/newsfirstlive-kannada/media/media_files/2025/08/01/bng_darmastala-2025-08-01-15-53-32.jpg)
ಬೆಂಗಳೂರು: ಸದ್ಯ ಧರ್ಮಸ್ಥಳದಲ್ಲಿ ಮಹಿಳೆಯರು, ಯುವತಿಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ಶೋಧಕಾರ್ಯ ಮುಂದುವರೆಸಿದೆ. ಇದೇ ವೇಳೆ ಅಲ್ಲಿನ ಸ್ಥಳವೊಂದರಲ್ಲಿ ಪಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಸಿಕ್ಕಿದ್ದವು. ಸದ್ಯ ಈ ಸಬಂಧ ಪಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಓನರ್ ಸಿದ್ಧಲಕ್ಷ್ಮಮ್ಮ ಮಾತನಾಡಿದ್ದಾರೆ.
ನನ್ನ ಮಗನಾದ ಸುರೇಶ್ 5 ತಿಂಗಳ ಹಿಂದೆ ಜಾಂಡಿಸ್ನಿಂದ ಕೊನೆಯುಸಿರೆಳೆದಿದ್ದರು. ಇಲ್ಲೇ ಇದ್ದರು 29 ವರ್ಷದ ಮಗ, ಆದರೆ ಮನೆಗೆ ಯಾವುದೇ ಸಂಪಾದನೆ ಏನೂ ಕೊಡ್ತಿರಲಿಲ್ಲ. ಎಟಿಂಎಂ ಕಾರ್ಡ್ ನನಗೆ ಬಳಸಲಿಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಮಗ ಸುರೇಶ ಎಟಿಎಂ ಕಾರ್ಡ್ ಬಳಸುತ್ತಿದ್ದನು ಎಂದು ಹೇಳಿದ್ದಾರೆ.
ಮೊನ್ನೆ ಬಂದು ಕೇಳಿದ್ದಾಗ ನಾನು ಮನೆಯಲ್ಲಿ ಇರಲಿಲ್ಲ. ನಿನ್ನೆ ಬಂದು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ವಿಚಾರಣೆ ಮಾಡಿದರು ಅವರು ಕೇಳಿದ್ದಕ್ಕೆ ಹೇಳಿದ್ದೇನೆ. ನನ್ನ ಮಗ ಮುಂಚೆ ಧರ್ಮಸ್ಥಳಕ್ಕೆ ಹೋಗಿ ಬರುತ್ತಿದ್ದ. ಪರ್ಸ್ ಕಳೆದುಕೊಂಡಿದ್ದ ವಿಚಾರ ಏನೂ ಹೇಳಿಲ್ಲ. ಅವನು 3 ವರ್ಷ ಮನೆಯಲ್ಲಿ ಇರಲಿಲ್ಲ. ಕುಡಿತ ಜಾಸ್ತಿ ಆಗಿತ್ತು. ಹೀಗಾಗಿ ಬಿಟ್ಟು ಬಿಟ್ಟಿದ್ದೇವು. ನಾವು ಬರಿ ಪರ್ಸ್ ಕಳೆದುಕೊಂಡಿದ್ದೇವೆ. ಇದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್.. 6ನೇ ಪಾಯಿಂಟ್ನಲ್ಲಿ ಅಸ್ಥಿಪಂಜರ ಪತ್ತೆ..!
ಸುರೇಶ್ ಅವರ ತಂದೆ ಗಂಗಮರಿಯಪ್ಪ ಮಾತನಾಡಿ, ನನ್ನ ಮಗನನ್ನ ಕಳೆದುಕೊಂಡು 5 ತಿಂಗಳು ಆಗಿದೆ. ಖಾಯಿಲೆಯಿದ್ದ ಸುರೇಶ್ ಊರು ಬಿಟ್ಟಿದ್ದನು. 2 ವರ್ಷದಿಂದ ಊರಲ್ಲಿ ಇರಲಿಲ್ಲ. ಒಂದು ವರ್ಷ ಅದೇನು ಮಾಡಿದರೋ ಅಂಗಡಿ ಮುಂದೆ ತಂದು ಹಾಕಿದ್ದರು. ದೊಡ್ಡವರೆಲ್ಲಾ ತಿಳಿ ಹೇಳಿದ ಮೇಲೆ ಮನೆಗೆ ಕರೆದುಕೊಂಡು ಬಂದೆ ಎಂದಿದ್ದಾರೆ.
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡಾ ಕೊಡಿಸಿದ್ದೆ, ಇಲ್ಲೇ ಇದ್ದ. ನಾನು ತರಕಾರಿ ವ್ಯಾಪಾರ ಮಾಡ್ತೀನಿ, ಆತ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸುರೇಶನಿಗೆ 29 ವರ್ಷ, ಮದುವೆಯಾಗಿರಲಿಲ್ಲ. ಧರ್ಮಸ್ಥಳದಲ್ಲಿ ದಾಖಲೆಗಳು ಸಿಕ್ಕಿರುವುದು ಏನು ಎಂಬುದು ನನಗೆ ಗೊತ್ತಿಲ್ಲ. ನಿನ್ನೆ ಪೊಲೀಸರು ಬಂದಿದ್ದರು. ವಿಚಾರಣೆ ನಡೆಸಿದರು ಫೋಟೋ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ