ಆಂಟಿ ಜೊತೆ ಪತಿ ಲವ್ವಿಡವ್ವಿ, ನೊಂದ ಪತ್ನಿ ದುರಂತ ಅಂತ್ಯ; ಅಮ್ಮನ ಕಳೆದುಕೊಂಡು ಮಕ್ಕಳು ತಬ್ಬಲಿ

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ಗೃಹಿಣಿ ಒಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಪಿರಿಯಾಪಟ್ಟಣ ಮೂಲದ ದೀಪಾ (30) ಮೃತ ಗೃಹಿಣಿ.

author-image
Ganesh Kerekuli
Piriyapattana women
Advertisment

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ಗೃಹಿಣಿ ಒಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಪಿರಿಯಾಪಟ್ಟಣ ಮೂಲದ ದೀಪಾ (30) ಮೃತ ಗೃಹಿಣಿ. 

ಪೋಷಕರಿಂದ ಗಂಡನ ಮನೆಯವರ ವಿರುದ್ಧ ಆರೋಪ

ದೀಪಾ ಹೆತ್ತವರು ಆಕೆಯ ಗಂಡನ ಮನೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತಿ ಉದಯ್ ಮತ್ತು ತಾಯಿ ಮೇಲೆ ಕೊ*ಲೆ ಆರೋಪ ಮಾಡಿದ್ದಾರೆ. 12 ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಮಗಳಿಗೆ ಉದಯ್ ಜೊತೆ ಮದ್ವೆ ಮಾಡಿಕೊಟ್ಟಿದ್ವಿ. ಜೋಡಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದರು. ಸಂಸಾರ ಸುಃಖವಾಗಿತ್ತು ಅನ್ನುವಾಗಲೇ ದುರಂತ ನಡೆದುಬಿಟ್ಟಿದೆ ಎಂದು ಆರೋಪಿಸಿದ್ದಾರೆ. 

Piriyapattana women (2)

ಆರೋಪ ಏನು..? 

ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. 12 ವರ್ಷಗಳ ಹಿಂದೆ ಜಮೀನು ಮಾರಿ ಮಗಳ ಮದುವೆ ಮಾಡಿಕೊಟ್ಟಿದ್ದೇವು. ಭರ್ಜರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಇತ್ತೀಚೆಗೆ ಉದಯ್​​ಗೆ ಬ್ಯೂಟಿ ಪಾರ್ಲರ್ ಅಂಟಿ ಜೊತೆ ಅಕ್ರಮ ಸಂಬಂಧ ಇತ್ತು. ಇದೇ ವಿಚಾರ ವೈಮನಸ್ಸಿಗೆ ಕಾರಣವಾಯ್ತು. 

ಇದನ್ನೂ ಓದಿ: ದೆಹಲಿಯಂತೆ ಕರ್ನಾಟಕದಲ್ಲೂ ಬೀದಿನಾಯಿ ಹಿಡಿದು ಶೆಲ್ಟರ್ ಹೋಮ್ ಗೆ ಹಾಕಲು ಶಾಸಕರ ಒತ್ತಾಯ

Piriyapattana women (1)

ಈ ಅಕ್ರಮ ಸಂಬಂಧ ಹಿರಿಯರ ಗಮನಕ್ಕೂ ಬಂದಿತ್ತು. ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಮಾತುಕತೆ ನಡೆದು, ಆಂಟಿಗೆ ಕಟ್ಟಿದ್ದ ತಾಳಿಯನ್ನು ತೆಗೆಸಲಾಗಿತ್ತು. ಇಷ್ಟಾದರೂ ಉದಯ್ ಮತ್ತು ಅಂಟಿ ನಡುವೆ ಹೆಚ್ಚು ಒಡನಾಟ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ದೀಪ ಮತ್ತು ಉದಯ್ ನಡುವೆ ಗಲಾಟೆ ಆಗಿದೆ. ಆಗಸ್ಟ್ 6 ರಂದು ದೊಣ್ಣೆಯಿಂದ ದೀಪ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲಾದರೂ ಹೋಗು ಎಂದು ಉದಯ್ ಹಲ್ಲೆ ನಡೆಸಿದ್ದಾನೆ. ಇದರಿಂದ ಮನನೊಂದು ಕ್ರಿಮಿನಾಶಕ ಸೇವಿಸಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 9 ರಂದು ಪ್ರಾಣ ಬಿಟ್ಟಿದ್ದಾಳೆ ಎಂದು ಕಣ್ಣೀರು ಇಟ್ಟಿದ್ದಾರೆ. 

ಘಟನೆ ಸಂಬಂಧ ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮೃತ ಗೃಹಿಣಿ ಕುಟುಂಬದ ಆಗ್ರಹಿಸಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. 

ಇದನ್ನೂ ಓದಿ: ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹ*ತ್ಯೆ ರಹಸ್ಯ! ಉತ್ಖನನ ನಡೆಸಿದಾಗ ಸಿಕ್ತು ಅಸ್ಥಿಪಂಜರ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Mysore news
Advertisment