/newsfirstlive-kannada/media/media_files/2025/09/22/kantara-trailer-2025-09-22-12-50-37.jpg)
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಬಿಡುಗಡೆ ಆಗಿದೆ. ಪ್ರಪಂಚದಾದ್ಯಂತ ಬೆಳಗ್ಗೆಯಿಂದಲೇ ಶೋಗಳು ಆರಂಭವಾಗಿದ್ದು, ಬಹುತೇಕ ಶೋಗಳು ಹೌಸ್​ಫುಲ್ ಆಗಿವೆ.
ಇನ್ನು, ನಿನ್ನೆಯ ದಿನ ಹಲವೆಡೆ ಪೇಯ್ಡ್ ಪ್ರೀಮಿಯರ್ ಶೋ ಆಗಿದ್ದು, ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿದೆ. ಯು/ಎ ಸರ್ಟಿಫಿಕೇಟ್ ಸಿನಿಮ ಇದಾಗಿದ್ದು, 2 ಗಂಟೆ 48 ನಿಮಿಷ 53 ಸೆಕೆಂಡ್​​ಗಳ ಲೆಂಥ್ ಇದೆ. ಸ್ಕ್ರೀನ್​ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ದೇಶಾದ್ಯಂತ 7000 ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಕಾಂತಾರ (Kantara) ಬಿಡುಗಡೆ ಆಗಿದೆ. ವಿದೇಶದಲ್ಲಿನ ಸ್ಕ್ರೀನ್​ಗಳನ್ನು ಲೆಕ್ಕಕ್ಕೆ ಸೇರಿಸಿದ್ರೆ 8000 ಸ್ಕ್ರೀನ್​ಗಳಲ್ಲಿ ಕಾಂತಾರ ಬಿಡುಗಡೆ ಆಗಿದೆ. ವಿಶೇಷ ಅಂದರೆ ಸ್ಪ್ಯಾನಿಷ್ ಭಾಷೆಯಲ್ಲೂ ಕಾಂತಾರ ಬಿಡುಗಡೆ ಆಗಿದ್ದು, ಈ ಸಾಧನೆ ಮಾಡ್ತಿರೋ ಮೊದಲ ಭಾರತೀಯ ಸಿನಿಮಾ ಇದಾಗಿದೆ.
ಮೊದಲ ಕಾಂತಾರ ಚಿತ್ರದ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ‘ಕಾಂತಾರ ಚಾಪ್ಟರ್​-1’ 2023ರ ಆರಂಭದಲ್ಲಿ ಘೋಷಿಸಿತು. ಇದು ಮೊದಲ ಚಿತ್ರದ ಪ್ರೀಕ್ವೆಲ್​ ಆಗಿದೆ. ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶಿಸಿ ನಟಿಸಿದ ಈ ಚಿತ್ರ ಸರಿಸುಮಾರು 125 ಕೋಟಿ ರೂಪಾಯಿ ಬಜೆಟ್​​​ನಲ್ಲಿ ನಿರ್ಮಾಣಗೊಂಡಿದೆ. ಅರವಿಂದ್ ಕಶ್ಯಪ್ ಕ್ಯಾಮರಾ ವರ್ಕ್ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರದ ಮುಂಗಡ ಟಿಕೆಟ್‌ಗಳ ಮಾರಾಟವು 4 ಲಕ್ಷಕ್ಕಿಂತ ಅಧಿಕವಾಗಿದ್ದು, ಸುಮಾರು 11,800 ಪ್ರದರ್ಶನಗಳಿಗೆ 11.46 ಕೋಟಿ ರೂಪಾಯಿ ಆದಾಯ ಗಳಿಸಿದೆ ಎನ್ನಲಾಗಿದೆ. ಬ್ಲಾಕ್ ಸೀಟ್‌ಗಳೊಂದಿಗೆ ಇದರ ಮೊತ್ತವು 18.95 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಕರ್ನಾಟಕದಲ್ಲಿ ಬರೋಬ್ಬರಿ 2,14,933 ಟಿಕೆಟ್‌ಗಳು ಮಾರಾಟವಾಗಿ 1,780 ಪ್ರದರ್ಶನಗಳು ನಿಗದಿಯಾಗಿವೆ. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಇತರ ಭಾಷೆಗಳಲ್ಲಿ ಚಿತ್ರ ಪ್ರದರ್ಶನ ಕಾಣ್ತಿದೆ.
ಇದನ್ನೂ ಓದಿ: ಕಾಂತಾರ ಸಿನಿಮಾಗೆ ಆಂಧ್ರದಲ್ಲಿ ಬೆದರಿಕೆ..! ಯಾಕೆ?
ಸಿನಿಮಾ ಕದಂಬ ವಂಶದ ಕಾಲಘಟ್ಟದಲ್ಲಿದ್ದು, ಭೂತ ಕೋಲ ಆಚರಣೆಯ ಕಥೆಯನ್ನ ವರ್ಣಿಸುತ್ತದೆ. ಕ್ರಿ.ಶ.300ರಲ್ಲಿ ಕದಂಬ ರಾಜವಂಶದ ಆಳ್ವಿಕೆಯಲ್ಲಿ ನಡೆಯುತ್ತದೆ. ಇದು ಭೂತಕೋಲ ಆಚರಣೆಯ ಮೂಲವನ್ನು ಅನಾವರಣಗೊಳಿಸುತ್ತದೆ. ಮೊದಲಾರ್ಧದಲ್ಲಿ ಹಳ್ಳಿಗನಾಗಿ ಕಾಣಿಸಿಕೊಂಡಿದ್ದ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಯೋಧನಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಶಿವಗಣ, ಕಾರ್ಣಿಕ ಕಲ್ಲು, ಕಾಂತಾರ ಬೆಂಕಿ! ಕ್ಯೂರಿಯಾಸಿಟಿ ಹೆಚ್ಚಿಸಿದ ಟ್ರೈಲರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ