/newsfirstlive-kannada/media/media_files/2025/09/26/cm_siddaramaiah-9-2025-09-26-18-41-09.jpg)
ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಟ್ಟಿ ಬಿಡುಗಡೆ ಬಳಿಕ ಗೊಂದಲ ಏರ್ಪಟ್ಟಿತ್ತು. ಎಐಸಿಸಿ ರವಾನಿಸಿದ್ದ ಈ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೊಂಚ ಮಾರ್ಪಾಡು ಮಾಡಿ ಅಧಿಕೃತ ಮುದ್ರೆ ಹಾಕಿದ್ದಾರೆ.
ಎಐಸಿಸಿ ಇಂದ ಒಟ್ಟು 39 ಹೆಸರಿನ ಬದಲಿಗೆ ಸಿಎಂ ಸಿದ್ದರಾಮಯ್ಯ ಅವರು 34 ಮಂದಿಗೆ ಅಧ್ಯಕ್ಷರ ಪಟ್ಟಿಗೆ ಅಂಕಿತ ಹಾಕಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ಪಟ್ಟಿ ರವಾನೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಸ್ಥಾನದ ಗೊಂದಲ ವಿಚಾರಕ್ಕೆ ಸಂಬಂಧ ಪಟ್ಟಂತೆ ರಾಜೂ ಕಾಗೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.
ಎಐಸಿಸಿ ರವಾನಿಸಿದ್ದ ಪಟ್ಟಿಯಲ್ಲಿ ಆಗಿದ್ದ ಗೊಂದಲವನ್ನು ಸಿಎಂ ಸಿದ್ದರಾಮಯ್ಯ ಅವರು ಸರಿಪಡಿಸಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರಾಗಿ ಅರುಣ್ ಕುಮಾರ್ ಪಾಟೀಲ್ ನೇಮಕವಾಗಿದ್ದಾರೆ. ಆದರೆ ಇದು ಎಐಸಿಸಿ ಪಟ್ಟಿಯಲ್ಲಿ ನೀಲಕಂಠ ಮುಳಗೆಗೆ ಹಂಚಿಕೆಯಾಗಿತ್ತು. ಈಗ ನೀಲಕಂಠ ಬದಲು ಅರುಣ್ ಕುಮಾರ್ ಪಾಟೀಲ್​ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಪಟ್ಟ ನೀಡಲಾಗಿದೆ.
ಮೈಸೂರು ಪೇಂಟ್ಸ್, ವಾರ್ನಿಶ್ ಲಿಮಿಟೆಡ್ ನಿಗಮಕ್ಕೆ ಹೆಚ್. ಡಿ ಗಣೇಶ್, ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕವಾಗಿದ್ದಾರೆ. ಆದರೆ ಎಐಸಿಸಿ ರವಾನೆ ಮಾಡಿರುವ ಪಟ್ಟಿಯಲ್ಲಿ ಹೆಚ್.ಡಿ ಗಣೇಶ್ ಹಾಗೂ ನಿಕೇತ್ ರಾಜ್ ಅವರ ಹೆಸರುಗಳು ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ