/newsfirstlive-kannada/media/media_files/2025/08/18/bng_mother_doughter-1-2025-08-18-22-17-53.jpg)
ಬೆಂಗಳೂರು: ವಿಲ್ಸನ್ ಗಾರ್ಡನ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೇ ಬಾಲಕಿ ಕಯಲ್ ಉಸಿರು ಚೆಲ್ಲಿದ್ದಳು. ಇದರ ಬೆನ್ನಲ್ಲೇ ಬಾಲಕಿಯ ತಾಯಿ ಕೂಡ ಕೊನೆಯುಸಿರೆಳೆದಿದ್ದಾಳೆ. ಈ ಘಟನೆಯಲ್ಲಿ ಮೃತರ ಸಂಖ್ಯೆ ಒಟ್ಟು ಮೂರಕ್ಕೆ ಏರಿಕೆ ಆಗಿದೆ.
ಸಿಲಿಂಡರ್ ಬ್ಲಾಸ್ಟ್ನಲ್ಲಿ ಗಾಯಗೊಂಡಿದ್ದ ಬಾಲಕಿ ಕಯಲ್ (8) ಉಸಿರು ಚೆಲ್ಲಿದ ಬೆನ್ನಲ್ಲೇ ಬಾಲಕಿಯ ತಾಯಿ ಕಾವೇರಿ ಕೂಡ ಜೀವ ಬಿಟ್ಟಿದ್ದಾರೆ. ಒಂದೇ ದಿನದಲ್ಲಿ ತಾಯಿ, ಮಗಳು ಉಸಿರು ಚೆಲ್ಲಿರುವುದು ಕುಟುಂಬಸ್ಥರಿಗೆ ತೀವ್ರ ದುಃಖ ತರಿಸಿದೆ. ಮಗಳು ಜೀವ ಬಿಟ್ಟ ಕೆಲವೇ ನಿಮಿಷಗಳಲ್ಲೇ ತಾಯಿ ಕಣ್ಮುಚಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಆನೆ ಮಾವುತ, ಯಮುನಾ ಕೇಸ್.. SITಗೆ ದೂರು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಗಣೇಶ್
ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 15 ರಂದು ವಿಲ್ಸನ್ ಗಾರ್ಡನ್‌ನ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ತಾಯಿ ಕಾವೇರಿ, ಮಗಳು ಕಯಲ್ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಇಬ್ಬರು ಜೀವ ಬಿಟ್ಟಿದ್ದಾರೆ.
ವಿಲ್ಸನ್ ಗಾರ್ಡನ್‌ನ ಮನೆಯಲ್ಲಿ ಸಿಲಿಂಡರ್ ಸ್ಫೋಟದಲ್ಲಿ ಬಾಲಕ ಮೊದಲು ಜೀವ ಕಳೆದುಕೊಂಡಿದ್ದನು. ಇದರ ಜೊತೆಗೆ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ 9 ಜನರಲ್ಲಿ ಈಗ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ದಿನ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಬಾಲಕ ಮುಬಾರಕ್ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು. ಹಾಗೇ ಗಾಯಾಳುಗಳ ಆಸ್ಪತ್ರೆ ಖರ್ಚು ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ