/newsfirstlive-kannada/media/media_files/2025/08/05/mejastic-bus-stop-taxi-2025-08-05-10-37-15.jpg)
ಬೆಂಗಳೂರು: ಬಸ್ ಸಂಚಾರ ಬಹುತೇಕ ಸ್ತಬ್ಧವಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ ಓಡಾಟ ಬಹುತೇಕ ಸ್ತಬ್ಧಗೊಂಡಿದೆ.
ಹೀಗಾಗಿ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವುದಕ್ಕೆ ಬರೋಬ್ಬರಿ ₹12 ಸಾವಿರ ಕೊಟ್ಟು ಟ್ಯಾಕ್ಸಿ ಬುಕ್ ಮಾಡಿದ್ದಾನೆ. ಇಂದು ಸಾರಿಗೆ ನೌಕರರ ಮುಷ್ಕರದ ಹಿನ್ನೆಯಲ್ಲಿ ಯಾವುದೇ ಬಸ್ಗಳು ರಸ್ತೆಗೆ ಇಳಿದಿಲ್ಲ.
ಇದನ್ನೂ ಓದಿ:ಬೆಳಗ್ಗೆ 6 ಗಂಟೆಯಿಂದ ಮುಷ್ಕರ.. ಬಸ್ ಡಿಪೋ ಕಡೆಗೆ ಹೋಗಬೇಡಿ, ಮನೆಯಲ್ಲಿ ಇರಿ; ಅನಂತ
ಅಲ್ಲದೇ ಮಂಗಳೂರಿಗೆ ಹೋಗಲು ಬಸ್ ಇಲ್ಲದ ಕಾರಣ ವ್ಯಕ್ತಿಯೊಬ್ಬ ರಾತ್ರಿ ತನಕ ಕಾಯೋದಕ್ಕೆ ಆಗಲ್ಲ. ರಾತ್ರಿ ಬಸ್ ಇರುತ್ತೆ ಅನ್ನೋದು ಕನ್ಫರ್ಮ್ ಇಲ್ಲ ಅಂತ 12 ಸಾವಿರ ಕೊಟ್ಟು ಟ್ಯಾಕ್ಸಿ ಬುಕ್ ಮಾಡಿದ್ದಾನೆ. ಈತ ಮೂರು ದಿನ ರಜೆಯ ಕಾರಣಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿದ್ದ. ಏರ್ಪೋರ್ಟ್ನಿಂದ ಬಸ್ ವ್ಯವಸ್ಥೆ ಇದ್ದ ಕಾರಣ ಮೆಜೆಸ್ಟಿಕ್ಗೆ ಬಂದಿದ್ದಾನೆ. ಆದ್ರೆ, ಮೆಜೆಸ್ಟಿಕ್ನಿಂದ ಊರಿಗೆ ಹೋಗಲು ಬಸ್ ಇಲ್ಲದೆ ವ್ಯಕ್ತಿ ಕಂಗಾಲಾಗಿದ್ದ. ಪರಿಣಾಮ 12 ಸಾವಿರಕ್ಕೆ ಟ್ಯಾಕ್ಸಿ ಮಾಡಿ ಮಂಗಳೂರಿಗೆ ಹೊರಟಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ