/newsfirstlive-kannada/media/media_files/2025/09/14/water_bng-2025-09-14-22-22-25.jpg)
ಬೆಂಗಳೂರು: ಉದ್ಯಾನ ನಗರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕಾವೇರಿ ನೀರು ಲಭ್ಯ ಇರುವುದಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಾರ್ವಜನಿಕರಿಗೆ ತಿಳಿಸಿದೆ.
ಬೆಂಗಳೂರಿನಲ್ಲಿ ಇವತ್ತಿನಿಂದ ಮೂರು ದಿನಗಳ ಕಾವೇರಿ ನೀರು ಬಂದ್ ಆಗಿರಲಿದೆ. ಹೀಗಾಗಿ ಸಾರ್ವಜನಿಕರು ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಹಾಗೂ 17 ರಂದು ಕಾವೇರಿ ನೀರು ಪೂರೈಕೆ ಸ್ಥಗಿತ ಮಾಡಲಾಗಿರುತ್ತದೆ. ಹೀಗಾಗಿ ಅಗತ್ಯ ನೀರು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಜಲಮಂಡಳಿ ಮನವಿ ಮಾಡಿದೆ.
ಇದನ್ನೂ ಓದಿ:ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಯಾಕೆ ಬೇರೆ ಧರ್ಮಕ್ಕೆ ಮತಾಂತರ ಆಗ್ತಿದ್ರು? -CM ಸಿದ್ದರಾಮಯ್ಯ
ಎಲ್ಲೆಲ್ಲಿ ಯಾವಾಗ ನೀರು ಬಂದ್..?
ಕಾವೇರಿ 5ನೇ ಹಂತ- ಸೆಪ್ಟೆಂಬರ್ 15ರ ಬೆಳಗ್ಗೆ 1 ರಿಂದ ಸೆಪ್ಟೆಂಬರ್ 17ರ ಮಧ್ಯಾಹ್ನ 1ರವರೆಗೆ ನೀರು ಲಭ್ಯ ಇರುವುದಿಲ್ಲ. ಒಟ್ಟು 60 ಗಂಟೆ ನೀರು ಸ್ಥಗಿತವಾಗಲಿದೆ. ಕಾವೇರಿ ಹಂತ 1, 2, 3, 4ರಲ್ಲಿ ಸೆಪ್ಟೆಂಬರ್ 16ರ ಬೆಳಗ್ಗೆ 6 ರಿಂದ ಸೆಪ್ಟೆಂಬರ್ 17ರ ಬೆಳಗ್ಗೆ 6ರ ವರೆಗೆ ಒಟ್ಟು 24 ಗಂಟೆ ನೀರು ಸ್ಥಗಿತವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ