ಸಮಾಜಮುಖಿ ಕೆಲಸದಲ್ಲಿ ಬ್ಯುಸಿಯಾದ ದರ್ಶನ್ ಪತ್ನಿ ವಿಜಯಲಕ್ಷ್ಮೀ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇವತ್ತು ದಸರಾ ಆನೆಗಳ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿದ್ದಾರೆ. ಮೈಸೂರಿನಲ್ಲಿ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿ, ಭರ್ಜರಿ ಊಟ ಹಾಕಿಸಿದ್ದಾರೆ

author-image
Ganesh Kerekuli
Darshan wife vijayalaxmi
Advertisment

ಮೈಸೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇವತ್ತು ದಸರಾ ಆನೆಗಳ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿದ್ದಾರೆ.

ಮೈಸೂರಿನಲ್ಲಿ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿ, ಭರ್ಜರಿ ಊಟ ಹಾಕಿಸಿದ್ದಾರೆ. ದಸರಾ ಆನೆಗಳನ್ನು ನೋಡಿ ವಿಜಯಲಕ್ಷ್ಮೀ ಅವರು ಸಂಭ್ರಮಿಸಿದ್ದಾರೆ. ಇನ್ನು, ವಿಜಯಲಕ್ಷ್ಮೀ ಅವರಿಗೆ ದರ್ಶನ್ ಆಪ್ತ ಧನ್ವೀರ್​ ಸಾಥ್ ನೀಡಿದ್ದಾರೆ. ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಮೊದಲು ದರ್ಶನ್​ ಅವರು ಇಂಥ ಸೇವೆಗಳನ್ನ ಮಾಡಿಕೊಂಡು ಬರುತ್ತಿದ್ದರು. ಇದೀಗ ಪತಿಯ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮೀ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ರಮ್ಯಾ ಬಳಿಕ ವಿಜಯಲಕ್ಷ್ಮೀಗೆ ಕೆಟ್ಟದಾಗಿ ನಿಂದನೆ.. ಆಗಿದ್ದೇನು?

ಸೆಪ್ಟೆಂಬರ್ 22 ರಂದು ವಿಶ್ವವಿಖ್ಯಾತ ದಸರಾ ಉದ್ಘಾಟನೆ ಆಗಲಿದೆ. ಅಕ್ಟೋಬರ್ 2 ರಂದು ವಿಜಯದಶಮಿ ಆಚರಣೆ ನಡೆಯಲಿದೆ. ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಆನೆಗಳು. ಅದರಲ್ಲೂ ಜಂಬು ಸವಾರಿ ದಿನ ಆನೆಗಳು ಮತ್ತಷ್ಟು ಆಕರ್ಷಣೆಯಾಗಿದೆ. ಪ್ರತಿ ವರ್ಷ ಒಂಬತ್ತು ದಿನಗಳ ನಂತರ 10ನೇ ದಿನ ವಿಜಯದಶಮಿ ಆಚರಿಸಲಾಗುತ್ತಿತ್ತು. ಈ ವರ್ಷ ಪಂಚಾಂಗದ ಪ್ರಕಾರ ಪಂಚಮಿ ತಿಥಿ ಎರಡು ದಿನಗಳ ಕಾಲ ಇರುವುದರಿಂದ ದಸರಾ ಆಚರಣೆ ಹನ್ನೊಂದು ದಿನಗಳವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ:ನಾನು ಅರ್ಬನ್ ನಕ್ಸಲ್, ಬಿಜೆಪಿಯವರು ನಗರ ಡಕಾಯಿತರು ಎಂದ ವಕೀಲ ಸಿ.ಎಸ್.ದ್ವಾರಕನಾಥ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Vijayalakshmi
Advertisment