/newsfirstlive-kannada/media/media_files/2025/10/31/priyank_kharge-2-2025-10-31-08-57-23.jpg)
ರಾಜ್ಯದಲ್ಲಿ ಸರ್ಕಾರ ವರ್ಸಸ್​ ಆರ್​​​ಎಸ್​ಎಸ್​ ಸಂಘರ್ಷ ತಾರಕಕ್ಕೇರಿದೆ. ಸಂಘದ ಜೊತೆಗಿನ ಸಮರದಲ್ಲಿ ಸರ್ಕಾರ ಪದೇ ಪದೇ ಮುಜುಗರಕ್ಕೀಡಾಗ್ತಿದೆ. ಹೈಕೋರ್ಟ್ ಬೆನ್ನಲ್ಲೇ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಮತ್ತೊಂದೆಡೆ ಚಿತ್ತಾಪುರದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಕಾಲ ಕೂಡಿ ಬರದಾಗಿದೆ. ಇದೇ ವಿಚಾರಕ್ಕೆ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರ ನಿಲ್ಲದಾಗಿದೆ.
ರಾಜ್ಯದಲ್ಲಿ ಆರ್​ಎಸ್​​ಎಸ್​ಗೆ ಅಂಕುಶ ಹಾಕಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಮೊನ್ನೆ ಹೈಕೋರ್ಟ್​​ ತಡೆಯಾಜ್ಞೆ ನೀಡಿತ್ತು. ಇದು ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟು ಮಾಡಿತ್ತು. ಇದೀಗ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲೂ ರಾಜ್ಯ ಸರ್ಕಾರದ ಮತ್ತೊಂದು ಆದೇಶಕ್ಕೆ ಹಿನ್ನಡೆಯಾಗಿದ್ದು, ಗಣವೇಷ ಧರಿಸಿದ್ದ ರೋಡಲಬಂಡಾ ಪಿಡಿಓ ಪ್ರವೀಣ್​ ಕುಮಾರ್ ಅಮಾನತ್ತಿಗೆ ಕೆಎಟಿ ತಡೆ ನೀಡಿದೆ. ಮತ್ತೊಂದೆಡೆ ಆರ್​ಎಸ್​ಎಸ್​ ಪಥಸಂಚಲನ ಮಾಡಲು ಅವಕಾಶ ಸಿಗದಾಗಿದೆ.
/filters:format(webp)/newsfirstlive-kannada/media/media_files/2025/10/14/rss-2025-10-14-07-11-51.jpg)
ನ.5ರಂದು ಮತ್ತೊಮ್ಮೆ ಶಾಂತಿ ಸಭೆಗೆ ಹೈಕೋರ್ಟ್ ನಿರ್ದೇಶನ
ಸಚಿವ ಪ್ರಿಯಾಂಕ್​ ಖರ್ಗೆ ಕ್ಷೇತ್ರದಲ್ಲಿ ಆರ್​ಎಸ್​​ಎಸ್​ ಪಥ ಸಂಚಲನಕ್ಕೆ ಸಜ್ಜಾಗಿತ್ತು. ನವೆಂಬರ್​ 2ರಂದು ಪಥಸಂಚಲನಕ್ಕೆ ಆರ್​ಎಸ್​​ಎಸ್​ ಪ್ಲಾನ್​ ಮಾಡಿತ್ತು. ಇದಕ್ಕೆ ಟಕ್ಕರ್​ ಎಂಬಂತೆ, ದಲಿತ ಸಂಘಟನೆಗಳು ಕೂಡ ನಮ್ಗೂ ಅವತ್ತೇ ಅವಕಾಶ ಬೇಕೆಂದು ಪಟ್ಟು ಹಿಡಿದ್ವು. ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಈ ಜಟಾಪಟಿ ಕೋರ್ಟ್​​ನ ಕಟಕಟೆಯಲ್ಲಿದ್ದು, ಶಾಂತಿ ಸಭೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್​​ ಸೂಚಿಸಿತ್ತು. ಆದ್ರೆ ಅ.28ರಂದು ನಡೆದ ಶಾಂತಿ ಸಭೆ ವಿಫಲವಾದ ಕಾರಣ, ಕಲಬುರಗಿ ಹೈಕೋರ್ಟ್​ ಪೀಠ ಮತ್ತೊಮ್ಮೆ ಶಾಂತಿ ಸಭೆಗೆ ಸೂಚಿಸಿ, ವಿಚಾರಣೆ ಮುಂದೂಡಿದೆ. ಇದರಿಂದ ನವೆಂಬರ್​ 2ಕ್ಕೆ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ ಆರ್​​ಎಸ್​ಎಸ್​ಗೆ ಮತ್ತೆ ಬ್ರೇಕ್​ ಬಿದ್ದಿದೆ.
ಪ್ರಿಯಾಂಕ್ ಖರ್ಗೆ ಹೀರೋ ಆಗೋಕೆ ಪ್ರಯತ್ನ- ಆರಗ ಆಕ್ರೋಶ
ಆರ್‌ಎಸ್ಎಸ್ ವಿಚಾರವಾಗಿ ಕಾನೂನು ಹೋರಾಟ ನಡೀತಿದ್ರೆ, ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಧರ್ಮಸ್ಥಳ ಪ್ರಕರಣದಂತೆ ಇದೊಂದು ಸರ್ಕಾರಿ ಪ್ರಾಯೋಜಿತ ಪ್ರಕರಣ, ಡಿಸಿಗೆ ಶಾಂತಿ ಸಭೆ ಮಾಡೋದಕ್ಕೆ ಆಗಲ್ಲ ಅಂದ್ರೆ ಹೇಗೆ ಅಂತ ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ. ಇತ್ತ ಪ್ರಿಯಾಂಕ್ ಖರ್ಗೆ ತಾನು ಒಬ್ಬ ಹೀರೋ ಆಗೋಕೆ ಇಷ್ಟೆಲ್ಲಾ ಪ್ರಯತ್ನ ಮಾಡ್ತಿದ್ದಾರೆ ಅಂತ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಕೋರ್ಟ್ ನಿರ್ದೇಶನ ತಪ್ಪಾಗಿ ಅರ್ಥೈಸಿಕೊಳ್ತಿದ್ದಾರೆ- ಪ್ರಿಯಾಂಕ್ ಕಿಡಿ
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ ಪೀಠದ ಮಧ್ಯಂತರ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ ಅಂತ ಬಿಜೆಪಿ ಬಡಬಡಾಯಿಸುತ್ತಿದೆ. ಆದ್ರೆ, ಹೈಕೋರ್ಟ್ ನೀಡಿರೋ ನಿರ್ದೇಶನವನ್ನ ಬಿಜೆಪಿ ನಾಯಕರು ತಪ್ಪಾಗಿ ಅರ್ಥೈಸಿಕೊಳ್ತಿದ್ದಾರೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.
ಇದನ್ನೂ ಓದಿ: ಸಂಭ್ರಮದಲ್ಲಿ ಶೋಕ.. ಇವತ್ತೇ ಮದುವೆ ಆಗಬೇಕಿದ್ದ ವಧು ಹೃದಯಾಘಾತಕ್ಕೆ ಬಲಿ
/filters:format(webp)/newsfirstlive-kannada/media/post_attachments/wp-content/uploads/2025/07/PRIYANK-KHARGE.jpg)
‘ಬಿಜೆಪಿಗರಿಂದ ತಪ್ಪು ಅರ್ಥ’
ಕೋರ್ಟ್ ನಿರ್ದೇಶನವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬಿಜೆಪಿ ನಾಯಕರಿಗೆ ಅಭ್ಯಾಸವಾಗಿಬಿಟ್ಟಿದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಲಬುರಗಿ ಪೀಠವು ಮಧ್ಯಂತರ ಆದೇಶವನ್ನು ಮಾತ್ರ ನೀಡಿದೆ. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಪಿಡಿಒ ಅವರ ಅಮಾನತು ಆದೇಶವನ್ನು ರದ್ದುಗೊಳಿಸುವ ಅಥವಾ ಅಮಾನತು ಮಾಡುವ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಅಮಾನತು ಆದೇಶವನ್ನು ತಡೆಹಿಡಿಯಲಾಗುವುದು. ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವ ಸೂಚನೆಯೊಂದಿಗೆ ನವೆಂಬರ್ 14, 2025 ರಂದು ಅಂತಿಮ ವಿಚಾರಣೆಗೆ ಪಟ್ಟಿ ಮಾಡಲು ನ್ಯಾಯಮಂಡಳಿ ನಿರ್ದೇಶಿಸಿದೆ. ನಾವು ಹೇಳಿಕೆ ಸಲ್ಲಿಸಲಿದ್ದು, ಈ ವಿಚಾರವನ್ನು ಎದುರಿಸಲಿದ್ದೇವೆ.
-ಪ್ರಿಯಾಂಕ್ ಖರ್ಗೆ, ಸಚಿವ
ಸಚಿವ ಪ್ರಿಯಾಂಕ್​​ ಖರ್ಗೆ ಕ್ಷೇತ್ರದಲ್ಲಿ ಆರ್​ಎಸ್​ಎಸ್​ ಪಥಸಂಚಲನ ವಿವಾದ ಮತ್ತಷ್ಟು ಜಟಿಲವಾಗಿದ್ದು, ನವೆಂಬರ್​ 5ರ ಶಾಂತಿ ಸಭೆಯಲ್ಲಾದ್ರೂ ಸಮಸ್ಯೆ ಬಗೆಹರಿಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us