ಎಣ್ಣೆ ಕೊಡದಿದ್ದಕ್ಕೆ ಬಾರ್​​ಗೆ ಬೆಂಕಿ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು..!

ಎಣ್ಣೆ ಕೊಡದಿದ್ದಕ್ಕೆ ಬಾರ್​ಗೆ ಬೆಂಕಿಯಿಟ್ಟು ಅಟ್ಟಹಾಸ ಮೆರೆದಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಗಸರಹಳ್ಳಿಯಲ್ಲಿ ನಡೆದಿದೆ. ಪುಡಾರಿಗಳ ಪುಂಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

author-image
Ganesh Kerekuli
Mandya bar
Advertisment

ಮಂಡ್ಯ: ಎಣ್ಣೆ ಕೊಡದಿದ್ದಕ್ಕೆ ಬಾರ್​ಗೆ ಬೆಂಕಿಯಿಟ್ಟು ಅಟ್ಟಹಾಸ ಮೆರೆದಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಗಸರಹಳ್ಳಿಯಲ್ಲಿ ನಡೆದಿದೆ. ಪುಡಾರಿಗಳ ಪುಂಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಅಗಸರಹಳ್ಳಿ ಗೇಟ್ ಬಳಿ ಪರಮೇಶ್ ಅನ್ನೋರು ಈಗಲ್ ಬಾರ್ ಅಂಡ್ ರೆಸ್ಟೋರೆಂಟ್ ನಡೆಸ್ತಿದ್ದಾರೆ. ಇವರ ಬಾರ್​ಗೆ ನಿನ್ನೆ ರಾತ್ರಿ ಎಂಟ್ರಿ ನೀಡಿದ್ದ ಮುರುಕನಹಳ್ಳಿ ಗ್ರಾಮದ ರಕ್ಷಿತ್ ಹಾಗೂ ಆತನ ಸ್ನೇಹಿತರಿಬ್ಬರು, ಉಚಿತವಾಗಿ ಎಣ್ಣೆ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಬಾರ್​ನ ಸಿಬ್ಬಂದಿ ಒಪ್ಪಿಲ್ಲ. 

ಅದಕ್ಕೆ ರಾಕ್ಷಸರಂತೆ ವರ್ತಿಸಿದ ಕಿಡಿಗೇಡಿಗಳು, ಬಾರ್ ಮಾಲೀಕನ ಕಾರ್​ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದಾಂದಲೆ ನಡೆಸಿದ್ದಾರೆ. ನಂತರ ಬಾರ್​​ನ ಮುಂಭಾಗಕ್ಕೆ ಬೆಂಕಿ ಹಚ್ಚಿದ್ದಾರೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆ.ಆರ್.ಪೇಟೆ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mandya news
Advertisment