/newsfirstlive-kannada/media/media_files/2025/09/20/nf_ravikumar-2025-09-20-15-31-22.jpg)
ಬೆಂಗಳೂರು: ನ್ಯೂಸ್​ ಫಸ್ಟ್​ ಚಾನೆಲ್​ಗೆ ಐದು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಲಾಯಿತು. ಈ ಸಮಾರಂಭದಲ್ಲಿ ನ್ಯೂಸ್​ಫಸ್ಟ್​ ಸಿಇಒ ರವಿಕುಮಾರ್, ಎಡಿಟರ್ ಇನ್ ಚೀಫ್​ ಮಾರುತಿ ಎಸ್​.ಹೆಚ್ ಹಾಗೂ ಜಿಲ್ಲಾ ವರದಿಗಾರರು ಸೇರಿದಂತೆ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ನ್ಯೂಸ್​ ​ಫಸ್ಟ್​ನ 5ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಸಿಇಒ ರವಿಕುಮಾರ್ ಅವರು, ಕಚೇರಿಯ ಸಿಬ್ಬಂದಿ ವರ್ಗದ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ದೇಶದಲ್ಲಿ ಕೆಲವೊಂದು ವಿದ್ಯಮಾನಗಳು ನಡೆದಾಗ ಕಚೇರಿಯಲ್ಲಿ ಹೆಚ್ಚಿನ ಸಮಯ ಕೆಲಸ ಮಾಡಿದ್ದೀರಿ. ನಿಮ್ಮ ಈ ಶ್ರಮದಿಂದಲೇ ನ್ಯೂಸ್​ ಫಸ್ಟ್​ ಉತ್ತಮಮಟ್ಟದಲ್ಲಿದೆ. ಮುಂದೆನೂ ಕೆಲಸದ ಮೇಲಿನ ನಿಮ್ಮ ಈ ಶ್ರಮ, ಶ್ರದ್ಧೆ ಹೀಗೆ ಇರಲಿ ಎಂದು ಹೇಳಿದರು.
ಮೊದಲಿನಿಂದಲೂ ನ್ಯೂಸ್​ ಫಸ್ಟ್​ ವಿಶ್ವಾಸರ್ಹತೆ ಉಳಿಸಿಕೊಂಡು ಬಂದಿದೆ. ಇದನ್ನೇ ನಾನು ಎಲ್ಲಿಗೆ ಹೋದರೂ ಕೇಳುತ್ತಿರುತ್ತಾರೆ. ಇದ್ದದ್ದು ಇದ್ದಾಗೆ ಸುದ್ದಿ ಮಾಡಲಾಗುತ್ತಿದೆ. ಎಲ್ಲ ಸಿಬ್ಬಂದಿ ವರ್ಗ ಇದೇ ವಿಶ್ವಾಸರ್ಹತೆ ಹೀಗೆ ಮುಂದುವರೆಸಿಕೊಂಡು ಹೋಗಬೇಕು. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ನಾವೆಲ್ಲರೂ ಕೈಜೋಡಿಸೋಣ. ಹೀಗೆ ಕೆಲಸ ಮಾಡಿಕೊಂಡು ಹೋಗೋಣ ಎಂದು ಸಿಇಒ ರವಿಕುಮಾರ್ ಅವರು ಹೇಳಿದರು. ಇನ್ನು ಇದೇ ವೇಳೆ ನ್ಯೂಸ್​ಫಸ್ಟ್ ಎಡಿಟರ್ ಇನ್ ಚೀಫ್​ ಮಾರುತಿ ಎಸ್​.ಹೆಚ್ ಅವರು ಸಿಬ್ಬಂದಿ ವರ್ಗದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೀಡಿಯಾ ಅನ್ನೋದು ಸಮಾಜದ ಪ್ರತಿಬಿಂಬ. ಸಮಾಜದಲ್ಲಿ ನಡೀತಿರೋದನ್ನ ಪ್ರತಿಬಿಂಬಿಸೋದೇ ಮೀಡಿಯಾಗಳ ಆದ್ಯ ಕರ್ತವ್ಯ. ಈ ಕರ್ತವ್ಯಕ್ಕೆ ಕಿಂಚಿತ್ತೂ ಚ್ಯುತಿ ಬರದಂತೆ ಪ್ರತಿಕ್ಷಣವೂ ನಿರ್ಭೀತ ಮತ್ತು ನಿಷ್ಪಕ್ಷಪಾತ ವರದಿಯ ಮೂಲಕ ಹೆಸರಾಗಿರುವ ನಿಮ್ಮ ನ್ಯೂಸ್‌ಫಸ್ಟ್‌ಗೆ ಈಗ 5 ವರ್ಷ ತುಂಬಿದ ಸಂಭ್ರಮ. ನ್ಯೂಸ್‌ಫಸ್ಟ್‌ನ ಸಕಲ ವೀಕ್ಷಕರಿಗೂ, ಜಾಹೀರಾತುದಾರರು ಮತ್ತು ಕೇಬಲ್ ಆಪರೇಟರ್‌ಗಳಿಗೂ ಧನ್ಯವಾದಗಳನ್ನು ತಿಳಿಸುತ್ತ 5ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಕೇಕ್ ಕಟ್ ಮಾಡಿ ಆಚರಿಸಲಾಯಿತು.
ಇದನ್ನೂ ಓದಿ:ನಿಮ್ಮ ಪ್ರೀತಿಯ ನ್ಯೂಸ್‌ಫಸ್ಟ್ ವಾಹಿನಿಗೆ ಐದನೇ ವರ್ಷದ ಸಂಭ್ರಮ
ಪ್ರಭಾವಿಗಳ ಆಟಾಟೋಪದಲ್ಲಿ ಅಮಾಯಕರು ತುಳಿತಕ್ಕೊಳಗಾದಾಗ ನೊಂದವರ ಧ್ವನಿಯಾಗಿದೆ. ವ್ಯವಸ್ಥೆಯ ದಾಷ್ಟ್ಯಕ್ಕೆ ಗುರಿಯಾಗಿ ಮೂಲೆ ಗುಂಪಾದ ಜನರ ವಿಚಾರದಲ್ಲಿ ಬೆನ್ನಿಗೆ ನಿಂತಿದೆ. ನ್ಯೂಸ್‌ಫಸ್ಟ್‌ನ ಈ ಸಮಾಜಮುಖಿ ಕಾರ್ಯ ಮುಂದೆಯೂ ನಡೆಯುತ್ತಿರುತ್ತೆ. ಈ ಐದನೇ ವರ್ಷಾಚರಣೆ ಸಂದರ್ಭದಲ್ಲಿ ನಮ್ಮ ದಿಟ್ಟ ಹೆಜ್ಜೆಗಳಿಗೆ ನೀವು ಪ್ರೋತ್ಸಾಹಿಸಿದ್ದೀರಿ.. ಉತ್ತೇಜನ ನೀಡಿದ್ದೀರಿ.. ಹುರಿದುಂಬಿಸಿದ್ದೀರಿ.. ಈ ಹೆಮ್ಮೆಯ ಹಾದಿಗೆ ಸಾಥ್ ಕೊಟ್ಟ ಸಮಸ್ತ ವೀಕ್ಷಕರಿಗೂ ನ್ಯೂಸ್‌ಫಸ್ಟ್ ಧನ್ಯವಾದಗಳನ್ನ ಹೇಳುತ್ತೆ. ಧನ್ಯವಾದಗಳು ಕರ್ನಾಟಕ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ