ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನೂ ಹೂತು ಹಾಕಿದ್ದೇನೆ ಎಂದು ಆರೋಪ ಮಾಡಿದ್ದ ಅನಾಮಿಕನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಮಾಸ್ಕ್‌ಮ್ಯಾನ್ ನಿಜವಾದ ಹೆಸರು ಚಿನ್ನಯ್ಯ. ಈ ಚಿನ್ನಯ್ಯ ಮಂಡ್ಯದ ಚಿಕ್ಕಬಳ್ಳಿ ಗ್ರಾಮಸ್ಥ.
ಮಾಸ್ಕ್​ ಮ್ಯಾನ್​ @ಚಿನ್ನಯ್ಯ ಅರೆಸ್ಟ್​ ಆಗುತ್ತಿದ್ದಂತೆ ಮಂಡ್ಯದ ಚಿಕ್ಕಬಳ್ಳಿ ಗ್ರಾಮಸ್ಥರು ಹಾಲು ಕುಡಿದಷ್ಟೇ ಸಂತೋಷ ಆಗ್ತಿದೆ ಎಂದು ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ್ದಾರೆ. ಮಂಜುನಾಥ, ಅಣ್ಣಪ್ಪಸ್ವಾಮಿ ಇದ್ದಾನೆ ಎಂಬುದಕ್ಕೆ ಇದು ಜೀವಂತ ಸಾಕ್ಷಿ. ಧರ್ಮಸ್ಥಳಕ್ಕೆ ಅಪಮಾನ ಮಾಡಿದ ವ್ಯಕ್ತಿ ಈತ. ಈಗ ಧರ್ಮಸ್ಥಳದ ಮಂಜುನಾಥ ಕಣ್ಣು ಬಿಟ್ಟಿದ್ದಾನೆ. ಎಸ್‌ಐಟಿ ತಂಡ ಚಿನ್ನಯ್ಯನನ್ನು ಸರಿಯಾಗಿ ವಿಚಾರಣೆ ಮಾಡಬೇಕು. ಆತನ ಹಿಂದೆ ಇರುವವರು ಬಂಧನವಾಗ್ತಾರೆ. ಅವರಿಗೆಲ್ಲ ತಕ್ಷ ಶಿಕ್ಷೆಯಾಗಲಿದೆ. ಈ ಬಗ್ಗೆ ಎನ್‌ಐಎ ತನಿಖೆ ಮಾಡಬೇಕು.ಇವರ ಸುಳ್ಳಿನಿಂದ ಧರ್ಮಸ್ಥಳ ಭಕ್ತರು ಕಣ್ಣೀರು ಹಾಕಿದ್ದಾರೆ. ಭಕ್ತರ ಶಾಪ ಇವರಿಗೆ ತಟ್ಟದೆ ಇರಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ