/newsfirstlive-kannada/media/media_files/2025/08/01/tumakuru-nursing-student-story-2025-08-01-10-03-49.jpg)
ಮೃತ ಭಾವನಾ
ಆತ ಓದುಬರಹ ತಿಳಿಯದ ಮುಗ್ದ.. ಹೇಳಿ ಕೇಳಿ ದಿನಗೂಲಿ.. ಗಂಡ-ಹೆಂಡತಿ ಇರೋದ್ರಲ್ಲೇ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸ್ತಿದ್ರು. ತಂದೆ ಕೂಲಿನಾಲಿ ಮಾಡಿ ಮೈಸೂರಿನಲ್ಲಿ ನರ್ಸಿಂಗ್ ಮಾಡ್ತಿದ್ದ ಮಗಳ ಖರ್ಚಿಗೆ ಫೊನ್ ಪೇ ಮೂಲಕ ನೆರೆಹೊರೆಯವರ ಬಳಿ ಹೋಗಿ ಆಗಾಗ ಹಣ ಹಾಕಿಸ್ತಿದ್ರು. ಇದೇ ಆತನ ಮುದ್ದಿನ ಮಗಳ ಜೀವಕ್ಕೆ ಮುಳುವಾಗಿದೆ. ನೀವು ಕೂಡ ನಿಮ್ಮ ಹೆಣ್ಣು ಮಕ್ಕಳ ಮೊಬೈಲ್ ನಂಬರನ್ನ ಬೇರೆಯರಿಗೆ ಕೊಟ್ಟು ಹಣ ಹಾಕಿಸ್ತಿದ್ದರೆ ಈ ಸ್ಟೋರಿ ಒಮ್ಮೆ ಓದಿ..
ಹೌದು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಂಬರ್ ದುರ್ಬಳಕೆ ಅನ್ನೋದು ಹೆಚ್ಚಾಗ್ತಿದೆ. ಹೆಣ್ಮಕ್ಕಳ ನಂಬರ್ ಸಿಕ್ಕಿದ್ರಂತೂ ಅಂದ ಚೆಂದ ವರ್ಣಿಸಿ ಪ್ರೀತಿಸುವಂತೆ ಸತಾಯಿಸುತ್ತಾರೆ. ಒಪ್ಪದಿದ್ದಾಗ ಕೊಲೆ ಮಾಡಿದ ಬಗ್ಗೆನೂ ನಾವು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬ ತಂದೆ ಹಾಸ್ಟೆಲ್‌ನಲ್ಲಿದ್ದು, ನರ್ಸಿಂಗ್ ಓದುತ್ತಿದ್ದ ತನ್ನ ಮಗಳ ಖರ್ಚಿಗೆ ಫೋನ್ ಪೇ ಮಾಡುವಂತೆ ತನ್ನ ಮಾಲೀಕನ ಮಗನಿಗೆ ಹಣ ಕೊಟ್ಟು, ಮಗಳ ಮೊಬೈಲ್ ನಂಬರ್ ಕೊಟ್ಟಿದ್ದ. ಇಲ್ಲಿಂದ್ಲೇ ಆ ಯುವತಿಗೆ ನೋವಿನ ದಿನಗಳು ಶುರುವಾಗಿದೆ.
ಹೆಣ್ಮಕ್ಕಳ ನಂ. ಕೊಟ್ಟು ಹಣ ಹಾಕಿಸೋ ಮುನ್ನ ಎಚ್ಚರ!
ಅಂದ್ಹಾಗೆ ಯುವತಿ ಹೆಸರು ಭಾವನಾ. ಕೇವಲ 22 ವರ್ಷ.. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗ್ಯಾರಹಳ್ಳಿ ಗ್ರಾಮದ ನಿವಾಸಿ ಆಗಿದ್ದಳು.. ತಂದೆ ತಾಯಿಯ ಕನಸಿನಂತೆ ಓದಿ.. ಹೆತ್ತರವರನ್ನ ಸಾಕಬೇಕು ಅನ್ನೋ ಕನಸು. ಆ ಕಾರಣಕ್ಕೆ ಭಾವನಾ ಮೈಸೂರಿನಲ್ಲಿ ನರ್ಸಿಂಗ್ ಮಾಡ್ತಿದ್ದಳು. ಆದ್ರೆ, ಕೀಚಕನ ಪುಂಡಾಟಕ್ಕೆ ಬಲಿಯಾಗಿದ್ದಾಳೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದ ತನಿಖೆಗೆ ಮೇಜರ್ ಟ್ವಿಸ್ಟ್.. ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ರಹಸ್ಯ
ಫೋನ್ ಪೇ ಕೀಚಕ!
ಪೋಷಕರು ತಮಗೆ ಅರಿಯದೇ ಕೈಗೆ ಹಣ ಕೊಟ್ಟು.. ಫೋನ್ ಪೇ ಮಾಡು.. ಅಂತ ತಾವು ಕೆಲಸ ಮಾಡ್ತಿದ್ದ ಮಾಲೀಕನ ಮಗನ ಕೈಗೆ ಫೋನ್ ನಂಬರ್ ಕೊಟ್ಟಿದ್ರು. ಭಾವನಾ ಫೋನ್ ಪೇ ನಂಬರ್ ಪಡೆದು ಹಣ ಹಾಕಿದ ಪಾಪಿ ಆಕೆಗೆ ಪ್ರೀತಿಸುವಂತೆ ಕಿರುಕುಳ ನೀಡೋದಕ್ಕೆ ಆರಂಭಿಸಿದ್ದ. ಇಲ್ಲದಿದ್ದರೇ ಜೀವ ತೆಗೆದುಕೊಳ್ಳೋದಾಗಿ ಬೆದರಿಕೆ ಹಾಕಿದ್ದ.. ಕೀಚಕನ ಕಿರುಕುಳ ಹೆಚ್ಚಾಗ್ತಿದ್ದಂತೆ ಬೇಸತ್ತ ಭಾವನ ನೆಲಮಂಗಲದ ತನ್ನ ಚಿಕ್ಕಮ್ಮನ ಮನೆಯಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ನವೀನ್ ಹಿಂಸೆಗೆ 15 ದಿನಗಳ ಹಿಂದೆ ಮಾತ್ರೆಗಳನ್ನ ನುಂಗಿದ್ದಳಂತೆ. ನಂತರ ದೊಡ್ಡವರೆಲ್ಲ ರಾಜಿ ಪಂಚಾಯ್ತಿ ಮಾಡಿ.. ನವೀನಂಗೆ ಬುದ್ದಿವಾದ ಹೇಳಿ.. ನೆಲಮಂಗಲದ ಚಿಕ್ಕಮ್ಮನ ಮನೆಗೆ ಭಾವನಾಳನ್ನ ಕಳುಹಿಸಿದ್ರು. ಆದ್ರೂ ಬಿಡದೆ ನವೀನ್ ಹಿಂಸೆ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಹೆತ್ತ ಕಂದಮ್ಮನ ಹುಡುಕುತ್ತ 150 ಕಿಮೀ ಅಲೆದಾಟ.. ಮೃತ ಮುದ್ದು ಮರಿಗಾಗಿ ತಾಯಿ ಮೂಕ ರೋಧನೆ..
ಓದಿ ತನ್ನ ಕಾಲಮೇಲೆ ತಾನು ನಿಂತು ಕೊಳ್ಳಬೇಕು ಅನ್ನೋ ಕನಸು ಕಂಡಿದ್ದ ಭಾವನಾಳ ಬದುಕಿನಲ್ಲಿ ದುರಂತ ನಡೆದಿದೆ. ಭಾವನಾಳ ಸಾವಿಗೆ ನ್ಯಾಯ ಸಿಗಬೇಕಿದೆ. ಇನ್ನಾದ್ರೂ ಪೋಷಕರೇ ಹೊರಗಡೆ ಇದ್ದು ಓದುತ್ತಿರುವ ನಿಮ್ಮ ಹೆಣ್ಣು ಮಕ್ಕಳ ಮೊಬೈಲ್ ನಂಬರನ್ನ ಬೇರೆಯರಿಗೆ ಕೊಡುವ ಮುನ್ನಾ ಎಚ್ಚರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ