/newsfirstlive-kannada/media/media_files/2025/09/18/hsn_3_babys_1-2025-09-18-19-33-57.jpg)
ಹಾಸನ: ಮಗು ಪಡೆಯುವುದು ಎಂದರೆ ದಂಪತಿಗೆ ಅದೊಂದು ವಜ್ರ ಗಣಿ ಸಿಕ್ಕಂತೆ. ಬದುಕಲ್ಲಿ ಎಷ್ಟೋ ಕಹಿಗಳನ್ನ ನುಂಗಿ ಮತ್ತೆ ದಂಪತಿ ಹೊಸ ಜೀವನ ಆರಂಭಿಸುವುದು ಎಂದರೆ ಅದು ಮಕ್ಕಳಿಂದ. ಏಕೆಂದರೆ ಮನೆಯಲ್ಲಿ ಮಕ್ಕಳು ಬೆಳೆಯುತ್ತಿದ್ರೆ ಅವರ ಜೊತೆ ತಂದೆ, ತಾಯಿ 20, 30 ವರ್ಷ ಕಳೆದಿರುವುದು ಗೊತ್ತೇ ಇರಲ್ಲ. ಅದಕ್ಕೆ ಮನೆಯಲ್ಲಿ ಮಕ್ಕಳು ಇದ್ದರೆ ಚಂದ ಎನ್ನುವುದು. ಇದು ಎಲ್ಲ ಈಗ ಯಾಕೆ ಎನ್ನುವುದು ನಿಮ್ಮ ಪ್ರಶ್ನೆಯಾದರೆ, ಇಲ್ಲೊಬ್ಬ ಮಹಾತಾಯಿ ಒಂದೇ ಬಾರಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಹಾಸನದ ಜಿಲ್ಲಾ ಆಸ್ಪತ್ರೆಗೆ ಹೆರಿಗೆಗೆಂದು ಮೂರು ದಿನಗಳ ಹಿಂದೆ ತುಂಬು ಗರ್ಭಿಣಿಯೊಬ್ಬರು ದಾಖಲಾಗಿದ್ದರು. ಈ ಮಹಿಳೆಯ ಎಲ್ಲ ಚಿಕಿತ್ಸೆ ಆಸ್ಪತ್ರೆಯ ಖ್ಯಾತ ವೈದ್ಯೆ ನ್ಯಾನ್ಸಿ ಅವರು ನೋಡಿಕೊಳ್ಳುತ್ತಿದ್ದರು. ಅದರಂತೆ ಇಂದು ಮಹಿಳೆಗೆ ಹೆರಿಗೆಯಾಗಿದ್ದು ಒಂದೇ ಬಾರಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಿಂದ ದಂಪತಿ ಸೇರಿದಂತೆ ಕುಟುಂಬಸ್ಥರೆಲ್ಲ ಫುಲ್ ಹ್ಯಾಪಿ ಆಗಿದ್ದಾರೆ.
ಇದನ್ನೂ ಓದಿ:ಗಾಣಗ ಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ತಾಯಿ ಜೊತೆ ನಟ ವಿಜಯ್ ಸೂರ್ಯ ಭೇಟಿ
ಇನ್ನು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ಮೂರು ಮಕ್ಕಳು ಆರೋಗ್ಯವಾಗಿದ್ದಾರೆ. ಈ ಮೂವರು ಮಕ್ಕಳ ಪೈಕಿ ಇದರಲ್ಲಿ ಒಂದು ಗಂಡು ಮಗು ಹಾಗೂ ಎರಡು ಹೆಣ್ಣು ಇವೆ. ಕಳೆದ ಮೂರು ದಿನಗಳ ಹಿಂದೆ ದಾಖಲಾಗಿದ್ದ ಮಹಿಳೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ