/newsfirstlive-kannada/media/media_files/2025/08/04/neha-hiremath-2025-08-04-18-19-04.jpg)
ಹುಬ್ಬಳ್ಳಿ: ನೇಹಾ ಹತ್ಯೆ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಜಾಮೀನು ನೀಡಲು ನಿರಾಕರಣೆ ಮಾಡಿದರು.
ಇದನ್ನೂ ಓದಿ: ಒಳ ಮೀಸಲು ಸಮೀಕ್ಷೆಯ ಬಿಗ್ ಅಪ್ಡೇಟ್ಸ್.. ನ್ಯಾ.ನಾಗಮೋಹನದಾಸ್ ಆಯೋಗದಿಂದ
ಸುದೀರ್ಘವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಈ ತೀರ್ಪು ಕೊಟ್ಟಿದ್ದಾರೆ. ಪೊಲೀಸರು ಬಂಧನ ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ. ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಆಧಾರದಲ್ಲಿ ಫಯಾಜ್ ಪರ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ನ್ಯಾಯಾಧೀಶರು ಫಯಾಜ್ ಅರ್ಜಿ ತಿರಸ್ಕಾರ ಮಾಡಿದೆ.
ಕಳೆದ 1 ವರ್ಷ 4 ತಿಂಗಳಿಂದ ಫಯಾಜ್ ಧಾರವಾಡ ಕಾರಾಗೃಹದಲ್ಲಿದ್ದ. ಹೀಗಾಗಿ ಜಾಮೀನಿನ ಮೇಲೆ ಹೊರ ಬರುತ್ತೇನೆ ಅಂತ ಫಯಾಜ್ ಕಾಯುತ್ತಿದ್ದ. ಆದ್ರೆ, ಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಾಮೀನು ನಿರಾಕರಣೆ ಮಾಡಿದ್ದಾರೆ. ಜಾಮೀನು ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ ನೇಹಾ ಪೋಷಕರಿಗೆ ಸಮಾಧಾನವಾಗಿದೆ.
ಏನಿದು ನೇಹಾ ಹಿರೇಮಠ ಪ್ರಕರಣ..?
23 ವರ್ಷದ ನೇಹಾ ಹಿರೇಮಠಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ಆಗಿದ್ದರು. 2024ರ ಏಪ್ರಿಲ್ 18ರಂದು ಬಿವಿಬಿ ಕಾಲೇಜಿನಲ್ಲಿ ಆಕೆಯ ಸಹಪಾಠಿ ಫಯಾಜ್ ಖೋಂಡುನಾಯಕ್ ಎನ್ನುವ ವಿದ್ಯಾರ್ಥಿ ಚಾಕುವಿನಿಂದ ಇರಿದು ಜೀವ ತೆಗೆದಿದ್ದನು. ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ನೇಹಾ ಹಿರೇಮಠ ಹೊರಗಡೆ ಬರುತ್ತಿದ್ದಂತೆ ಚಾಕು ಇರಿಯಲಾಗಿತ್ತು.
ಘಟನೆ ನಡೆದ ದಿನದಿಂದ ಈವರೆಗೂ ನೇಹಾ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಅವರ ಪೋಷಕರು, ಹಲವು ಸಂಘಗಳು ಹೋರಾಟ ನಡೆಸುತ್ತಿದ್ದರು. ನೇಹಾ ಕುಟುಂಬಸ್ಥರು ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು. ಇದು ಇನ್ಯಾರಿಗೂ ಆಗಬಾರದು ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ