/newsfirstlive-kannada/media/media_files/2026/01/10/nanjanagudu-divya-2026-01-10-10-12-31.jpg)
ಮೈಸೂರು: ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮ*ತ್ಯೆ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೆಲವು ದಿನಗಳ ಹಿಂದೆ ನಂಜನಗೂಡಿನಲ್ಲಿ ನಡೆದಿದ್ದ ಪ್ರಕರಣ ಇದಾಗಿದೆ.
ಮೃತ ದಿವ್ಯಾ ಹಾಗೂ ಆದಿತ್ಯ ಪರಸ್ಪರ ಪ್ರೀತಿಸುತ್ತಿದ್ದರು. ವಿದ್ಯಾಭ್ಯಾಸ ಮುಗಿದ ಮೇಲೆ ಮದುವೆ ಆಗುವುದಾಗಿ ಆದಿತ್ಯ ಹೇಳಿದ್ದ. ಆದಿತ್ಯ ಜೊತೆ ಯುವತಿಯ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೀಗ ಪ್ರಕರಣದ ಆರೋಪಿ ಆದಿತ್ಯ ಮಹತ್ವದ ಹೇಳಿಕೆ ನೀಡಿದ್ದಾನೆ.
ಆದಿತ್ಯ ಹೇಳಿದ್ದೇನು..?
ನನ್ನ ಹೆಸರು ಆದಿತ್ಯ. ಮೊನ್ನೆ ನೀಲಕಂಠ ನಗರದ ಗುರುಮೂರ್ತಿರ ಮಗಳು ದಿವ್ಯಾಳ ಸಾವಿನ ಸುದ್ದಿ ಕೇಳಿ ಬಹಳ ಆತಂಕ ಆಗಿದೆ. ನನ್ನ ಮತ್ತು ಅವಳ ಪರಿಚಯ ಹೇಗಾಯ್ತು ಅಂದರೆ ಅವಳ ಅಕ್ಕ ನನಗೆ ಕ್ಲಾಸ್​ಮೇಟ್. ಅಲ್ಲಿಂದ ನಾವಿಬ್ಬರು ಪರಿಚಯ. ನಾವಿಬ್ಬರು ಸುಮಾರು 8 ತಿಂಗಳಿನಿಂದ ಪ್ರೀತಿಸುತ್ತಿದ್ದೇವು.
ಮಧ್ಯಂತರದಲ್ಲಿ ಆಕೆಯ ಅಪ್ಪನಿಗೆ ಈ ವಿಚಾರ ಗೊತ್ತಾಗಿದೆ. ಆಗ ಆಕೆಯ ತಂದೆ ನನಗೆ ಕಾಲ್ ಮಾಡಿ, ಬೇಡ ಮುಂದುವರಿಯಬೇಡಿ ಎಂದು ಎಚ್ಚರಿಸಿದ್ದ. ಆಕೆಗೆ ಇನ್ನೂ ಚಿಕ್ಕ ವಯಸ್ಸು. 18 ವರ್ಷ ತುಂಬಿದ ಬಳಿಕ ಕಾನೂನು ಪ್ರಕಾರ ಮದುವೆ ಆಗೋಣ. ಇಲ್ಲದಿದ್ದರೆ ತಪ್ಪಾಗಲಿದೆ ಅಂದುಕೊಂಡು ಸುಮ್ಮನಿದ್ವಿ.
ಅಷ್ಟರಲ್ಲಿ ಈ ರೀತಿಯ ಸುದ್ದಿ ಬಂದಿದೆ. ಬೆನ್ನಲ್ಲೇ ಆಕೆಯ ತಂದೆ ನನ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗಳಿಗೆ ನಾನು ಕಿರುಕುಳ ಕೊಡ್ತಿದ್ದೆ. ಅದಕ್ಕೆ ಅವರು ಜೀವ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ನಾನು ಅವಳಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ ಅನ್ನೋದಕ್ಕೆ ಹಾಗೂ ಆಕೆಯ ತಂದೆ ಕಿರುಕುಳ ನೀಡಿದ್ದಾನೆ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದೇನೆ. ಅವಳ ತಂದೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡಬೇಕು ಎಂದು ಮನವಿ ಮಾಡ್ತೇನೆ ಎಂದಿದ್ದಾನೆ.
ಇದನ್ನೂ ಓದಿ: ಒಂದು ಇನ್​ಸ್ಟಾ ಪೋಸ್ಟ್​​ಗೆ ಕೊಹ್ಲಿ ಎಷ್ಟು ಕೋಟಿ ಚಾರ್ಜ್ ಮಾಡ್ತಾರೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us