Advertisment

ಅಂಬಾರಿ ಹೊರಲು ಅಭಿಮನ್ಯು ರೆಡಿ.. ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳ ಪರಿಚಯ ಇಲ್ಲಿದೆ..!

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಒಟ್ಟು 14 ಆನೆಗಳು ಭಾಗಿಯಾಗಲಿವೆ. ಈ ಬಾರಿಯೂ ಕ್ಯಾ.ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಕುಮ್ಕಿ ಆನೆಗಳಾಗಿ ಕಾವೇರಿ, ರೂಪ ಕರ್ತವ್ಯ ನಿರ್ವಹಿಸಲಿವೆ.

author-image
Ganesh Kerekuli
Mysore Dasara: ಅಭಿಮನ್ಯು ಕೊಡಗಿನ ಕುವರ.. ಅಂಬಾರಿ ಹೊರವವನ ಸಾಧನೆ ಒಂದೆರಡಲ್ಲ!
Advertisment

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಒಟ್ಟು 14 ಆನೆಗಳು ಭಾಗಿಯಾಗಲಿವೆ. ಈ ಬಾರಿಯೂ ಕ್ಯಾ.ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಕುಮ್ಕಿ ಆನೆಗಳಾಗಿ ಕಾವೇರಿ, ರೂಪ ಕರ್ತವ್ಯ ನಿರ್ವಹಿಸಲಿವೆ. 

Advertisment

ನಿಶಾನೆ ಆನೆಯಾಗಿ ಧನಂಜಯ ಹೆಜ್ಜೆ ಹಾಕಲಿದ್ದಾನೆ. ನೌಫತ್ ಆನೆಯಾಗಿ ಗೋಪಿ ಜೊತೆ ಸಾಗಲಿದ್ದಾನೆ. ಸಾಲನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರಿವ್, ಹೇಮಾವತಿ ಆನೆಗಳು ಜಂಬೂಸವಾರಿಯಲ್ಲಿ ಭಾಗಿಯಾಗಲಿವೆ. 

ಇದನ್ನೂ ಓದಿ:ಮೈಸೂರು ದಸರಾ ಶುರುವಾಗಿದ್ದು ಹೇಗೆ? ಯಾವಾಗ? ಇಂಟ್ರೆಸ್ಟಿಂಗ್‌ ವಿಷಯಗಳು ಇಲ್ಲಿವೆ

dasara elephants (4)

ಅಭಿಮನ್ಯು

ಈ ಬಾರಿಯೂ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯುವಿನ ಹೆಗಲಿಗೆ ಐದನೇ ಬಾರಿಗೆ ಬಂದಿದೆ. ಮತ್ತಿಗೋಡು ಶಿಬಿರದಲ್ಲಿರುವ 59 ವರ್ಷದ ಅಭಿಮನ್ಯು ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು.

Advertisment

ಇದನ್ನೂ ಓದಿ:ಕಾಂತಾರ: ಚಾಪ್ಟರ್ 1 ಗ್ರ್ಯಾಂಡ್ ರಿಲೀಸ್, ವಿಶ್ವದಾದ್ಯಂತ ಅದ್ದೂರಿ ಪ್ರದರ್ಶನ..

 publive-image

ಅಭಿಮನ್ಯು ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿದ್ದು, 2012ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 2015ರಲ್ಲಿ ಕರ್ನಾಟಕ ವಾದ್ಯಗೋಷ್ಠಿ ತಂಡದ ಗಾಡಿಯನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಎಳೆದಿದ್ದು, 2020 ರಿಂದ ಚಿನ್ನದ ಅಂಬಾರಿ ಹೊರುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. 2.74 ಮೀಟರ್ ಎತ್ತರ ಇರುವ ಆನೆ, 4700-5000 ಕೆ.ಜಿ.ಗೂ ಹೆಚ್ಚಿನ ತೂಕವಿದೆ. ನಾಡಿಗೆ ಬಂದಿದ್ದ 30ಕ್ಕೂ ಹೆಚ್ಚು ಹುಲಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.

ಧನಂಜಯ

ದುಬಾರೆ ಆನೆ ಶಿಬಿರದಲ್ಲಿರುವ 45 ವರ್ಷದ ಧನಂಜಯ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಸೆರೆ ಹಿಡಿಯಲಾಯಿತು. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಇದು ಭಾಗವಹಿಸುತ್ತಾ ಬಂದಿದೆ. ಐದು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿದೆ. 2.80 ಮೀಟರ್ ಎತ್ತರ ಇರುವ ಆನೆ, 4000-4200 ಕೆ.ಜಿಗೂ ಹೆಚ್ಚು ತೂಕವಿದೆ. ಸದ್ಯ ಈ ಬಾರಿ ದಸರೆಯ ನಿಶಾನೆ ಆಗಿ ಹೆಜ್ಜೆ ಹಾಕಲಿದ್ದಾನೆ.

Advertisment

dasara elephants (1)

ಭೀಮ

25ರ ಹರೆಯದ ಮತ್ತಿಗೋಡು ಭೀಮ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾನೆ. ಸದ್ಯ 2.85 ಮೀ. ಎತ್ತರ, 3.05 ಮೀ. ಉದ್ದ ಮತ್ತು 3800-4000 ಕೆ.ಜಿ. ತೂಕವಿರುವ ಈ ಆನೆಯ ದಂತ, ದೇಹ ರಚನೆ, ಸಮತಟ್ಟಾಗಿರುವ ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ. ಈ ಹಿಂದೆ 2022 ಹಾಗೂ 2017ರ ದಸರಾದಲ್ಲಿ ಪಾಲ್ಗೊಂಡಿದ್ದ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆ ಹಿಡಿಯಲಾದ ಆನೆ ಇದು. ಸಾಲಾನೆಯಾಗಿ ದಸರಾದಲ್ಲಿ ಹೆಜ್ಜೆ ಹಾಕಲಿದ್ದಾನೆ.

publive-image

ಮಹೇಂದ್ರ

42 ವರ್ಷದ ಮಹೇಂದ್ರ ಕೂಡ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾನೆ. ಮತ್ತೀಗೋಡು ಶಿಬಿರದ ಈ ಆನೆ 2.75 ಮೀ. ಎತ್ತರ, 3.25 ಮೀ. ಉದ್ದ ಮತ್ತು 3800-4000 ಕೆ.ಜಿ. ತೂಕ ಇದ್ದಾನೆ. ಆದ್ದರಿಂದ ಭವಿಷ್ಯದಲ್ಲಿ ‘ಗಜಪಡೆಯ ಕ್ಯಾಪ್ಟನ್’ ಆಗಲಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. 2022ರಲ್ಲಿ ಶ್ರೀರಂಗಪಟ್ಟಣ ದಸರಾದಲ್ಲೂ ಭಾಗಿಯಾಗಿದ್ದ. ಕಾಡಾನೆ ಹಾಗೂ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗಿಯಾದ ಅನುಭವ ಇದೆ.

ಗೋಪಿ

ದುಬಾರೆ ಶಿಬಿರದ ಗೋಪಿಗೆ 43 ವರ್ಷ. 1990ರಲ್ಲಿ ಹಾಸನದ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಯಿತು. 13ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ. 2015ರಲ್ಲಿ ಪಟ್ಟದ ಆನೆಯಾಗಿ ಅರಮಮನೆಯ ಪೂಜಾ ಕೈಂಕರ್ಯದಲ್ಲಿ ಭಾಗಿ. 2.86 ಮೀ.ಎತ್ತರ, 3700-3800 ಕೆ.ಜಿಗೂ ಹೆಚ್ಚು ತೂಕ ಇದೆ. ಈ ಬಾರಿ ನೌಫತ್ ಆನೆಯಾಗಿ ಸಾಗಲಿದ್ದಾನೆ.

Advertisment

dasara elephants (2)

ಕಂಜನ್

ದುಬಾರೆ ಶಿಬಿರದ ಕಂಜನ್‌ಗೆ ಈಗ 26 ವರ್ಷ. ಕಳೆದ ಬಾರಿ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ಇದೀಗ ಮೂರನೇ ಬಾರಿ ಭಾಗಿಯಾಗುತ್ತಿದೆ. 2.62 ಎತ್ತರ, 3700-3900 ಕೆ.ಜಿಗೂ ಹೆಚ್ಚು ತೂಕ ಇದೆ.

ಲಕ್ಷ್ಮೀ

ದೊಡ್ಡ ಹರವೆ ಶಿಬಿರದ ಲಕ್ಷ್ಮೀಗೆ 54 ವರ್ಷ. 2.52 ಎತ್ತರ, 3000-3200 ಕೆ.ಜಿ.ತೂಕ ಇದೆ. ಅನೇಕ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ.

ಪ್ರಶಾಂತ

ದುಬಾರೆ ಶಿಬಿರದ ಪ್ರಶಾಂತ ಆನೆಗೆ 52 ವರ್ಷ. 3 ಮೀ. ಎತ್ತರ, 4000-4200 ಕೆ.ಜಿಗೂ ಹೆಚ್ಚು ತೂಕ ಇದೆ. ಇದು ಕೂಡ ಅನೇಕ ಬಾರಿ ದಸರೆಯಲ್ಲಿ ಭಾಗಿಯಾಗಿದೆ.

Advertisment

dasara elephants (3)

ಸುಗ್ರೀವ

ದುಬಾರೆ ಶಿಬಿರದ ಸುಗ್ರೀವ ಆನೆಗೆ 43 ವರ್ಷ. 2.77 ಮೀ. ಎತ್ತರ, 4000-4100 ಕೆ.ಜಿಗೂ ಹೆಚ್ಚು ತೂಕ ಇದೆ.

ಏಕಲವ್ಯ

ಮತ್ತಿಗೋಡು ಸಾಕಾನೆ ಶಿಬಿರದ ಏಕಲವ್ಯ ದಸರಾ ಮಹೋತ್ಸವದಲ್ಲಿ ಎರಡನೇ  ಬಾರಿಗೆ ಭಾಗಿಯಾಗುತ್ತಿರುವ ಹೊಸ ಆನೆ. ಏಕಲವ್ಯನಿಗೆ 40 ವರ್ಷ. 4,150 ಕೆ.ಜಿ. ತೂಕ, 2.83 ಮೀಟರ್ ಎತ್ತರ, 3.70 ಮೀಟರ್ ಉದ್ದವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

mysore palace MYSORE DASARA JAMBU SAVARI mysore dasara darbar
Advertisment
Advertisment
Advertisment