Advertisment

ಹಳೆ ಟೋಪಿಗೆ ಗುಡ್ ಬೈ.. ನೇವಿ ಬ್ಲೂ ಪೀಕ್ ಕ್ಯಾಪ್‌ಗಳಲ್ಲಿ ಮಿಂಚಲಿರೋ ಕಾನ್ಸ್‌ಟೇಬಲ್‌ಗಳು

ಬ್ಯಾಕ್ವೆಂಟ್​ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕ್ಯಾಪ್‌ ಅನಾವರಣಗೊಳಿಸಾಯ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ರಿಂದ ಕಾನ್ಸ್‌ಟೇಬಲ್‌ ಮತ್ತು ಹೆಡ್‌ಕಾನ್ಸ್‌ಟೇಬಲ್​ಗಳಿಗೆ ನೂತನ ಕ್ಯಾಪ್‌ ಧಾರಣೆ ಮಾಡಿದರು.

author-image
Bhimappa
POLICE_HAT_SIDDU
Advertisment

ಪೊಲೀಸ್ ಇಲಾಖೆಯಲ್ಲಿ ಹೊಸ ಇತಿಹಾಸಕ್ಕೆ ನಾಂದಿ. ಕರ್ನಾಟಕ ಪೊಲೀಸ್​ ಕಾನ್ಸ್‌ಟೇಬಲ್‌ಗಳು ಧರಿಸುತ್ತಿದ್ದ ಹ್ಯಾಟ್​ಗಳ ಮಾದರಿ ಬದಲಾಗಿದ್ದು, ಸ್ಲೋಚ್ ಹ್ಯಾಟ್​ ಬದಲಾಗಿ ನೇವಿ ಬ್ಲೂ ಪೀಕ್ ಕ್ಯಾಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ಮಂದೆ ಈ ಹೊಸ ಮಾದರಿಯ ಕ್ಯಾಪ್​ನಲ್ಲಿ ನಮ್ಮ ಪೊಲೀಸರು ಕಾಣಿಸಿಕೊಳ್ಳಲಿದ್ದಾರೆ. 

Advertisment

ಪೊಲೀಸರು ಮಾತ್ರವಲ್ಲ ಅವರ ಮೈಮೇಲೆ ಇರೋ ಯೂನಿಫಾರಂ ಕೂಡ ಕೆಲಸ ಮಾಡುತ್ತೆ. ಪೊಲೀಸರ ಚೀತಾ ಬೈಕ್, ಹೊಯ್ಸಳ ಕಾರು, ಅದರ ಸೈರನ್, ಖಾಕಿ ಡ್ರೆಸ್​, ಲಾಠಿ, ಹ್ಯಾಟ್ ಇದ್ರಲ್ಲಿ ಯಾವ ಒಂದನ್ನ ನೋಡಿದ್ರೂ ಕ್ರಿಮಿನಲ್ಸ್​ಗೆ ನಡುಕ. ಬೆವರಲ್ಲಿ ಮೈ ನೆನೆಯುತ್ತೆ. ಅಂಥ ಪೊಲೀಸ್​ ಡ್ರಸ್​ನಲ್ಲಿ ಮೇಜರ್​ ಬದಲಾವಣೆ ಒಂದಾಗಿದೆ. 

POLICE_HAT

ಪೊಲೀಸರ ಕಿರೀಟ ಬದಲು, ನೀಲಿ ಬಣ್ಣದ ಪೀಕ್ ಕ್ಯಾಪ್​!

ಖಾಕಿ ಸಮವಸ್ತ್ರ ಧರಿಸಿ ರಸ್ತೆಗಿಳಿದ್ರೆ, ಆರೋಪಿಗಳು ಗೂಡು ಸೇರಿಕೊಳ್ತಾರೆ. ಇಂಥಹ ಖಾಕಿ ಡ್ರೆಸ್​ನಲ್ಲಿ 7 ದಶಕಗಳಿಂದ ಕಾನ್ಸ್‌ಟೇಬಲ್‌ಗಳು ಧರಿಸುತ್ತಿದ್ದ ಸ್ಲೌಚ್ ಹ್ಯಾಟ್​ ಇತಿಹಾಸದ ಪುಟ ಸೇರಿದೆ. ಹಲವಾರು ವರ್ಷಗಳಿಂದ ಬಳಕೆಯಲ್ಲಿದ್ದ ಹಳೇ ಖಾಕಿ ಟೋಪಿಗೆ ರಾಜ್ಯ ಸರ್ಕಾರ ಗುಡ್ ಬೈ ಹೇಳಿ. ಪೊಲೀಸರ ಕ್ಯಾಪ್​ ಕಲರ್​ ಬದಲಿಸಿದೆ. ಕರ್ನಾಟಕ ಪೊಲೀಸರ ನೆತ್ತಿ ಮೇಲೆ ನೇವಿ ಬ್ಲೂ ಪೀಕ್ ಕ್ಯಾಪ್‌ ಹೊಸ ಕಿರೀಟದಂತೆ ಕಾಣ್ತಿದೆ. 

ವಿಧಾನಸೌಧದ ಬ್ಯಾಂಕೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕ್ಯಾಪ್‌ ಅನಾವರಣಗೊಳಿಸಾಯ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ರಿಂದ ಕಾನ್ಸ್‌ಟೇಬಲ್‌ ಮತ್ತು ಹೆಡ್‌ಕಾನ್ಸ್‌ಟೇಬಲ್​ಗಳಿಗೆ ನೂತನ ಕ್ಯಾಪ್‌ ಧಾರಣೆ ಮಾಡಲಾಯ್ತು. ಸಾಂಕೇತಿಕವಾಗಿ ಕ್ಯಾಪ್ ವಿತರಣೆ ಮಾಡಿದ ಬಳಿಕ ಸಿಎಂ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಿತ್ರ ಬಿಡುಗಡೆ ಮಾಡಿದ್ರು. 

Advertisment

ಇನ್ನೂ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಡಾಕ್ಟರ್​ ಜಿ.ಪರಮೇಶ್ವರ್, ಹಿಂದೆ ನಾನು ಗೃಹ ಸಚಿವನ್ನಾಗಿದ್ದಾಗ ಬದಲಾವಣೆ ಮಾಡೋಕೆ ಆಗಿಲ್ಲ. ಈಗ ಮಾಡಿದ್ದೇವೆ ಎಂದರು. ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್​, ಎಸ್​ಐಟಿ ಕಾರ್ಯವೈಖರಿಗೆ ಸೆಲ್ಯೂಟ್​​ ಹೇಳಿದರು.

ಇದನ್ನೂ ಓದಿ:ಚೇಸಿಂಗ್​ನಲ್ಲಿ 6,000 ರನ್​ ಪೂರೈಸಿದ ವಿರಾಟ್.. ODI ಅಲ್ಲಿ ಕಿಂಗ್ ಕೊಹ್ಲಿ ಅರ್ಧಶತಕಗಳೆಷ್ಟು..?

POLICE_HAT_1

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಕ್ಯಾಪ್ ಆಯ್ಕೆ ಮಾಡಿದ್ದು ನಾನು. ಪೊಲೀಸ್ ಆರೋಗ್ಯಕ್ಕೆ ಅನುಕೂಲ ಆಗುತ್ತೆ. ನೀವು ಬಹಳ ಚೆನ್ನಾಗಿ ಕಾಣ್ತಾ ಇದ್ದೀರಾ ಎಂದರು. 

Advertisment

ಪ್ರತಿಭಟನೆಗಳು, ಮೆರವಣಿಗೆಗಳು, ಸಾರ್ವಜನಿಕ ಬಂದೋಬಸ್ತ್ ​ಕೆಲಸದ ವೇಳೆ ಸ್ಲೋಚ್​ ಕ್ಯಾಪ್ ಗಾತ್ರ.. ಆಕಾರದಿಂದ ಬಿದ್ದು ಹೋಗುತ್ತಿತ್ತು. ಈ ವಿಚಾರದಲ್ಲಿ ಬಹಳ ಸಮಯದಿಂದ ಕಾನ್ಸ್‌ಟೇಬಲ್‌ಗಳು ದೂರುತ್ತಿದ್ದರು. ಹೀಗಾಗಿ ಹಳೆ ಮಾದರಿಯ ಸ್ಲೌಚ್ ಹ್ಯಾಟ್​ಗಳನ್ನ ರಾಜ್ಯ ಸರ್ಕಾರ ಬದಲಾಯಿಸಿದೆ. ಇನ್ಮುಂದೆ ನೇವಿ ಬ್ಲೂ ಪೀಕ್ ಕ್ಯಾಪ್​ನಲ್ಲೇ ರಾಜ್ಯ ಪೊಲೀಸ್​ ಸಿಬ್ಬಂದಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಟೋಪಿ, ಹೊಸ ಆತ್ಮ ಸ್ಥೈರ್ಯದಿಂದ ಕಾರ್ಯ ನಿರ್ವಹಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore Karnataka Police
Advertisment
Advertisment
Advertisment