಯೆ ಇವತ್ತು 28 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆಯಿದ್ದು, ಬಿಜೆಪಿ ರಾಜ್ಯ ನಾಯಕರು ಭಾಗಿ ಆಗ್ತಿದ್ದು, ರಾಜಕೀಯ ಕಿಚ್ಚು ಧಗಧಗಿಸುವ ಸಾಧ್ಯತೆ ಇದೆ. ಇನ್ನು, ಶಾಂತಿ ಸಭೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಶಾಂತಿ ಮಂತ್ರ ಜಪಿಸಿದ್ದಾರೆ.
ಮದ್ದೂರು ಗಲಾಟೆ ವಿಪಕ್ಷಗಳಿಗೆ ಅಸ್ತ್ರ ಸಿಕ್ಕಿದ್ದು ಸರ್ಕಾರದ ವಿರುದ್ಧ ರಾಜಕೀಯ ಸಮರಾಸ್ತ್ರ ಪ್ರಯೋಗಿಸ್ತಿದೆ. ನಿನ್ನೆ ಮದ್ದೂರಿನಲ್ಲಿ ಶಾಂತಿ ಸಭೆ ನಡೆಸಿದ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಘಟನೆ ನಡೆದ ತಕ್ಷಣವೇ ಸರ್ಕಾರ ಕ್ರಮ ಕೈಗೊಂಡಿದೆ ತಪ್ಪಿತಸ್ಥರು ಯಾರೇ ಇದ್ರೂ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ ಎಂದಿದ್ದಾರೆ.
ಇವತ್ತು 28 ಗಣಪತಿಗಳ ವಿಸರ್ಜನಾ ಕಾರ್ಯಕ್ರಮ
ಈ ಮಧ್ಯೆ ಇವತ್ತು ಮದ್ದೂರು ಪಟ್ಟಣದಲ್ಲಿ 28 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮ ಇದ್ದು, 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಬಿಜೆಪಿ ರಾಜ್ಯ ನಾಯಕರು ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸ್ತಿದ್ದಾರೆ. ಹೀಗಾಗಿ ಬೂದಿಮುಚ್ಚಿದ ಕೆಂಡ ಮತ್ತೆ ಸ್ಫೋಟಿಸುವ ಆತಂಕ ಪೊಲೀಸರಿಗೆ ಕಾಡ್ತಿದೆ. ಗಣಪತಿ ವಿಸರ್ಜನೆ ವೇಳೆ ಶಾಂತಿ ಕಾಪಾಡುವಂತೆ ಸಚಿವ ಚಲುವರಾಯಸ್ವಾಮಿ ಕರೆ ನೀಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ , ಹಿಂದುಗಳ ಮೇಲೆ ಲಾಠಿ ಚಾರ್ಜ್ ಮೂಲಕ ಓಲೈಕೆ ರಾಜಕಾರಣ ಮಾಡ್ತಿದೆ ಅಂತ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಒಟ್ಟಾರೆ, ಶಾಂತಿಯಿಂದ ನಡೀಬೇಕಿದ್ದ ಗಣೇಶೋತ್ಸವ ಗಲಾಟೆ ಸ್ವರೂಪಕ್ಕೆ ತಿರುಗಿರೋದು ಒಳ್ಳೆಯ ಬೆಳವಣಿಗೆ ಅಲ್ಲ.
ಇದನ್ನೂ ಓದಿ:ಐಫೋನ್ 17 ಸರಣಿ ರಿಲೀಸ್.. ಭಾರತದಲ್ಲಿ ರೇಟ್ ಎಷ್ಟು? ಯಾವಾಗ ಸಿಗುತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us