/newsfirstlive-kannada/media/media_files/2025/09/20/nf_5_years-2025-09-20-06-39-01.jpg)
ಮೀಡಿಯಾ ಅನ್ನೋದು ಸಮಾಜದ ಪ್ರತಿಬಿಂಬ. ಸಮಾಜದಲ್ಲಿ ನಡೀತಿರೋದನ್ನ ಪ್ರತಿಬಿಂಬಿಸೋದೇ ಮೀಡಿಯಾಗಳ ಆದ್ಯ ಕರ್ತವ್ಯ. ಈ ಕರ್ತವ್ಯಕ್ಕೆ ಕಿಂಚಿತ್ತೂ ಚ್ಯುತಿ ಬರದಂತೆ ಪ್ರತಿಕ್ಷಣವೂ ನಿರ್ಭೀತ ಮತ್ತು ನಿಷ್ಪಕ್ಷಪಾತ ವರದಿಯ ಮೂಲಕ ಹೆಸರಾಗಿರುವ ನಿಮ್ಮ ಪ್ರೀತಿಯ ನ್ಯೂಸ್‌ಫಸ್ಟ್‌ಗೆ ಇವತ್ತು ಐದನೇ ವರ್ಷ ಪೂರ್ಣಗೊಂಡ ಸಂಭ್ರಮ. ನ್ಯೂಸ್‌ಫಸ್ಟ್‌ನ ಸಕಲ ವೀಕ್ಷಕರಿಗೂ, ಜಾಹೀರಾತುದಾರರು ಮತ್ತು ಕೇಬಲ್ ಆಪರೇಟರ್‌ಗಳಿಗೂ ಧನ್ಯವಾದಗಳನ್ನ ಹೇಳ್ತಾ ಈ 5ನೇ ವರ್ಷಾಚರಣೆಯನ್ನ ಹೆಮ್ಮೆಯಿಂದ ಆಚರಿಸಿಕೊಳ್ತಿದೆ.
ನಿರ್ಭೀತ ವರದಿಗಾರಿಕೆ
ಯಾರ ಪರವೂ ವಹಿಸದೇ ನಿಮ್ಮ ಪರ ಧ್ವನಿಯಾಗಿರುವ ಅಪ್ಪಟ ಕನ್ನಡ ನ್ಯೂಸ್ ಚಾನೆಲ್ ಅಂದ್ರೆ ಅದು ನ್ಯೂಸ್‌ಫಸ್ಟ್. ತನ್ನದೇ ಆದ ಸ್ವಂತಿಕೆಯಿಂದ, ಸೃಜನಶೀಲ ಚಮತ್ಕಾರಗಳಿಂದ ಬೆರಗುಗೊಳಿಸುವ ರೀತಿ ಶರವೇಗದಲ್ಲಿ ಮುನ್ನುಗ್ಗುತ್ತಿರುವ ನ್ಯೂಸ್‌ಫಸ್ಟ್‌ಗೆ ಇಂದು ಐದನೇ ವರ್ಷದ ಹರ್ಷ.
/filters:format(webp)/newsfirstlive-kannada/media/media_files/2025/09/20/nf_photo-2025-09-20-07-27-51.jpg)
ಕಳೆದ ಐದು ವರ್ಷಗಳಿಂದಲೂ ನಿಷ್ಪಕ್ಷಪಾತ ಸುದ್ದಿಯ ಮೂಲಕ ನಿಮ್ಮ ಮನೆ ತಲುಪುತ್ತಿರುವ ನ್ಯೂಸ್‌ಫಸ್ಟ್, ಜರ್ನಲಿಸಂನ ಉದಾತ್ತ ಧ್ಯೇಯಗಳ ವಿಚಾರದಲ್ಲಿ ಯಾವತ್ತೂ ರಾಜೀಯಾಗಿದ್ದೇ ಇಲ್ಲ. ಎಷ್ಟೇ ಪ್ರಭಾವಿಗಳಿರಲಿ, ಯಾವುದೇ ಪಕ್ಷಗಳಾಗಿರಲಿ, ಯಾವುದೇ ಒತ್ತಡಗಳಿದ್ದಾಗಲೂ ಮಣಿಯದೇ ಮುನ್ನಡೆದು ಬಂದಿರೋದು ನ್ಯೂಸ್‌ಫಸ್ಟ್‌ನ ಹೆಗ್ಗಳಿಕೆ. ಕರ್ನಾಟಕದಲ್ಲಷ್ಟೇ ಅಲ್ಲ, ದೇಶದಲ್ಲೇ ನೂರಾರು ಸುದ್ದಿ ಚಾನೆಲ್‌ಗಳ ನಡುವೆ ಹಲವು ಮಜಲುಗಳನ್ನು ಮುಟ್ಟಿರುವ ನ್ಯೂಸ್‌ಫಸ್ಟ್ ಕ್ರಾಂತಿಯನ್ನೇ ಮಾಡಿರೋದು ಈಗಾಗಲೇ ಸಾಬೀತಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ನೀಡುವ ಪ್ರಶಸ್ತಿಗಳನ್ನ ರಾಶಿ ರಾಶಿಯಾಗಿ ಬಾಚಿದ್ದೇ ಈ ಸಾಧನೆಗೆ ಮತ್ತೊಂದು ಸಾಕ್ಷಿ.
/filters:format(webp)/newsfirstlive-kannada/media/media_files/2025/09/20/nf_5_year_new-2025-09-20-06-43-20.jpg)
ಇನ್ನು ತಂತ್ರಜ್ಞಾನದ ಬಳಕೆ ಮತ್ತು ಕ್ರಿಯೇಟಿವಿಟಿ ವಿಚಾರದಲ್ಲಿ ನ್ಯೂಸ್‌ಫಸ್ಟ್‌ಗೆ ನ್ಯೂಸ್‌ಫಸ್ಟ್ ಮಾತ್ರವೇ ಸಾಟಿ. ಮಾಧ್ಯಮ ಲೋಕದಲ್ಲಿ ನ್ಯೂಸ್‌ಫಸ್ಟ್ ಮೂಡಿಸಿರುವ ಹೆಜ್ಜೆ ಗುರುತುಗಳಿಗೆ ಲೆಕ್ಕವೇ ಇಲ್ಲ. ಹಾಗೇನೇ ಸಾಮಾಜಿಕ ಕಳಕಳಿಯ ವಿಚಾರದಲ್ಲೂ ಯಾವತ್ತೂ ಹಿಂದಿಡಿ ಇರಿಸಿದ್ದೇ ಇಲ್ಲ ಅನ್ನೋದು ನಿಮಗೆ ಚೆನ್ನಾಗಿಯೇ ಗೊತ್ತಿದೆ. ಈ ನಾಡು ನುಡಿ- ನೆಲ-ಜಲದ ವಿಚಾರ ಬಂದಾಗ ಘರ್ಜಿಸಿದ್ದಿದೆ. ಅನ್ಯಾಯ, ಅಕ್ರಮ, ದೌರ್ಜನ್ಯ- ದಬ್ಬಾಳಿಕೆ ವಿಚಾರ ಬಂದಾಗ ಗುಡುಗಿದ್ದೂ ಇದೆ. ಭ್ರಷ್ಟಾಚಾರ- ಅನಾಚಾರ ಅಂತಾ ನಡೆದಾಗ ಸಿಡಿದೆದ್ದಿದ್ದೂ ಇದೆ.
ಇದನ್ನೂ ಓದಿ:ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ
/filters:format(webp)/newsfirstlive-kannada/media/media_files/2025/09/20/nf_5_year-2025-09-20-06-42-12.jpg)
ಪ್ರಭಾವಿಗಳ ಆಟಾಟೋಪದಲ್ಲಿ ಅಮಾಯಕರು ತುಳಿತಕ್ಕೊಳಗಾದಾಗ ನೊಂದವರ ಧ್ವನಿಯಾಗಿದೆ. ವ್ಯವಸ್ಥೆಯ ದಾಷ್ಟ್ಯಕ್ಕೆ ಗುರಿಯಾಗಿ ಮೂಲೆಗುಂಪಾದ ಜನರ ವಿಚಾರದಲ್ಲಿ ಬೆನ್ನಿಗೆ ನಿಂತಿದೆ. ನ್ಯೂಸ್‌ಫಸ್ಟ್‌ನ ಈ ಸಮಾಜಮುಖಿ ಕಾರ್ಯ ಮುಂದೆಯೂ ನಡೆಯುತ್ತಿರುತ್ತೆ. ಈ ಐದನೇ ವರ್ಷಾಚರಣೆ ಸಂದರ್ಭದಲ್ಲಿ ನಮ್ಮ ದಿಟ್ಟ ಹೆಜ್ಜೆಗಳಿಗೆ ನೀವು ಪ್ರೋತ್ಸಾಹಿಸಿದ್ದೀರಿ. ಉತ್ತೇಜನ ನೀಡಿದ್ದೀರಿ.. ಹುರಿದುಂಬಿಸಿದ್ದೀರಿ.. ಈ ಹೆಮ್ಮೆಯ ಹಾದಿಗೆ ಸಾಥ್ ಕೊಟ್ಟ ಸಮಸ್ತ ವೀಕ್ಷಕರಿಗೂ ನ್ಯೂಸ್‌ಫಸ್ಟ್ ಧನ್ಯವಾದಗಳನ್ನ ಹೇಳುತ್ತೆ. ಧನ್ಯವಾದಗಳು ಕರ್ನಾಟಕ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us