/newsfirstlive-kannada/media/media_files/2025/09/06/mysore-house-2025-09-06-22-34-39.jpg)
ಮೈಸೂರು: ಕುಡಿಯಲು ಹಣ ನೀಡಲಿಲ್ಲ ಎಂದು ಭೂಪನೊಬ್ಬ ಮನೆಗೇ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ಮೈಸೂರಿನ ರಮ್ಮನಹಳ್ಳಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಪ್ರಸಾದ್ (26) ಮನೆಗೇ ಬೆಂಕಿ ಹಚ್ಚಿದ ಕಿಡಿಗೇಡಿ. ತಾಯಿ ಕಲಾವತಿ ರಮ್ಮನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಲಾವತಿ ಅವರ ಪತಿ ಎರಡನೇ ಮದುವೆ ಮಾಡಿಕೊಂಡು ಪ್ರತ್ಯೇಕ ಸಂಸಾರ ನಡೆಸುತ್ತಿದ್ದಾರೆ. ಕಲಾವತಿಗೆ ಇಬ್ಬರು ಮಕ್ಕಳಿದ್ದು, ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಯುವಕನಿಗೆ 1.5 ನಿಮಿಷದಲ್ಲಿ 26 ಬಾರಿ ಕಪಾಳಮೋಕ್ಷ ಮಾಡಿದ ಯುವತಿ.. VIDEO
ಎರಡನೇ ಮಗ ಶಿವಪ್ರಸಾದ್ ಕುಡಿತದ ಚಟಕ್ಕೆ ಬಿದ್ದಿದ್ದಾನೆ. ಅಂತೆಯೇ ಆಗಾಗ ತಾಯಿಗೆ ಕಿರುಕುಳ ನೀಡಿ ಹಣ ಕಿತ್ತುಕೊಂಡು ಹೋಗುತ್ತಿದ್ದ. ಎರಡು ದಿನಗಳ ಹಿಂದೆ ಶಿವಪ್ರಸಾಸ್ ಕುಡಿಯಲು ಹಣ ಕೇಳಿದ್ದ. ಕಲಾವತಿಯವರು ಹಣ ನೀಡುವುದಿಲ್ಲವೆಂದು ನಿರಾಕರಿಸಿದ್ದರು. ಇದರಿಂದ ಜಗಳ ತೆಗೆದ ಶಿವಪ್ರಸಾದ್ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ.
ಮೊದಲು ಮನೆಯಿಂದ ಹೊರಬಂದು ತೆಂಗಿನಗರಿಗೆ ಬೆಂಕಿ ಹಚ್ಚಿದ್ದ. ಕೆಲ ಸಮಯದಲ್ಲಿ ಪೆಟ್ರೋಲ್ ಸುರಿದು ಬೆಂಕಿ ವ್ಯಾಪಿಸುವಂತೆ ಮಾಡಿ ನಾಪತ್ತೆಯಾಗಿದ್ದ. ನೆರೆಹೊರೆಯವರು ಕಲಾವತಿ ಅವರನ್ನ ಬಚಾವ್ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆರೋಪಿ ಪೊಲೀಸ್ ಅತಿಥಿ ಆಗಿದ್ದಾನೆ. ಎನ್.ಆರ್.ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ:ಘೋರ ದುರಂತ.. ರೋಪ್ವೇ ಕುಸಿದು ಬಿದ್ದು 6 ಮಂದಿ ದುರಂತ ಅಂತ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ