/newsfirstlive-kannada/media/media_files/2025/09/01/siddaramaiah-droupadi-murmu-2025-09-01-21-53-51.jpg)
ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿಗಳಿಗೆ ಭಾಷೆ ವಿಚಾರವಾಗಿ ತಮಾಷೆ ಮಾಡಿದರು. ಅದಕ್ಕೆ ದ್ರೌಪದಿ ಮರ್ಮು ತಮಾಷೆ ಮೂಲಕವೇ ಸಿದ್ದರಾಮಯ್ಯರಿಗೆ ಉತ್ತರ ನೀಡಿದರು.
ಆಗಿದ್ದೇನು..?
ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಆರಂಭಿಸಿದರು. ಮಾತು ಪ್ರಾರಂಭಿಸುವ ಮುನ್ನ ರಾಷ್ಟ್ರಪತಿಗಳಿಗೆ ಸಿಎಂ ಹಾಸ್ಯ ಚಟಾಕಿ ಹಾರಿಸಿದರು. ‘You know Kannada’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ರಾಷ್ಟ್ರಪತಿ ಕೂತಲ್ಲೇ ನಕ್ಕರು. ಆಗ ಸಿದ್ದರಾಮಯ್ಯ ‘ಐ ಸ್ಪೀಕ್ ಕನ್ನಡ’ ಎನ್ನುತ್ತ ಮಾತು ಮುಂದುವರಿಸಿದರು.
ಟಾಂಗ್ ಕೊಟ್ಟ ರಾಷ್ಟ್ರಪತಿ
ರಾಷ್ಟ್ರಪತಿ ಭಾಷಣ ಮಾಡುವ ವೇಳೆ ಸಿದ್ದರಾಮಯ್ಯರ ಪ್ರಶ್ನೆಗೆ ಉತ್ತರ ನೀಡಿದರು. ಗೌರವಾನ್ವಿತ ಮುಖ್ಯಮಂತ್ರಿಯವರಿಗೆ ನಾನು ಹೇಳಲು ಬಯಸುತ್ತೇನೆ, ಕನ್ನಡ ನನ್ನ ಮಾತೃಭಾಷೆಯಲ್ಲದಿದ್ದರೂ, ನನ್ನ ದೇಶದ ಎಲ್ಲಾ ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ತುಂಬಾ ಗೌರವಿಸುತ್ತೇನೆ. ಪ್ರತಿಯೊಂದು ಭಾಷೆ ಬಗ್ಗೆಯೂ ಅಪಾರ ಗೌರವವಿದೆ.
ಪ್ರತಿಯೊಬ್ಬರೂ ತಮ್ಮ ಭಾಷೆಯನ್ನು ಜೀವಂತವಾಗಿಡಲು, ಅವರ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ನಾನು ಬಯಸುತ್ತೇನೆ. ಖಂಡಿತವಾಗಿಯೂ ನಾನು ಕನ್ನಡವನ್ನು ಸ್ವಲ್ಪ ಸ್ವಲ್ಪವಾಗಿ ಕಲಿಯಲು ಪ್ರಯತ್ನಿಸುತ್ತೇನೆ ಅನ್ನೋ ಮೂಲಕ ಟಾಂಗ್ ನೀಡಿದರು.
ಇದನ್ನೂ ಓದಿ:‘ಮರಾಠಾ ಮೀಸಲಾತಿ’ ಕಿಚ್ಚಿಗೆ ಇಡೀ ಮುಂಬೈ ಉದ್ವಿಗ್ನ; ಹೈಕೋರ್ಟ್ ಬೇಸರ, ಏನಿದು ಹೋರಾಟ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ