/newsfirstlive-kannada/media/media_files/2025/12/20/mandya-magic-coin-1-2025-12-20-13-54-37.jpg)
ನಮ್ಮ ಬಳಿ ರಾಮ-ಲಕ್ಷ್ಮಣ ನಾಣ್ಯಗಳಿವೆ. ಅವು ಮಾಂತ್ರಿಕ ಶಕ್ತಿಯ ಅದೃಷ್ಟದ ಸಂಕೇತ. ನಿಮಗೆ ಅಗತ್ಯ ಇದ್ದರೆ ಕೊಡ್ತೀವಿ ಎಂದು ಯಾರಾದರೂ ಬಂದರೆ ಹುಷಾರಾಗಿರಿ. ವಂಚಕರು ಆನ್​ಲೈನ್ ಮೂಲಕವೂ ನಿಮ್ಮನ್ನ ಮೋಸಗೊಳಿಸಬಹುದು, ಜಾಗೃತರಾಗಿರಿ.
ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಪ್ರಕರಣ ನಡೆದಿದೆ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರನ್ನ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿದ್ದಾರೆ. ನಮ್ಮ ಬಳಿ ಮಾಂತ್ರಿಕ ಶಕ್ತಿಯುಳ್ಳ ರಾಮ, ಲಕ್ಷ್ಮಣ ನಾಣ್ಯಗಳಿವೆ. ಅವುಗಳನ್ನು ನೀವು ಪಡೆದುಕೊಂಡರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ. ನಿಮಗೆ ಇಷ್ಟವಿದ್ದರೆ ಪಡೆಯಬಹುದು ಎಂದು ಓಳು ಬಿಟ್ಟಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳದ ಬುರುಡೆ ಗ್ಯಾಂಗ್‌ನ ಚಿನ್ನಯ್ಯಗೆ ಈಗ ತನ್ನದೇ ಗ್ಯಾಂಗ್ ನಿಂದ ಜೀವ ಭಯ! : ಭದ್ರತೆ ಕೋರಿ ಪೊಲೀಸ್ ಠಾಣೆಗೆ ದೂರು
/filters:format(webp)/newsfirstlive-kannada/media/media_files/2025/12/20/mandya-magic-coin-2025-12-20-13-54-21.jpg)
ಅದನ್ನು ನಂಬಿದ ಬೆಂಗಳೂರು ಮೂಲದ ವ್ಯಕ್ತಿ, ವಂಚಕರಿಗೆ ಕೊಟ್ಟ ಮಾತಿನಂತೆ 1 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಬಳಿಕ ನಾಣ್ಯ ಬೇಕು ಎಂದರೆ ನೀವು ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ KSRTC ಬಸ್ ನಿಲ್ದಾಣದ ಬಳಿ ಬರಬೇಕು ಎಂದಿದ್ದಾರೆ. ಅಲ್ಲಿಗೆ ಮೋಸಹೋದ ವ್ಯಕ್ತಿ ಬಂದಿದ್ದರು. ರಾಮ, ಲಕ್ಷ್ಮಣ ನಾಣ್ಯ ಎಂದು ತಾಮ್ರದ ನಾಣ್ಯಗಳನ್ನು ಕೈಗಿಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/12/20/mandya-magic-coin-2-2025-12-20-13-58-08.jpg)
ಆಗ ಅವರಿಗೆ ತಾವು ಮೋಸ ಹೋಗಿರೋದು ಅರಿವಿಗೆ ಬಂದಿದೆ. ಕಳ್ಳ ಕಳ್ಳ ಎಂದು ಜೋರಾಗಿ ಕಿರುಚಾಡಿದ್ದಾರೆ. ಆಗ ಅಲ್ಲಿದ್ದ ಸ್ಥಳೀಯರು ಗಾಬರಿಯಿಂದ ಓಡಿ ಬಂದಿದ್ದಾರೆ. ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ವಂಚಕರನ್ನು ಹಿಡಿದು ಥಳಿಸಿದ್ದಾರೆ. ಚೆನ್ನಾಗಿ ಥಳಿಸಿದ ಬಳಿಕ ಸಾರ್ವಜನಿಕರು, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್ ರಾವ್, ಸುಧೀರ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಈ ಗ್ಯಾಂಗ್​ನ ಮತ್ತೊಬ್ಬ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us