/newsfirstlive-kannada/media/media_files/2025/10/08/r_ashok_car-2025-10-08-22-36-55.jpg)
ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಬೆಂಗಾವಲು ವಾಹನ ಚಾಲಕ ತನ್ನಿಂದ ತಾನೇ ಜೀವ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಬಾಪೂಜಿನಗರದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರ ಭೇಟಿ ನೀಟಿ ಪರಿಸೀಲನೆ ನಡೆಸಿದ್ದಾರೆ.
ಮೂಲತಹ ಕಲಬುರಗಿ ಜಿಲ್ಲೆಯವರಾದ ಶರಣಪ್ಪ (33) ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ. ಇವರಿಗೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಶರಣಪ್ಪ ಅವರು ಹೀಗೆ ಮಾಡಿಕೊಂಡಿರುವುದಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ.
ಶರಣಪ್ಪ ಕಳೆದ ಎರಡೂವರೆ ವರ್ಷದಿಂದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಬೆಂಗಾವಲು ವಾಹನದ ಚಾಲಕರಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೀವ ಕಳೆದುಕೊಂಡಿರುವ ಅನುಮಾನ ವ್ಯಕ್ತಪಡಿಸಲಾಗಿದೆ. ಶರಣಪ್ಪ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಅವರ ಕುಟುಂಬಕ್ಕೆ ಧೈರ್ಯ ಹೇಳಲಾಗಿದೆ. ನನ್ನ ಬಳಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ಒಂದು ದಿನನೂ ನನ್ನ ಬಳಿ ಮಾತನಾಡಿಲ್ಲ. ಬಹಳ ಸೈಲೆಂಟ್ ವ್ಯಕ್ತಿ. ಯಾವುದೇ ದುರಭ್ಯಾಸ ಇರಲಿಲ್ಲ. ಅವರ ಪತ್ನಿ ಸಂಚಾರಿ ಪೊಲೀಸ್ ಕಾನ್​ಸ್ಟೆ ಬಲ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮನೆಯಲ್ಲೂ ಚೆನ್ನಾಗಿ ಇದ್ದರು. ಯಾವುದೇ ರೀತಿ ನನಗೆ ತಿಳಿದ ಹಾಗೇ ಆರ್ಥಿಕ ಸಮಸ್ಯೆ ಇರಲಿಲ್ಲ. ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾನೆ ಎನ್ನುವುದು ಗೊತ್ತಿಲ್ಲ. ಬಹಳ ಇನೋಸೆಂಟ್ ಮನುಷ್ಯ. ಇಂದು ಸಂಜೆ 6 ಗಂಟೆಗೆ ಹೀಗೆ ಮಾಡಿಕೊಂಡಿದ್ದಾನೆ. ಬಾಮೈದಾ ಬಂದು ನೋಡಿದ್ದಾನೆ. ಬಾಗಿಲು ಕೂಡ ಹಾಕಿರಲಿಲ್ಲ. ನಿನ್ನೆ ಡ್ಯೂಟಿಗೆ ಬಂದಿರಲಿಲ್ಲ. ಮೊನ್ನೆ ನೈಸ್ ರೋಡ್​​ವರೆಗೂ ನನ್ನ ಬಿಟ್ಟು ಸೆಲ್ಯೂಟ್ ಮಾಡಿ ಹೋಗಿದ್ದನು. ನಾನು ಮಂತ್ರಾಲಯಕ್ಕೆ ಹೋಗಬೇಕು ಅಂತ ಹೇಳಿ ಬೇರೆಯವರಿಗೆ ಹೇಳಿ ಹೋಗಿದ್ದಾನೆ. ಆದರೆ ಈಗ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಆರ್ ಅಶೋಕ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ