/newsfirstlive-kannada/media/media_files/2025/08/23/dharmasthala-case10-2025-08-23-22-51-07.jpg)
ನಾನು ಆಡಿದ್ದೇ ಆಟ, ನಾನು ಹೇಳಿದ್ದೇ ಸತ್ಯ ಅಂತ ಧರ್ಮಸ್ಥಳದಲ್ಲಿ ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ ಕೊಡ್ತಿದ್ದ ಅನಾಮಿಕನಿಗೆ ಶನಿವಾರದಂದೇ ಶನಿ ಹೆಗಲೇರಿದ್ದ. ಬೇಟೆಯಾಡಲು ಬಂದವ್ರೇ ಬೇಟೆಯಾಗಿ ಹೋದ್ರು ಅನ್ನೋ ಹಾಗೆ ದೂರುದಾರನಾಗಿ ಬಂದವನೇ ಆರೋಪಿಯಾಗಿದ್ದಾನೆ. ಅಸಲಿ ಆಟ ಈಗ ಶುರು ಅಂತ ಮಾಸ್ಕ್ ಮ್ಯಾನ್ ಮುಖವಾಡ ಕಳಚಿದ ಎಸ್ಐಟಿ ತನಿಖೆ ಚುರುಕುಗೊಳಿಸಿದೆ.
/filters:format(webp)/newsfirstlive-kannada/media/media_files/2025/08/23/mask-man-dharamasthala-011-2025-08-23-13-10-46.jpg)
ಒಂದೇ ಒಂದೇ ಬುರುಡೆ ತಂದು ನೇತ್ರಾವತಿ ತೀರದಲ್ಲಿ ಇಂಗುಗುಂಡಿ ಕಾಮಗಾರಿ ನಡೆಸಿದ್ದ ಅನಾಮಿಕನ ಅಸಲಿಯತ್ತು ಎಸ್ಐಟಿ ಮುಂದೆ ಬಯಲಾಗಿದೆ. ಹೂತಿಟ್ಟಿರೋ ನೂರಾರು ಶವಗಳನ್ನ ತೋರಿಸ್ತೀನಿ ಅಂತ ಬಂದವ್ನು, ಸದ್ಯ ಅವನೇ ಲಾಕ್ ಆಗಿದ್ದಾನೆ. ಸುದೀರ್ಘ ವಿಚಾರಣೆ ಬಳಿಕ ಮಾಸ್ಕ್ ಮ್ಯಾನ್​ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಶವಗಳನ್ನು ಹೂತಿಟ್ಟ ಆರೋಪ ಪ್ರಕರಣದಲ್ಲಿ ಅನಾಮಿಕ ತೋರಿಸಿದ್ದ 2 ಕಡೆಗಳಲ್ಲಿ ಬಿಟ್ಟರೆ, ಬೇರೆಲ್ಲೂ ಏನೂ ಸಿಕ್ಕಿರ್ಲಿಲ್ಲ. ಶೋಧ ಕಾರ್ಯದ ಬಳಿಕ ಅನಾಮಿಕ ದೂರುದಾರನ ಜನ್ಮಜಲಾಡಿದ ಎಸ್ಐಟಿ ಸದ್ಯ ಆತನನ್ನೇ ಬಂಧಿಸಿದೆ.
/filters:format(webp)/newsfirstlive-kannada/media/media_files/2025/08/15/dharmasthala-case5-2025-08-15-18-23-33.jpg)
ತಾನೇ ಮಣ್ಣು ಅಗೆದು ಬುರುಡೆ ತಂದಿದ್ದೀನಿ ಅಂದಿದ್ದ ಅನಾಮಿಕ, ಜುಲೈ 11ರಂದು ಕೋರ್ಟ್​​ನಲ್ಲಿ 164 ಹೇಳಿಕೆ ಸಹ ದಾಖಲು ಮಾಡಿದ್ದ. ಇದೇ ಆಧಾರದಲ್ಲಿ ಎಸ್ಐಟಿ ಅಧಿಕಾರಿಗಳು ಬುರುಡೆಯನ್ನ ಫಾರೆನ್ಸಿಕ್ ಟೆಸ್ಟ್ಗೆ ಕಳುಹಿಸಿದ್ರು. ನಿರಂತರ ತನಿಖೆ ವೇಳೆ ಬುರುಡೆ ಬಗ್ಗೆ ಅನಾಮಿಕ ಗೊಂದಲಕಾರಿ ಹೇಳಿಕೆ ನೀಡ್ತಿರೋದು ಅನುಮಾನಕ್ಕೆ ಕಾರಣವಾಗಿತ್ತು. ಎಲ್ಲಿಂದ ಬುರುಡೆ ತಂದ ಅನ್ನೋ ಬಗ್ಗೆಯೂ ಅನಾಮಿಕ ಬಾಯ್ಬಿಟ್ಟಿರಲಿಲ್ಲ. ಹೀಗಾಗಿ ಡಿಜಿಪಿ ಮೊಹಾಂತಿ ನಿರ್ದೇಶನದಂತೆ ಅನಾಮಿಕನ ವಿಚಾರಣೆ ನಡೆಸಲಾಗಿತ್ತು. ಈ ವೇಳೆ SIT ಮುಂದೆ ಬುರುಡೆ ಯಾರೋ ತಂದುಕೊಟ್ಟಿದ್ದಾಗಿ ಅನಾಮಿಕ ಹೇಳಿದ್ದ. ಈ ಹಿನ್ನೆಲೆ ಸುಳ್ಳು ಸಾಕ್ಷ್ಯ, ಸುಳ್ಳು ಹೇಳಿಕೆ ಆಧಾರದಲ್ಲಿ ಮಾಸ್ಕ್ಮ್ಯಾನ್ ಅನಾಮಿಕನ ಅರೆಸ್ಟ್ ಮಾಡಲಾಗಿದೆ.
/filters:format(webp)/newsfirstlive-kannada/media/media_files/2025/08/23/dharmasthala3-2025-08-23-16-47-00.jpg)
ಅನಾಮಿಕ ದೂರುದಾರನ ಅಸಲಿ ಹೆಸರಿನ ಅನಾವರಣ!
ಎಸ್ಐಟಿಯಿಂದ ಬಂಧನಕ್ಕೊಳಗಾದ ಅನಾಮಿಕ ದೂರುದಾರನ ಹೆಸರು ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಅನ್ನೋದು ಬಯಲಾಗಿದೆ. ಸದ್ಯ ಈ ಚೆನ್ನನನ್ನ 10 ದಿನ ಕಸ್ಟಡಿಗೆ ಪಡೆದಿರೋ SIT ವಿಚಾರಣೆ ಆರಂಭಿಸಿದೆ. ರಿವರ್ಸ್ ತನಿಖೆ ಮಾಡಲು ತಯಾರಿ ನಡೆಸಿದೆ. ಚೆನ್ನನ ಸೋದರ ತಾನಾಸೆ ಎಂಬುವನನ್ನ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಚೆನ್ನನ್ನ ಮುಂದೆ ಬಿಟ್ಟು ಹಿಂದೆ ಷಡ್ಯಂತ್ರ ನಡೆಸಿದ ಕಾಣದ ಕೈಗಳ್ಯಾವುವು ಅನ್ನೋ ಸತ್ಯ ಸದ್ಯಕ್ಕೆ ಆ ಅಣ್ಣಪ್ಪ ಸ್ವಾಮಿಯೇ ಬಲ್ಲವನಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us